ನಾಳೆ ಮೇ 10ನೇ ತಾರೀಕು ಶುಕ್ರವಾರದ ದಿನ ವಿಶೇಷವಾದ ಅಕ್ಷಯ ತೃತೀಯ ಬಂದಿದೆ ಈ ದಿನದ ಮಹತ್ವವೇನು ಹಾಗೂ ಈ ದಿನ ಯಾವ ಕೆಲವು ವಸ್ತುಗಳನ್ನು ಖರೀದಿ ಮಾಡಿ ತರಬೇಕು ಹಾಗೂ ಯಾವ ಕೆಲವು ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಕಷ್ಟ ಕಳೆದು ಶಾಶ್ವತ ಶಿವಾನು ಗ್ರಹಕ್ಕೆ ಸಾಕ್ಷಾತ್ ಲಕ್ಷ್ಮಿ ಕುಬೇರ ಹಾಗೂ ವಿಷ್ಣುದೇವರ ಅನುಗ್ರಹಕ್ಕೆ ಯಾವೆಲ್ಲ ನಿಯಮಗಳನ್ನು ತಪ್ಪದೆ ನಾಳೆ ಪಾಲಿಸಬೇಕು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಅಕ್ಷಯ ತೃತೀಯ ಹಬ್ಬದ ದಿನ ಸಾಕ್ಷಾತ್ ಶ್ರೀ ಮಹಾವಿಷ್ಣುದೇವರು ಲಕ್ಷ್ಮಿ ದೇವಿಗೆ ತನ್ನ ವಕ್ಷಸ್ಥಳ ಅಂದರೆ ಎದೆಯ ಜಾಗದಲ್ಲಿ ಸ್ಥಾನವನ್ನು ಕೊಟ್ಟ ದಿನವೇ ಈ ಒಂದು ಅಕ್ಷಯ ತೃತೀಯ ದಿನವಾಗಿದೆ. ಮಹಾಶಿವನು ಕುಬೇರ ದೇವ ಹಾಗೂ ಮಹಾಲಕ್ಷ್ಮಿ ದೇವಿಗೆ ಪ್ರಪಂಚಕ್ಕೆ ಐಶ್ವರ್ಯವನ್ನು ನೀಡಲು ನೇಮಿಸಿದರು ಎಂದೂ ಪುರಾಣಗಳು ತಿಳಿಸುತ್ತದೆ.
ಈ ಸುದ್ದಿ ಓದಿ:-ಗಂಡ ಹೆಂಡತಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು.!
ಶಿವನು ತನಗೆ ಬಂದಂತಹ ಬ್ರಹ್ಮ ಹತ್ಯ ದೋಷದಿಂದ ಮುಕ್ತನಾಗಲು ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಳಿ ಅನ್ನವನ್ನು ಸ್ವೀಕರಿಸಿದ ದಿನವೇ ಈ ಒಂದು ಅಕ್ಷಯ ತೃತೀಯ ದಿನ. ಬಡತನದಲ್ಲಿ ಇದ್ದಂತಹ ಕುಚೇಲನು ತನ್ನ ಮಿತ್ರನಾಗಿರುವಂತಹ ಶ್ರೀ ಕೃಷ್ಣನನ್ನು ನೋಡಲು ಬಂದು ತನ್ನ ಬಳಿ ಇದ್ದಂತಹ ಮೂರು ಹಿಡಿ ಅವಲಕ್ಕಿಯನ್ನು ನೀಡಿದ. ಇದನ್ನು ಸೇವಿಸಿದಂತಹ ಶ್ರೀ ಕೃಷ್ಣನು ಕುಚೇಲನನ್ನು ಕುಬೇರ ನನ್ನಾಗಿ ಮಾಡಿದ ದಿನವೇ ಈ ಒಂದು ಅಕ್ಷಯ ತೃತೀಯ ದಿನವಾಗಿದೆ.
ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಮಾಡಲೇಬೇಕೆಂದು ಯಾವ ಶಾಸ್ತ್ರಗಳಲ್ಲಿಯೂ ಯಾವ ಪುರಾಣಗಳಲ್ಲಿಯೂ ಕೂಡ ತಿಳಿಸಿಲ್ಲ. ಬದಲಿಗೆ ಸ್ವರ್ಣ ಅಂದರೆ ಚಿನ್ನ ದಾನವನ್ನು ಹಾಗೂ ವಿವಿಧ ದಾನಗಳನ್ನು ದಾನ ಮಾಡಿ ಅದರಿಂದ ನಿಮಗೆ ಪುಣ್ಯಫಲ ಲಭಿಸಿ ಏಳಿಗೆ ಪಡೆಯುತ್ತೀರಿ ಎಂದು ಶಾಸ್ತ್ರ ಹೇಳುತ್ತದೆ.
ಈ ಸುದ್ದಿ ಓದಿ:-3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!
ಈ ಅಕ್ಷಯ ತೃತೀಯದ ದಿನ ತಪ್ಪದೇ ನಿಮ್ಮ ಮನೆಗೆ ತುಳಸಿ ಗಿಡವನ್ನು ತರಬೇಕು. ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಪದೇ ಪದೇ ತುಳಸಿ ಗಿಡ ಒಣಗಿ, ತುಳಸಿ ಗಿಡ ಇಲ್ಲದ ಮನೆ ಆಗಿರುತ್ತದೆಯೋ ಅಂಥವರು ನಾಳೆ ಅಂದರೆ ಅಕ್ಷಯ ತೃತೀಯ ದಿನದಂದು ಅದನ್ನು ನೆಟ್ಟು ಅದನ್ನು ಪೋಷಿಸುತ್ತಾ ಪೂಜಿಸುತ್ತಾ ಬರಬೇಕು. ಬಂಗಾರದ ಬದಲು ಬೆಳ್ಳಿಯನ್ನು ತರಬೇಕು. ಹಾಗೂ ಹೊಸ ಕಸಪೊರಕೆಯನ್ನು ಮನೆಯಲ್ಲಿ ತಂದಿಡಬೇಕು.
ಸಂಪಾದನೆ ಮಾಡಿದಂತಹ ಹಣವನ್ನು ತರಬೇಕು ಜೊತೆಗೆ ಹರಿಶಿನ ಕುಂಕುಮ ಕಲ್ಲುಪ್ಪು ಇವುಗಳನ್ನು ಸಹ ಅಕ್ಷಯ ತೃತೀಯ ಹಬ್ಬದ ದಿನ ತರುವುದು ಅತ್ಯಂತ ಶುಭಕರ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾ ಗಿದೆ. ಲಕ್ಷ್ಮಿ ದೇವಿಯು ನೆಲೆಸಿರುವಂತಹ ವಸ್ತುಗಳಲ್ಲಿ ಈ ವಸ್ತುಗಳು ಕೂಡ ಬಹಳ ಪ್ರಮುಖವಾದವು. ಸಾಧ್ಯವಾದರೆ ಅಕ್ಷಯ ತೃತೀಯದ ದಿನ ಅರಿಶಿಣ ಬಣ್ಣದ ಬಟ್ಟೆಯನ್ನು ತಂದಿಡುವುದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:-ಕುಕ್ಕರ್ ನಲ್ಲಿ ಅಡುಗೆ ಮಾಡುವವರು ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ.!
ಈ ಬಾರಿ ಬಂದಿರುವಂತಹ ಅಕ್ಷಯ ತೃತೀಯ ದ ದಿನ ದೇವರಕೋಣೆಯಲ್ಲಿ ಲಕ್ಷ್ಮಿ ಕುಬೇರ ವಿಷ್ಣು ಹಾಗೂ ಶಿವನ ದೇವರ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಪಂಚಾಮೃತ ಪರಮಾನ್ನ ಮೊಸರನ್ನವನ್ನು ಲಕ್ಷ್ಮಿ ಕುಬೇರರಿಗೆ ನೈವೇದ್ಯವಾಗಿ ಅರ್ಪಿಸಿ ಅವರ ಸೇವೆಯನ್ನು ಮಾಡಿಕೊಳ್ಳಬೇಕು. ಅವತ್ತಿನ ದಿನ ಮನೆಯಲ್ಲಿ ಬಂಗಾರದಂತಹ ಮಾತುಗಳನ್ನು ಆಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.