Friday, June 9, 2023
HomeEntertainmentಸುಳ್ಳಯ್ತು ರಮ್ಯ ಕೊಟ್ಟ ಸಿಹಿ ಸುದ್ದಿ, ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ನಟಿ ರಮ್ಯ

ಸುಳ್ಳಯ್ತು ರಮ್ಯ ಕೊಟ್ಟ ಸಿಹಿ ಸುದ್ದಿ, ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ನಟಿ ರಮ್ಯ

ಸ್ಯಾಂಡಲ್ ವುಡ್ ಅಲ್ಲಿ ಪದ್ಮಾವತಿ ಎಂದು ಫೇಮಸ್ ಆಗಿರುವ ಮೋಹಕ ತಾರೆ ರಮ್ಯಾ ಅವರ ಕೊನೆಯ ಸಿನಿಮಾ 2016ರಲ್ಲಿ ತೆರೆಕಂಡ ನಾಗರಹಾವು ಸಿನಿಮಾವಾಗಿತ್ತು. ಈ ಸಿನಿಮಾ ಆದ ಬಳಿಕ ರಾಜಕೀಯದಲ್ಲಿ ಬಿಝಿ ಆದ ಅವರು ತಮ್ಮ ಕೈಲಿದ್ದ ಹಲವು ಪ್ರಾಜೆಕ್ಟ್ ಗಳನ್ನು ಇನ್ನೂ ಸಂಪೂರ್ಣಗೊಳಿಸಿಲ್ಲ ಎನ್ನುವವ ಆರೋಪಗಳಿವೆ. ಇದರೊಂದಿಗೆ ಮತ್ತೆ ಅವರನ್ನು ತೆರೆ ಮೇಲೆ ಯಾವಾಗ ಕಾಣಲಿದ್ದೇವೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ದದಲ್ಲೇ ಅವರು ಕಂಬ್ಯಾಕ್ ಆಗಲಿದ್ದಾರೆ ಎನ್ನುವ ಮಾತುಗಳು ಇದ್ದವು, ಹೀಗಾಗಿ ಸಿನಿ ಜರ್ನಿಯಲ್ಲಿ ಸೆಕೆಂಡಿ ಇನ್ನಿಂಗ್ಸ್ ಶುರು ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿತ್ತು.

ಈ ಹಿಂದೆ ರಮ್ಯಾ ಅವರೇ ಶೀಘ್ರದಲ್ಲಿ ಸಿಹಿ ಸುದ್ದಿ ಕೊಡಲಿದ್ದೇನೆ ಎಂದು ವಿಷಯವನ್ನು ಹಂಚಿಕೊಂಡಿದ್ದರು ಅವರೇ ನಿರ್ಮಾಣ ಮಾಡಿರುವ ಆಪಲ್ ಬಾಕ್ಸ್ ಸಂಸ್ಥೆ ವತಿಯಿಂದ ಸ್ವಾತಿ ಮುತ್ತಿನ ಮಳೆಹನಿಗೆ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಗಾಂಧಿನಗರ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿದ್ದವು. ರಮ್ಯ ಅವರು ಈ ಸಿನಿಮಾದಲ್ಲಿ ತಾವಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಸಿನಿಮಾದಲ್ಲಿ ನಟಿಯಾಗಿ ನಾನು ಕಾಣಿಸಿಕೊಳ್ಳುತ್ತಿಲ್ಲ ಆದರೆ ಲೈಟರ್ ಬುದ್ಧ ಫಿಲಂಸ್ ಮತ್ತು ಆಪಲ್ ಬಾಕ್ಸ್ ಪ್ರೊಡಕ್ಷನ್ ವತಿಯಿಂದ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಇದಕ್ಕೆ ರಾಜ್.ಬಿ.ಶೆಟ್ಟಿ ಅವರೇ ಕಥೆ ರಚನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಗರುಡ ಗಮನ ಮತ್ತು ವೃಷಭ ವಾಹನ ಸಿನಿಮಾದಲ್ಲಿ ಇದ್ದ ತಾಂತ್ರಿಕ ತಂಡವೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದೆ ಮಿಥುನ್ ಮುಕುಂದ್ ಅವರು ಸಿನಿಮಾ ಗೆ ಸಂಗೀತ ನೀಡಲಿದ್ದು ಪ್ರವೀಣ್ ಅವರು ಕ್ಯಾಮೆರಾ ಕೆಲಸ ಮಾಡಲಿದ್ದಾರೆ ಆದರೆ ನಾಯಕಿ ಆಗಿ ಸಿರಿ ರವಿಕುಮಾರ್ ಅವರು ಇರಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಸಿರಿ ರವಿಕುಮಾರ್ ಅವರು ಬೈ ಮಿಸ್ಟೇಕ್ ಮತ್ತು ಸಕುಟಂಬ ಸಮೇತ ಎನ್ನುವ ಎರಡು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಭರವಸೆಯ ನಾಯಕಿಯಾಗಿ ಹೊರಹಮ್ಮಿದ್ದಾರೆ. ರಮ್ಯಾ ಅವರು ತಾವು ನಿರ್ಮಾಣ ಮಾಡಿರುವ ಈ ಸಂಸ್ಥೆಯಲ್ಲಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಮಹಾದಾಸೆ ಇಟ್ಟುಕೊಂಡಿರುವ ಕಾರಣ ನಟನೆಯಲ್ಲಿ ಈ ಸಿನಿಮಾದಿಂದ ದೂರವಿದ್ದರೂ ನಿರ್ಮಾಪಕ್ಕೆ ಆಗಿ ತೊಡಗಿಕೊಂಡಿದ್ದಾರೆ.

ಈಗ ಇವರ ಆಪಲ್ ಬಾಕ್ಸ್ ಸ್ಟುಡಿಯೋ ಸೇರಿಕೊಳ್ಳುತ್ತಿರುವ ಎಲ್ಲಾ ನಟ ನಟಿಯರು ಮತ್ತು ತಂತ್ರಜ್ಞರಿಗೆಲ್ಲ ಹೃದಯಪೂರ್ವಕವಾಗಿ ಸ್ವಾಗತ ಕೋರುತ್ತಿದ್ದಾರೆ. ಈ ವರ್ಷ ಇವರು ನಿರ್ಮಾಣ ಮಾಡಿರುವ ಆಪಲ್ ಬಾಕ್ಸ್ ಪ್ರೊಡಕ್ಷನ್ ಮತ್ತು ಲೈಟರ್ ಬುದ್ಧ ಫಿಲಂಸ್ ವತಿಯಿಂದ ಎರಡು ಸಿನಿಮಾಗಳು ತಯಾರಾಗುತ್ತಿದ್ದೆಯಂತೆ. ಅದರಲ್ಲಿ ಒಂದಾದ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ಪ್ರೊಡಕ್ಷನ್ ಕೆಲಸಗಳೆಲ್ಲವೂ ಶುರು ಆಗಿದ್ದು ಕೆ ಆರ್ ಜಿ ಸಂಸ್ಥೆಯ ವಿತರಣೆ ಮೂಲಕ ಒ ಟಿ ಟಿ ಅಲ್ಲಿ ಹಾಗೂ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆಗಲಿದೆಯಂತೆ.

ಮುಂದಿನ ದಿನಗಳಲ್ಲಿ ಆಪಲ್ ಬಾಕ್ಸ್ ಸ್ಟುಡಿಯೋಸ್ ಕಡೆಯಿಂದ ವೆಬ್ ಸೀರೀಸ್ ಗಳು ಒಟಿಟಿಗಾಗಿ ಸಿನಿಮಾಗಳು ಬರಲಿವೆಯಂತೆ ಆದರೆ ಅದರಲ್ಲಿ ರಮ್ಯಾ ಅವರ ಅಭಿನಯ ಇದಲಿದೆಯಾ ಎನ್ನುವ ಖಚಿತ ಮಾಹಿತಿಗಳು ಇಲ್ಲ. ಆದರೆ ಕರ್ನಾಟಕ ಜನತೆ ಮಾತ್ರ ರಮ್ಯಾ ಅವರನ್ನು ನಾಯಕಿಯಾಗಿ ಮತ್ತೊಮ್ಮೆ ನೋಡಲು ಕಾಯುತ್ತಿದ್ದಾರೆ ಮತ್ತು ಈಗಲೂ ಕೂಡ ಚಿತ್ರರಂಗದಿಂದ ರಮ್ಯಾ ಅವರ ಕಂಬ್ಯಕ್ಕಾಗಿ ಆಗಾಗ ಆಫರ್ಗಳು ನೀಡಲಾಗುತ್ತಿದೆಯಂತೆ ಆದರೆ ಯಾವಾಗ ಮತ್ತೊಮ್ಮೆ ರಮ್ಯಾ ಅವರು ಬಣ್ಣ ಹಚ್ಚಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ಆದರೂ ಕೂಡ ಕಳೆದರೂ 6 ವರ್ಷಗಳಿಂದ ರಮ್ಯಾ ಅವರ ಯಾವುದೇ ಸಿನಿಮಾ ಮೂಡಿಬಂದಿರಲಿಲ್ಲ ದಸರಾ ಹಬ್ಬದಂದು ತಾವು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಟನೆ ಮಾಡುತ್ತೇನೆ ಎಂದು ಸ್ವತಹ ರಮ್ಯಾ ಅವರೇ ಹೇಳಿಕೊಂಡಿದ್ದರು ಈ ವಿಚಾರ ಕೇಳಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಪರದೆಯ ಮೇಲೆ ನೋಡಬಹುದು ಎಂದು ಖುಷಿಪಟ್ಟಿದ್ದರು ಆದರೆ ಇದೀಗ ಆ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಎಂದು ರಮ್ಯಾ ಅವರು ಹೇಳಿಕೆ ನೀಡಿದ್ದಾರೆ ಈ ಹೇಳಿಕೆ ಕೇಳಿ ನಿಜಕ್ಕೂ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.