ನಟ ದುನಿಯಾ ವಿಜಯ್ ಅವರು 2006ನೇ ಇಸ್ವಿಯಲ್ಲಿ ದುನಿಯಾ ಎನ್ನುವ ಕನ್ನಡದ ಮಾಸ್ ಸಿನಿಮಾದ ಮೂಲಕ ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಕ್ಕೂ ಮುಂಚೆ ರಂಗ ಎಸೆಸೆಲ್ಸಿ ಹಾಗೂ ಜೋಗಿ, ಖುಷಿ ಮುಂತಾದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಅವರನ್ನು ಜನರು ಗುರುತಿಸುವಂತೆ ಮಾಡಿದ್ದು ಅವರ ಮೊದಲ ಸಿನಿಮಾ ದುನಿಯಾ. ಈ ಸಿನಿಮಾದ ಸಕ್ಸಸ್ ನಂತರ ಅವರ ಹೆಸರು ದುನಿಯಾ ವಿಜಯ್ ಎಂದು ಬದಲಾಯಿತು ಎಂದು ಹೇಳಬಹುದು ಅಷ್ಟರಮಟ್ಟಿಗೆ ಈ ಸಿನಿಮಾ ಅವರಿಗೆ ಕನ್ನಡ ಚಲನಚಿತ್ರ ರಂಗದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟಿತ್ತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಡೈರೆಕ್ಟರ್ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ದುನಿಯಾ ಸಿನಿಮಾ ರೌಡಿಸಂ ಕುರಿತಾದ ಸಿನಿಮಾ ಆಗಿದ್ದರೂ ಕೂಡ ಜೊತೆಜೊತೆಗೆ ದುನಿಯಾ ವಿಜಯ್ ಹಾಗೂ ರಶ್ಮಿ ಅವರ ಅದ್ಭುತವಾದ ಕೆಮಿಸ್ಟ್ರಿ ಸಿನಿಮಾ ಕ್ಲಿಕ್ ಆಗಲು ಕಾರಣವಾಗಿತ್ತು ಎಂದು ಹೇಳಬಹುದು. ದುನಿಯಾ ಸಿನಿಮಾದಲ್ಲಿ ತಮ್ಮ ಅದ್ಭುತವಾದ ಅಭಿನಯದಿಂದ ಎಲ್ಲರ ಮನಗೆದ್ದಿದ್ದ ದುನಿಯಾ ವಿಜಯ್ ಅವರು ಈ ಮೊದಲು ಕನ್ನಡ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೂಡ ಕೆಲಸ ಮಾಡಿದ್ದರು.

ನಂತರ ಅಭಿನಯದಲ್ಲಿ ಆಸಕ್ತಿ ತಿರುಗಿಸಿಕೊಂಡ ದುನಿಯಾ ವಿಜಯ್ ಅವರು ತಾವು ಕೂಡ ನಟನಾಗುವ ನಿರ್ಧಾರ ಮಾಡಿದರು. ಅವರ ಅದೃಷ್ಟ ಪರೀಕ್ಷೆಯು ಒಳ್ಳೆಯ ಪ್ರತಿಫಲವನ್ನು ತಂದುಕೊಟ್ಟಿತ್ತು. ದುನಿಯಾ ಸಿನಿಮಾದ ವಿಜಯ್ ಅವರ ಅದ್ಭುತವಾದ ಅಭಿನಯ ಹಾಗೂ ತಾಯಿಯ ಸೆಂಟಿಮೆಂಟ್ ಮತ್ತು ಸೂಪರ್ ಹಿಟ್ ಹಾಡುಗಳ ಮೂಲಕ ಜೊತೆಗೆ ರಂಗಾಯಣ ರಘು ಅವರ ಕಾಮಿಡಿ ಈ ಸಿನಿಮಾದ ಸ್ಟ್ರೆಂತ್ ಆಗಿತ್ತು ಎಂದೇ ಹೇಳಬಹುದು. ಲೂಸ್ ಮಾದ ಯೋಗಿ ದುನಿಯಾ ವಿಜಯ್ ದುನಿಯಾ ರಶ್ಮಿ ಇನ್ನು ಮುಂತಾದ ಅನೇಕರಿಗೆ ಈ ಸಿನಿಮಾವು ಮೊದಲ ಪ್ರಯತ್ನವಾಗಿತ್ತು. ತಮ್ಮ ಮೊದಲ ಸಿನಿಮಾದಲ್ಲಿ ಅದ್ಭುತ ಅಭಿನಯದ ಮೂಲಕ ಜನಮನವನ್ನು ಇವರು ಗೆದ್ದರು. ಇದಾದ ನಂತರ ದುನಿಯಾ ವಿಜಯ್ ಅವರು ಮಾಸ್ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜರಾಸಂಧ, ಭೀಮಾತೀರದಲ್ಲಿ, ಬ್ಲಾಕ್ ಕೋಬ್ರಾ, ಸ್ಲಂಬಾಲ, ಜಂಗ್ಲಿ, ರಜನಿಕಾಂತ, ಶಂಕರ್ ಐಪಿಎಸ್, ಜಾಕ್ಸನ್, ಕರಿಚಿರತೆ ಮಾಸ್ತಿಗುಡಿ ಸಲಗ ಇನ್ನು ಮುಂತಾದ ಮಾಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಚಂಡ ತಾಕತ್ ವೀರಬಾಹು ಕನಕ ಸಿಂಹಾದ್ರಿ ಜಾನಿ ಮೇರಾ ನಾಮ್ ದೇವ್ರು ಯುಗಾ ಅವ್ವ ಇನ್ನು ಮುಂತಾದ ಸಿನಿಮಾಗಳನ್ನು ಕೂಡ ಅಭಿನಯಿಸಿ ಕನ್ನಡಿಗರ ಮನಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.

ಇದರ ಜೊತೆಗೆ ದುನಿಯಾ ವಿಜಯ್ ಅವರು ಈಗ ಕನ್ನಡ ಸಿನಿಮಾರಂಗದ ನಾಯಕ ಮಾತ್ರವಲ್ಲದೆ ನಿರ್ಮಾಪಕ ಕೂಡ ಆಗಿದ್ದಾರೆ. ಇಷ್ಟೆಲ್ಲ ಯಶಸ್ವಿಯಾಗಿರುವ ಈ ನಾಯಕನ ವೈಯುಕ್ತಿಕ ಬದುಕು ಮಾತ್ರ ಯಾವಾಗಲು ವಿವಾದದಿಂದ ಕೂಡಿರುತ್ತದೆ. ದುನಿಯಾ ವಿಜಯ್ ಅವರು ನಾಗರತ್ನ ಅವರನ್ನು ಮೊದಲು ವಿವಾಹವಾಗಿದ್ದರು. ಇವರಿಬ್ಬರಿಗೆ ಸಾಮ್ರಾಟ್ ವಿಜಯ್ ಹಾಗೂ ಮೋನಿಷ ವಿಜಯ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇದಾದನಂತರ ಇವರ ವಿವಾಹ ಜೀವನದಲ್ಲಿ ಬಿರುಕು ಏರ್ಪಟ್ಟು ಅವರಿಬ್ಬರೂ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದಿದ್ದರು ಆದರೆ ಕೊನೆಯ ಹಂತದಲ್ಲಿ ಸಿನಿಮಾರಂಗದ ಹಿರಿಯರ ಮಾತುಗಳಿಗೆ ಬೆಲೆಕೊಟ್ಟು ದುನಿಯಾ ವಿಜಯ್ ಅವರು ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು. ಆದರೆ 2016 ನೇ ಇಸವಿಯಲ್ಲಿ ಕೀರ್ತನ ಎನ್ನುವ ನಟಿಯನ್ನು ವಿವಾಹವಾದರು. ಇದಾದ ಮೇಲೆ ಮೊದಲ ಪತ್ನಿಯಿಂದ ಹಲವಾರು ಬಾರಿ ದೂರಿಗೆ ಒಳಗಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಬೇಕಾಯಿತು. ಇಷ್ಟಕ್ಕೆ ನಿಲ್ಲದ ಇವರಿಬ್ಬರ ಗಲಾಟೆಯು ನಂತರ ಮಗಳ ವಿಚಾರದ ವರೆಗೂ ಮುಂದುವರೆದು ದುನಿಯಾ ವಿಜಯ್ ಅವರ ಮಗಳಾದ ಮೋನಿಷಾ ವಿಜಯ್ ಅವರು ಕೀರ್ತನ ಅವರ ಮನೆಗೆ ಬಂದು ಗಲಾಟೆ ಕೂಡ ಮಾಡಿ ಹೋಗಿದ್ದರು ಅಲ್ಲದೆ ಅವರ ಪತ್ನಿಯಾದ ಅವರ ಮನೆ ಕಡೆಯಿಂದ ಕೀರ್ತನ ಅವರ ಮೇಲೆ ಹಲವಾರು ಬಾರಿ ಹಲ್ಲೆಗಳು ನಡೆದಿದ್ದವು.

ಇಷ್ಟಾದರೂ ಕೂಡ ಕೀರ್ತನ ವಿಜಯ್ ಅವರು ದುನಿಯಾ ವಿಜಯ್ ಅವರ ಜೊತೆಯೇ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ ಹಾಗೂ ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಕೀರ್ತನ ವಿಜಯ್ ಅವರು ಕೂಡ ಕನ್ನಡ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಕಿಚ್ಚ ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ ಎನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದರು. ಇದಲ್ಲದೆ ಹಲವಾರು ಸಿನಿಮಾಗಳಲ್ಲಿ ಮತ್ತು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹಾಗೂ ಅನೇಕ ಜಾಹೀರಾತುಗಳಲ್ಲಿ ಕೂಡ ನಟಿಸಿರುವ ಕೀರ್ತನ ವಿಜಯ್ ಅವರು ದುನಿಯಾ ವಿಜಯ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಇವರಿಬ್ಬರ ವಿವಾಹವಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಬಾರಿ ಒಂದಲ್ಲ ಒಂದು ವಿವಾದದ ಮೂಲಕ ಈ ಜೋಡಿ ಸುದ್ದಿಯಾಗುತ್ತಲೇ ಇದೆ. ಅದೇ ರೀತಿಯಾಗಿ ಈಗ ಮತ್ತೊಮ್ಮೆ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಸುದ್ದಿ ಆಗುತ್ತಿದೆ. ದುನಿಯಾ ವಿಜಯ್ ಅವರು ಕೀರ್ತನ ಅವರಿಗಿಂತ 16ವರ್ಷ ದೊಡ್ಡವರಾಗಿದ್ದಾರೆ ಸದ್ಯಕ್ಕೆ ದುನಿಯಾ ವಿಜಯ್ ಅವರಿಗೆ 48 ವರ್ಷ ವಯಸ್ಸಾಗಿದ್ದು ಕೀರ್ತನ ವಿಜಯ್ ಅವರಿಗೆ ಈಗ 32 ವರ್ಷ ವಯಸ್ಸಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.