ಐಂದ್ರಿತಾ ರೇ ಹಾಗೂ ದೂದ್ ಪೇಡ ದಿಗಂತ್ ಅವರದ್ದು ಸ್ಯಾಂಡಲ್ವುಡ್ ಕಂಡ ಕ್ಯೂಟೆಸ್ಟ್ ಜೋಡಿ. ಮೆರವಣಿಗೆ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಐಂದ್ರಿತಾ ರೇ ಅವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ಟ್ ನಟರ ಜೊತೆಗೆ ಅಭಿನಯಿಸಿದ್ದಾರೆ. ವಯಸ್ಸು ಎಷ್ಟಾಗಿದೆ ಗೊತ್ತಿಲ್ಲ ಆದರೂ ಕೂಡ ಇನ್ನೂ 18ರ ಚೆಲುವೆ ಅಂತೆ ಕಾಣುವ ಇವರು ಶಿವಣ್ಣ ಪ್ರಜ್ವಲ್ ದೇವರಾಜ್ ದುನಿಯಾ ವಿಜಯ್ ಪ್ರೇಮ್ ದಿಗಂತ್ ಸೇರಿದಂತೆ ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಜಂಗ್ಲಿ ಕಡ್ಡಿಪುಡಿ ಭಜರಂಗಿ ಚೌಕ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲೂ ಅಭಿನಯಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ. ಸಿನಿಮಾ ರಂಗವನ್ನು ಪ್ರವೇಶಿಸಿ ಹಲವು ವರ್ಷಗಳೇ ಕಳೆದಿದ್ದರೂ ಕೂಡ ಇನ್ನು ಬೇಡಿಕೆಯಲ್ಲಿರುವ ಜೋಡಿ ಐಂದ್ರಿತಾ ಹಾಗೂ ದಿಗಂತ್ ಜೋಡಿ. ಇವರಿಬ್ಬರು ಜೋಡಿಯಾಗಿ ಮನಸಾರೆ ಮತ್ತು ಪಾರಿಜಾತ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಹಲವು ವರ್ಷಗಳವರೆಗೆ ಪ್ರೀತಿ ಬಂಧನದಲ್ಲಿ ಇದ್ದ ಇವರು ಮತ್ತು ಮೂರು ವರ್ಷಗಳ ಹಿಂದೆ ಅಧಿಕೃತವಾಗಿ ವಿವಾಹ ಆಗುವ ಮೂಲಕ ಸುದ್ದಿಯಾದರು ಇದಾದ ಬಳಿಕ ಸಮಾಜ ಸೇವೆಯಲು ಕೂಡ ತಮ್ಮನ್ನು ತೊಡಗಿಸಿ ಕೊಂಡ ಜೋಡಿ, ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು.
ದಿಗಂತ್ ಅವರು ಸಹ ಗಾಳಿಪಟ ಲೈಫು ಇಷ್ಟೇನೆ ಪಂಚರಂಗಿ ಇನ್ನು ಮುಂತಾದ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಕೆಲ ವರ್ಷ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಒಟ್ಟಾಗಿ ಕಾಣುತ್ತಿದ್ದರು ಹೊರತು ಇವರಿಬ್ಬರ ಅಭಿನಯದ ಯಾವ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ತೆರೆಕಂಡಿರಲಿಲ್ಲ. 9 ವರ್ಷಗಳ ಬಳಿಕ ಮತ್ತೊಮ್ಮೆ ದಿಗಂತ್ ಮತ್ತು ಐಂದ್ರಿತಾ ಅವರು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾದ ಮೂಲಕ ಮತ್ತೊಮ್ಮೆ ಜೋಡಿ ಆಗಿದ್ದಾರೆ. ಸಿನಿಮಾ ಬಗ್ಗೆ ಬಹಳ ಹೋಪ್ ಇತ್ತಾದರೂ ಈ ಸಿನಿಮಾ ರಿಲೀಸ್ ಆದ ಮೇಲೆ ಅ ನಿರೀಕ್ಷೆ ಸುಳ್ಳಾಯಿತು.
ಜೊತೆಗೆ ಕಳೆದ ವರ್ಷಗಳಲ್ಲಿ ದಿಗಂತ್ ಅವರ ಮೇಲೆ ಡ್ರ-ಗ್ಸ್ ಆರೋಪದ ಕುರಿತು ಸುದ್ದಿ ಆಗಿತ್ತು. ಇದಾದ ಬಳಿಕ ಗೋವಾದಲ್ಲಿ ಅವರು ಸ್ಟಂಟ್ ಮಾಡಲು ಹೋಗಿ ಅ.ಪಾ.ಯ ಮಾಡಿಕೊಂಡು ಆಸ್ಪತ್ರೆ ಸೇರಿ ಸುದ್ದಿ ಆಗಿದ್ದರು ಮತ್ತು ಯುವ ರತ್ನ ಸಿನಿಮಾ ಆದ ಮೇಲೆ ಗಾಳಿಪಟ ಸಿನಿಮಾಕ್ಕಾಗಿ ಬಣ್ಣ ಹಚ್ಚಿ ಬಿಜಿ ಆದರು ಸ್ಯಾಂಡಲ್ವುಡ್ ಇಂದ ಬಾಲಿವುಡ್ ಅಂಗಳಕ್ಕೆ ಜಿಗಿದ ಐಂದ್ರಿತಾ ಅಲ್ಲಿನ ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿಬಿಟ್ಟಿದ್ದಾರೆ. ಆದರೂ ಕನ್ನಡದಲ್ಲಿ ಅಭಿನಯಿಸುವ ಆಸೆಯನ್ನು ಹೊರ ಹಾಕುತ್ತಲೇ ಇರುತ್ತಾರೆ ಐಂದ್ರಿತಾ ರೇ ಅವರು ನಟಿ ಮಾತ್ರ ಅಲ್ಲದೆ ಒಬ್ಬ ಅದ್ಭುತ ನೃತ್ಯಗಾರ್ತಿ ಕೂಡ ಹೌದು.
ಈಗಲೇ ಕಡ್ಡಿಪುಡಿ ಸಿನಿಮಾದಲ್ಲಿ ಸೌಂದರ್ಯ ಸಮರ ಹಾಡಿಗೆ ಅವರು ಹೆಜ್ಜೆ ಹಾಕಿರೋದು ನೋಡಿದರೆ ಅದು ತಿಳಿಯುತ್ತದೆ. ಇದಲ್ಲದೆ ಕನ್ನಡ ಸಿನಿಮಾರಂಗದ ಯಾವುದೇ ಕಾರ್ಯಕ್ರಮ ಆದರೂ ಕೂಡ ಅಲ್ಲಿ ಅವಕಾಶ ಇದ್ದಾಗ ವೇದಿಕೆ ಮೇಲೆ ಟೀಮ್ ಜೊತೆ ಹೆಜ್ಜೆ ಹಾಕಿ ಹೆಸರಾಗುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮೂರು ವರ್ಷಗಳ ಹಿಂದೆ ಸೈಮಾ ಅವಾರ್ಡ್ಸ್ ಅಲ್ಲಿ ನೃತ್ಯ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿದ್ದು ಇದನ್ನು ನೋಡಿದ ಅಭಿಮಾನಿಗಳು ಅವರ ನೃತ್ಯದ ಕಂಡು ಭೇಷ್ ಎನ್ನುತ್ತಿದ್ದಾರೆ. ಆ ವಿಡಿಯೋ ಈ ಕೆಳಗಿದೆ ನೋಡಿ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ಕಾಮೆಂಟ್ ಮಾಡಿ.