Sunday, June 4, 2023
HomeEntertainmentದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

 

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನಬಹುದು. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಬ್ಬ ನಾಯಕನಟನಾಗಿದ್ದರೂ ಕೂಡ ಇಂದು ಜನರಿಂದ ಅವರಿಗೆ ಸಿಗುತ್ತಿರುವ ಪ್ರೀತಿ ಯಾವ ಜನನಾಯಕನಿಗಿಂತಲೂ ಕಡಿಮೆ ಇಲ್ಲ. ಕನ್ನಡ ಕಲಾದೇವಿ ಆರಾಧಕನಾಗಿ ಅಭಿನಯವನ್ನೇ ವೃತ್ತಿಯಾಗಿಸಿಕೊಂಡಿರುವ ದರ್ಶನ್ ಅವರಿಗೆ ಬೇರೆ ಎಲ್ಲಾ ಸ್ಟಾರ್ ಗಳಿಗೂ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ.

ದರ್ಶನ್ ಮತ್ತು ಅವರ ಅಭಿಮಾನಿಗಳ ನಂಟು ಎಷ್ಟು ಗಟ್ಟಿಯಾಗಿದೆ ಎಂದರೆ ದರ್ಶನ್ ಅವರು ಅಭಿಮಾನಿಗಳನ್ನೇ ಸೆಲೆಬ್ರಿಟಿಗಳು ಎಂದು ಕರೆದು ಅವರ ಹೆಸರನ್ನು ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಯಾರಿಗೂ ಕಡಿಮೆ ಇಲ್ಲ ದರ್ಶನ್ ಅವರ ವೈಯಕ್ತಿಕ ಬದುಕಿನ ಬಗ್ಗೆ ವಿವಾದಗಳಿದ್ದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವರು ಕಡೆ ತನಕ ತಾವು ಡಿ ಬಾಸ್ ಗೆ ಮಾತ್ರ ಅಭಿಮಾನಿಗಳು ಎನ್ನುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಿನಿಮಾಗಳ ಜಾಹಿರಾತುಗಳಲ್ಲೂ ಕೂಡ ನೋಡಿರುತ್ತಾರೆ. ಇತ್ತೀಚೆಗೆ ಅವರನ್ನು ರಾಮರಾಜ್ ಬಟ್ಟೆಗಳ ಜಾಹೀರಾತುಗಳಲ್ಲಿ ನೋಡಿದ್ದೇವೆ. ಒಬ್ಬ ಹೀರೋಗೆ ಈ ಮಟ್ಟದ ಅಭಿಮಾನಿಗಳು ಇದ್ದಾಗ ಅವರನ್ನು ಹಲವು ಕಂಪನಿಗಳು ತಮ್ಮ ಕಂಪನಿ ಪ್ರಾಡಕ್ಟನ್ನು ಪ್ರಚಾರ ಮಾಡಿಕೊಡಿ ಎಂದು ಕೇಳಿಕೊಳ್ಳುವುದು ಮಾಮೂಲು. ಈಗಾಗಲೇ ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ಶಿವಣ್ಣ ಮತ್ತು ಯಶ್ ಮುಂತಾದ ನಾಯಕರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅದೇ ರೀತಿ ದರ್ಶನ್ ಅವರನ್ನು ಸಹ ಒಂದಲ್ಲ ಒಂದು ಕಂಪನಿಗಳು ಅಪ್ರೋಚ್ ಮಾಡುತ್ತಲೇ ಇರುತ್ತವೆ. ಹಲವಾರು ಕಂಪನಿಗಳು ತಮ್ಮ ಬ್ರಾಂಡಿಗೆ ಅಂಬಾಸಿಡರ್ ಆಗುವಂತೆ ಕೂಡ ಆಮಿಷ ಒಡ್ಡುತ್ತಿವೆ. ಆದರೆ ಈ ವಿಚಾರದಲ್ಲಿ ಎಲ್ಲರಿಗಿಂತ ದಚ್ಚು ಸ್ವಲ್ಪ ಡಿಫ್ರೆಂಟ್ ಎಂದೇ ಹೇಳಬಹುದು. ದರ್ಶನ್ ಅವರು ಜಾಹೀರಾತುಗಳ ವಿಷಯ ಬಂದಾಗ ಎಲ್ಲವನ್ನು ಒಪ್ಪಿಕೊಂಡು ಬಿಡುವುದಿಲ್ಲ. ಇದುವರೆಗೆ 55 ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಅಭಿಮಾನ ಗಿಟ್ಟಿಸಿಕೊಂಡಿರುವ ಇವರು ಸುಖಾ ಸುಮ್ಮನೆ ಯಾವುದನ್ನೂ ಪ್ರಚಾರ ಮಾಡಿ ಅಭಿಮಾನಿಗಳ ದಿಕ್ಕು ತಪ್ಪಿಸುವುದಿಲ್ಲ.

ಅಳೆದು ತೂಗಿ ಜಾಹಿರಾತುಗಳನ್ನು ಆಯ್ದುಕೊಳ್ಳುತ್ತಾರೆ. ಹಾಗಾಗಿ ಇದುವರೆಗೆ ನಾವು ಅವರನ್ನು ರಾಮರಾಜ್ ಬಟ್ಟೆ ಜಾಹಿರಾತುಗಳಲ್ಲಿ ಮಾತ್ರ ನೋಡಿದ್ದೇವೆ. ಪರ್ಸನಾಲಿಟಿ ಮತ್ತು ಲುಕ್ ಅಲ್ಲಿ ಅವರು ಯಾವುದೇ ಮಾಡೆಲ್ ಗಿಂತಲೂ ಕಡಿಮೆ ಇಲ್ಲ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವರು ಜಾಹಿರಾತುಗಳಲ್ಲೂ ಅಭಿನಯಿಸಿದ್ದಾರೆ ಮತ್ತು ಕಿರುತೆರೆ ಕಲಾವಿದನಾಗಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಈಗ ಇಷ್ಟು ದೊಡ್ಡ ಮಟ್ಟದ ಹೆಸರು ಪಡೆದ ಮೇಲೆ ಅವರು ಯಾವುದನ್ನು ಪ್ರಮೋಟ್ ಮಾಡುತ್ತಾರೆ ಎನ್ನುವುದು ದೊಡ್ಡ ಪರಿಣಾಮವನ್ನು ಬೀರುತ್ತದೆ ಆ ಕಾರಣಕ್ಕಾಗಿ ಅವರು ಈ ವಿಚಾರದಲ್ಲಿ ಬಹಳ ಚೂಸಿ ಆಗಿದ್ದಾರೆ.

ಇದರೊಡನೆ ಅವರು ಜಾಹಿರಾತುಗಳಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು ಎನ್ನುವ ಚರ್ಚೆ ಜೋರಾಗಿದೆ. ಒಂದು ಮಾಹಿತಿಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 3-4 ಕೋಟಿಗಳನ್ನು ಒಂದು ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುತ್ತಾರೆ ಎನ್ನುವ ಅಂಶವು ಕೂಡ ಹೊರಬಿದ್ದಿದೆ. ಇದರ ಸತ್ಯಾನುಸತ್ಯತೆ ಎಷ್ಟು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ಇಂತಹದೊಂದು ಸುದ್ದಿ ಹರಿದಾಡುತ್ತಿರುವುದಂತೂ ನಿಜ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳುವ ಪ್ರತಿಯೊಂದು ಮಾತಿಗೂ ಕೂಡ ಒಂದು ತೂಕ ಇರುತ್ತದೆ. ಇನ್ನು ಅವರ ಕಾಣಿಸಿಕೊಂಡಿರುವ ಜಾಹೀರಾತಿನ ವ್ಯಾಪಾರ ಕುಲಾಯಿಸುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.