ಮನೆ ಎಂದರೆ ಅಲ್ಲಿ ಹಲವಾರು ರೀತಿಯ ಕೆಲಸಗಳು ಇರುತ್ತದೆ ಹಾಗೂ ಆ ಕೆಲಸಗಳನ್ನು ಮಾಡಿ ಮುಗಿಸಲೇಬೇಕು ಆದರೆ ಕೆಲವೊಂದು ಕೆಲಸ ಗಳನ್ನು ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದನ್ನು ನಾವು ಮನೆ ಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಅದನ್ನು ಬೇರೆಯವರ ಬಳಿ ಮಾಡಿಸುತ್ತೇವೆ ಅಥವಾ ನಮ್ಮ ಕೈಯಲ್ಲಿ ಸಾಧ್ಯವಾಗುವುದೇ ಇಲ್ಲ ಎಂದಾಗ ನಾವು ಆ ಕೆಲಸವನ್ನೇ ಮಾಡುವುದಿಲ್ಲ.
ಆದರೆ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ಕಿಚನ್ ಟಿಪ್ಸ್ ಗಳು ಹಾಗೂ ಕೆಲ ವೊಂದು ಉಪಯುಕ್ತ ಮಾಹಿತಿಗಳು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಮಹಿಳೆಯರು ತಮ್ಮ ಮನೆಯ ವಿಚಾರವಾಗಿ ಯಾವುದೆಲ್ಲ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ತಮ್ಮ ಕೆಲಸಗಳನ್ನು ಸುಲಭ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!
ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳೋಣ. ನಾವು ಹೊರಗಡೆ ಹೊರಟಂತಹ ಸಂದರ್ಭದಲ್ಲಿ ನೀರಿನ ಬಾಟಲ್ ಅನ್ನು ವ್ಯಾನಿಟಿ ಬ್ಯಾಗ್ ಅಥವಾ ಕೈಯಲ್ಲಿ ಹಿಡಿದುಕೊಳ್ಳುವಂತಹ ಯಾವುದಾದರೂ ಬ್ಯಾಗ್ ಒಳಗಡೆ ಹಾಕಿ ಹಿಡಿದುಕೊಂಡು ಹೋಗುತ್ತೇವೆ.
ಆದರೆ ಕೆಲವೊಂದು ಸಂದರ್ಭದಲ್ಲಿ ಬಾಟಲ್ ಮುಚ್ಚಳ ತೆಗೆದು ನೀರು ಚೆಲುವ ಸಾಧ್ಯತೆ ಇರುತ್ತದೆ ಆದರೆ ಅದನ್ನು ಈಗ ನಾವು ಹೇಳುವ ಈ ಒಂದು ವಿಧಾನದಲ್ಲಿ ಇಟ್ಟುಕೊಂಡರೆ ಆ ಕಡೆ ಈ ಕಡೆ ಅಲುಗಾಡುವುದಿಲ್ಲ. ಹಾಗಾದರೆ ಅದಕ್ಕೆ ಏನು ಮಾಡಬೇಕು ಎಂದು ನೋಡುವುದಾದರೆ ಬಾಟಲನ್ನು ಇಟ್ಟ ನಂತರ ಅದಕ್ಕೆ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಬೇಕು ಅದನ್ನು ಸೇರಿಸಿ ಒಳಭಾಗಕ್ಕೆ ಒಂದು ಸೇಫ್ಟಿ ಪಿನ್ ಅನ್ನು ಹಾಕಬೇಕು.
ಈ ಸುದ್ದಿ ಓದಿ:- 3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!
ಈ ರೀತಿ ಹಾಕುವುದರಿಂದ ಬಾಟಲ್ ಆ ಕಡೆ ಈ ಕಡೆ ಅಲುಗಾಡುವುದಿಲ್ಲ ಒಂದು ಕಡೆ ಇರುತ್ತದೆ. ಅದರ ಪಕ್ಕದಲ್ಲಿ ಬೇರೆ ಎಲ್ಲಾ ವಸ್ತುಗಳನ್ನು ಸಹ ಇಟ್ಟುಕೊಳ್ಳಬಹುದು. ಈ ಒಂದು ವಿಧಾನ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ತುಂಬಾ ಉಪಯುಕ್ತವಾದ ಮಾಹಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.
* ಮಕ್ಕಳ ಶೂ ಅನ್ನು ಪಾಲಿಶ್ ಮಾಡುವುದಕ್ಕೆ ಶೂ ಪಾಲಿಶ್ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಒಂದು ಚಿಕ್ಕ ಬೌಲಿಗೆ ಸ್ವಲ್ಪ ಪ್ರಮಾಣದ ಕೊಬ್ಬರಿ ಎಣ್ಣೆ ಹಾಗೂ ಚಿಟಿಕೆ ಬಿಳಿ ಬಟ್ಟೆಗಳಿಗೆ ಹಾಕುವಂತಹ ನೀಲಿ ಇದನ್ನು ಮಿಶ್ರಣ ಮಾಡಿ ಒಂದು ಹತ್ತಿಯ ಸಹಾಯದಿಂದ ಶೂ ಪಾಲಿಶ್ ಮಾಡುವುದರಿಂದ ಅದು ಚೆನ್ನಾಗಿ ಕಾಣಿಸುತ್ತದೆ.
ಈ ಸುದ್ದಿ ಓದಿ:- ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!
* ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವoತಹ ಚಾಪಿಂಗ್ ಬೋರ್ಡ್ ನಲ್ಲಿ ನಾವು ಪ್ರತಿದಿನ ತರಕಾರಿಗಳನ್ನು ಕತ್ತರಿಸುತ್ತಿರುತ್ತೇವೆ ಅದನ್ನು ನಾವು ಪ್ರತಿ ಬಾರಿ ನೀರಿನಲ್ಲಿ ತೊಳೆದು ಹಾಗೆ ನೇತು ಹಾಕುತ್ತೇವೆ. ಆದ್ದರಿಂದ ಅದರಲ್ಲಿ ಒಂದು ರೀತಿಯ ಕಪ್ಪು ಬಣ್ಣ ಇರುತ್ತದೆ ಇದನ್ನು ದೂರ ಮಾಡುವುದಕ್ಕೆ.
ಆ ಒಂದು ಚಾಪಿಂಗ್ ಬೋರ್ಡ್ ಮೇಲೆ ಸ್ವಲ್ಪ ಪುಡಿ ಉಪ್ಪು ಹಾಗು ಸ್ವಲ್ಪ ಅಡುಗೆ ಸೋಡಾ ಹಾಕಿ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಉಜ್ಜುವುದರಿಂದ ಚಾಪಿಂಗ್ ಬೋರ್ಡ್ ಮೇಲೆ ಇರುವಂತಹ ಕಪ್ಪು ಕಲೆಗಳಾಗಿರಬಹುದು ಅದರಲ್ಲಿರುವ ಎಲ್ಲಾ ಕೊಳೆಯ ಅಂಶವು ಸಹ ಬರುತ್ತದೆ. ವಾರಕ್ಕೆ ಒಮ್ಮೆ ನೀವು ಈ ವಿಧಾನ ಅನುಸರಿಸುವುದು ಉತ್ತಮ.
ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!
* ಒಡೆದು ಹೋಗಿರುವಂತಹ ಬಕಿಟ್ ಅನ್ನು ತೆಗೆದುಕೊಂಡು ಅದರ ಮೇಲ್ಭಾಗಕ್ಕೆ ಸ್ವಲ್ಪ ಪ್ರಮಾಣದ ಇನೋ ಪೌಡರ್ ಹಾಕಿ ಅದರ ಮೇಲೆ ಫೆವಿಕ್ವಿಕ್ ಹಾಕಿ ಎರಡು ನಿಮಿಷ ಬಿಟ್ಟರೆ ಸಾಕು ಒಡೆದು ಹೋಗಿರುವ ಬಕೆಟ್ ಅಥವಾ ಮಗ್ ಇವುಗಳನ್ನು ಸುಲಭವಾಗಿ ಜೋಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.