ಬಣ್ಣದ ಲೋಕದಲ್ಲಿ ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಅವರು ಚಿತ್ರರಂಗದ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದವರು. ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಮೊಮ್ಮಗನಾದ ವಿನಯ್ ರಾಜ್ ಕುಮಾರ್ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ. ಇವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿ ಬಾಲ ನಟ ಎನಿಸಿಕೊಂಡಿದ್ದಾರೆ ಇವರು ಬಾಲನಟನಾಗಿ ನಟಿಸಿರುವಂತಹ ಸಿನಿಮಾಗಳು ಎಂದರೆ ಒಡಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಈ ರೀತಿಯಾದಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಚಿಕ್ಕವರಿಂದಲು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ವಿನಯ ರಾಜ್ ಕುಮಾರ್ ಅವರು ಹೀರೋ ಆಗಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಸಿದ್ದಾರ್ಥ ಈ ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡಿರು.
ಮೂಲತಃ ಇವರು ಚಿತ್ರರಂಗದ ಕುಟುಂಬದಿಂದ ಬಂದಿದ್ದರಿಂದ ಇವರಿಗೆ ಸಿನಿಮಾಗೆ ಎಂಟ್ರಿ ಕೊಡಲು ಸಾಕಷ್ಟು ಸಮಯ ಏನು ತೆಗೆದುಕೊಳ್ಳಲಿಲ್ಲ. ಡಾಕ್ಟರ್ ರಾಜ್ ಕುಮಾರ್ ಅವರು ಸಾಕಷ್ಟು ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ಕನ್ನಡಿಗರ ಮನೆ ಮನದಲ್ಲಿ ಇಂದಿಗೂ ಸಹ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಸಾಕಷ್ಟು ಸಿನಿಮಾಗಳನ್ನು ಮಾಡಿ ಹೆಸರನ್ನು ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಇಬ್ಬರು ಸಹ ಹೆಣ್ಣುಮಕ್ಕಳು ಅವರ ಹಿರಿಯ ಮಗಳು ವೃತ್ತಿಯನ್ನು ಡಾಕ್ಟರ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಂಸಾರವನ್ನು ನಡೆಸುತ್ತಿದ್ದಾರೆ, ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ ಪ್ರೊಡಕ್ಷನ್ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮೆಲ್ಲರನ್ನು ಹಗಲಿದ್ದಾರೆ ಅವರಿಗು ಸಹ ಇಬ್ಬರು ಹೆಣ್ಣು ಮಕ್ಕಳು ಇವರು ಸದ್ಯದಲ್ಲಿ ಓದನ್ನು ಮುಂದುವರಿಸುತ್ತಿದ್ದಾರೆ.
ನಂತರ ರಾಘವೇಂದ್ರ ರಾಜ್ ಕುಮಾರ್ ಅವರವರಿಗೆ ಇಬ್ಬರು ಸಹ ಗಂಡು ಮಕ್ಕಳು ಸದ್ಯದಲ್ಲಿ ಇವರೆ ತಮ್ಮ ಕುಟುಂಬದ ಸಿನಿಮಾ ಜರ್ನಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ತುಂಬಾ ಜನರು ಹೇಳುತ್ತಿದ್ದಾರೆ ಹೌದು ಅದರಲ್ಲಿಯೂ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ತಮ್ಮ ತಾತನ ಹಾಗೂ ತಮ್ಮ ಚಿಕ್ಕಪ್ಪನ ಯಶಸ್ಸಿನ ಪಯಣವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವಂತಹ ದೊಡ್ಡ ಕನಸನ್ನು ಹೊಂದಿದ್ದಾರೆ ಅದಕ್ಕಾಗಿ ಒಂದಷ್ಟು ಕೆಲವು ಸಿನಿಮಾಗಳಲ್ಲಿ ಇವರು ಬಿಸಿಯಾಗಿದ್ದಾರೆ. ಅವರನ್ನು ನೋಡುತ್ತಿದ್ದರೆ ರಾಜ್ ಕುಮಾರ್ ಅವರನ್ನು ನೋಡಿದ ಹಾಗೆ ಆಗುತ್ತದೆ ಎಂದು ಕೆಲವರು ಹೇಳಿದರೆ, ಪುನೀತ್ ರಾಜ್ಬಕುಮಾರ್ ಅವರ ಸಾಲಿಗೆ ಸೇರುತ್ತಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಅವರು ತಮ್ಮ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಸಹ ನಿಭಾಯಿಸಿಕೊಂಡು ಹೋಗುತ್ತಿರುವುದು ಅಷ್ಟೇ ಅಲ್ಲದೆ ತಮ್ಮ ಸಿನಿಮಾ ಜರ್ನಿಯನ್ನು ಸಹ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಹೀಗೆಯೇ ಇವರು ನಟಿಸಿರುವಂತಹ ರನ್ ಆಂಟನಿ ಎನ್ನುವಂತಹ ಸಿನಿಮಾವು ಅಷ್ಟೊಂದು ದೊಡ್ಡಮಟ್ಟದ ಹಿಟ್ಟನ್ನು ಕಾಣಲಿಲ್ಲ, ನಂತರದಲ್ಲಿ ಬಂದ ಅನಂತು v/s ನುಸ್ರುತ್ ಈ ಸಿನಿಮಾ ಸ್ವಲ್ಪಮಟ್ಟಿಗೆ ಚರ್ಚೆಗೆ ಒಳಗಾಗಿ ಸೊಲ್ಪ ಮಟ್ಟದ ಯಶಸ್ಸನ್ನು ಕಂಡಿತ್ತು. ಇದೀಗ ಸದ್ಯದಲ್ಲೇ ಮೂಡಿಬರುತ್ತಿರುವ ಅಂತಹ ಸಿನಿಮಾ ಎಂದರೆ ಗ್ರಾಮಾಯಣ ಈ ಒಂದು ಸಿನಿಮಾ ಸಾಕಷ್ಟು ರೀತಿಯಾದಂತಹ ನಿರೀಕ್ಷೆಯನ್ನು ಜನರಲ್ಲಿ ಹುಟ್ಟುಹಾಕಿದೆ ಈ ಒಂದು ಸಿನಿಮಾದ ಬಗ್ಗೆ ಜನರು ಸಾಕಷ್ಟು ರೀತಿಯಾದಂತಹ ಒಂದು ಉತ್ಸಾಹವನ್ನು ಹುಟ್ಟಿಸಿಕೊಂಡಿದ್ದು ಈ ಒಂದು ಸಿನಿಮಾ ತುಂಬಾ ಉತ್ತಮವಾಗಿ ಮೂಡಿಬರಲಿದೆ ಎಂದು ಟೀಸರ್ ನೋಡಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಸಿನಿಮಾ ಅದೊಂದ್ ಇತ್ತು ಕಾಲ ಹಾಗೆ ಪೆಪ್ ಎನ್ನುವಂತಹ ಸಿನಿಮಾವು ಸಹ ವಿನಯ್ ರಾಜ್ ಕುಮಾರ್ ಅವರ ನಟನೆಯಲ್ಲಿ ಮೂಡಿಬರುತ್ತಿದೆ. ಒಂದು ಸಿನಿಮಾಗಳ ಬಗ್ಗೆ ವಿನಯ್ ರಾಜ್ ಕುಮಾರ್ ಅವರು ಸಾಕಷ್ಟು ರೀತಿಯಾದಂತಹ ಹೆಸರು ಮಾಡಲಿದ್ದಾರೆ ಎನ್ನುವಂತಹ ಮಾತುಕತೆ ನಡೆಯುತ್ತಿದೆ. ಇದಿಷ್ಟು ವಿನಯ ರಾಜ್ ಕುಮಾರ್ ಅವರ ಸಿನಿಮಾ ಜರ್ನಿ, ಆದರೆ ಇವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ವಿನಯ ರಾಜ್ಬಕುಮಾರ್ ಅವರು ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಮಗ ಆಗಿದ್ದರೂ ಸಹ ಇನ್ನೂ ಮದುವೆಯಾಗಿಲ್ಲ ಎನ್ನುವಂತಹ ಕೆಲವೊಂದು ಮಾತುಗಳು ಕೇಳಿಬರುತ್ತಿವೆ.
ವಿನಯ್ ರಾಜ್ ಕುಮಾರ್ ಅವರ ತಮ್ಮ ಯುವರಾಜ್ ಕುಮಾರ್ ಅವರು ಮದುವೆಯಾಗಿದ್ದು ಇನ್ನು ಸಹ ವಿನಯ್ ರಾಜ್ ಕುಮಾರ್ ಅವರು ಮದುವೆಯಾಗಿಲ್ಲ ಎನ್ನುವಂತಹ ಕೆಲವೊಂದಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿನಯ್ ರಾಜ್ ಕುಮಾರ್ ಅವರಿಗೆ ಈಗ 32 ವರ್ಷ ತಮ್ಮ ಯುವ ರಾಜ್ ಕುಮಾರ್ ಅವರಿಗೆ 25 ವರ್ಷ ಆದರೂ ಬೇಗನೇ ಮದುವೆಯಾಗಿದ್ದಾರೆ. ವಿನಯ್ ರಾಜ್ ಕುಮಾರ್ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವಂತಹ ಕೆಲವೊಂದು ಮಾಹಿತಿ ಸಹ ನಮಗೆ ಕೇಳಿಬಂದಿತು, ಆದರೆ ವಿನಯಕುಮಾರ್ ಅವರು ಹೇಳಿಕೊಂಡಿದ್ದಾರೆ ನನಗೆ ಈಗ ಸಿನಿಮಾಗಳಲ್ಲಿ ಗುರುತಿಸಿಕೊಂಡು ನಾನು ಒಂದಷ್ಟು ಹೆಸರನ್ನು ಮಾಡಬೇಕು ಎನ್ನುವಂತಹ ಕನಸು ಹೊಂದಿದ್ದೇನೆ ಹಾಗೆಯೇ ನನ್ನ ಕುಟುಂಬದ ಕೆಲವೊಂದಷ್ಟು ಜವಾಬ್ದಾರಿಗಳು ನನ್ನ ಮೇಲೆ ಇರುವುದರಿಂದ ಸದ್ಯದಲ್ಲಿ ಮದುವೆಯಾಗುವ ಯೋಚನೆಯನ್ನು ಮುಂದೂಡಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.