ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ರಣರಂಗ ರಂಗೇರುತ್ತಿದೆ, ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮೋದಿ ಮುಂತಾದ ಪಕ್ಷದ ಪ್ರಮುಖ ಮುಖಂಡರುಗಳೆಲ್ಲ ತಿಂಗಳಿಗೆ ಹಲವು ಬಾರಿ ರಾಜ್ಯಕ್ಕೆ ಪ್ರವಾಸ ಬರುತ್ತಿದ್ದಾರೆ. ಇದೇ ಬೆನ್ನಲ್ಲಿ ಎಲ್ಲಾ ಪಕ್ಷಗಳು ಕೂಡ ದೊಡ್ಡ ದೊಡ್ಡವರನ್ನು ಗಾಳಕ್ಕೆ ಹಾಕಿಕೊಂಡು ಪಕ್ಷಕ್ಕೆ ಎಳೆದುಕೊಳ್ಳುವ ಬಲೆ ಎಸೆಯುತ್ತಿವೆ. ಈಗ ಚಿತ್ರರಂಗದ ಕಡೆ ಕೂಡ ಕಣ್ಣು ಬಿದ್ದಿದ್ದು ಹಿರಿಯ ನಟರೊಬ್ಬರನ್ನು ಕಮಲ ಪಾಳಯ ತನ್ನ ತೆಕ್ಕೆಗೆ ಬಳಸಿಕೊಂಡಿದೆ.
ಮೊದಲಿನಿಂದಲೂ ಕೂಡ ಹಲವು ನಿಲುವುಗಳನ್ನು ಹೊಂದಿದ್ದಾರೆ ಎನ್ನುವ ರೀತಿ ತಮ್ಮ ಮಾತುಗಳಲ್ಲಿ ಸುಳಿವು ಕೊಡುತ್ತಿದ್ದ, ಸದಾ ಮೋದಿ ಆಡಳಿತವನ್ನು ಬೆಂಬಲಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದ ಹಿರಿಯ ನಟ ರಾಜಕೀಯ ಮುತ್ಸದ್ದಿ ಅನಂತ್ ನಾಗ್ ಅವರು ಕೊನೆಗೂ ಬಿಜೆಪಿ ಪಕ್ಷಕ್ಕೆ ಒಲಿದಿದ್ದಾರೆ.
ಇಂದು ಸಂಜೆ ಸಂಜೆ 4:30ಕ್ಕೆ ಬಿಜೆಪಿ ಪಕ್ಷದ ಮಲ್ಲೇಶ್ವರಂ ಕಛೇರಿಯಲ್ಲಿ ಘಟಕದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ. ಈ ಸಮಯದಲ್ಲಿ ರಾಜ್ಯದ ಬಿಜೆಪಿ ಪಕ್ಷದ ಅನೇಕ ಪ್ರಮುಖರು ಮತ್ತು ಸಿನಿಮಾ ಕ್ಷೇತ್ರದಿಂದ ಬಿಜೆಪಿ ಅಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಮುನಿರಾಜು ಮತ್ತಿತರ ಉಪಸ್ಥಿತರಿರುವ ಮಾಹಿತಿ ಇದೆ. ಅನಂತ್ ರಾಜ್ ಅವರು ಇದೇ ಮೊದಲಿಗೆ ಪಕ್ಷವೊಂದರಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಈಗಾಗಲೇ ಅವರು ಸಚಿವನಾಗಿ ಮತ್ತು ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 80ರ ದಶಕದಲ್ಲಿಯೇ ರಾಜಕೀಯ ಪ್ರವೇಶ ಮಾಡಿದ ಇವರು ಆರಂಭದಲ್ಲಿ ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕನಾಗಿ ಗುರುತಿಸಿಕೊಂಡಿದ್ದರು. 1994ರ ವಿಧಾನಸಭೆ ಎಲೆಕ್ಷನ್ ಸಮಯದಲ್ಲಿ ಜೆಡಿಎಸ್ ಪಕ್ಷದಿಂದ ಮಲ್ಲೇಶ್ವರಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಿ ಎಚ್ ಪಾಟೀಲ್ ಅವರ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಬೆಂಗಳೂರಿನಲ್ಲಿ ಮೆಟ್ರೋ ಮತ್ತು ಇಲ್ಲಿನ ಪರಿಸರದ ಬಗ್ಗೆ ಬದಲಾವಣೆ ತರಲು ಬಹಳ ತುಡಿತ ಹೊಂದಿದ್ದ ಇವರು ಸಾಧ್ಯವಾದಷ್ಟು ಅದರ ಪರವಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಜೊತೆ ಬಹಳ ಒಡನಾಟ ಇಟ್ಟುಕೊಂಡಿದ್ದ ಇವರು ಅವರ ಕಡೆ ದಿನದವರೆಗೂ ಕೂಡ ಉತ್ತಮ ಸ್ನೇಹಿತರಾಗಿದ್ದರು. ಒಂದು ಅರ್ಥದಲ್ಲಿ ಜೆಡಿಎಸ್ ಪಕ್ಷ ಒಡೆದು ಚೂರಾಗುವವರೆಗೂ ಜೆಡಿಎಸ್ ಪಕ್ಷದ ಪ್ರಮುಖರಾಗಿ ಇವರು ಕಾಣಿಸಿಕೊಳ್ಳುತ್ತಿದ್ದರು.
ನಂತರ ನಡೆದ 2004ರ ಚುನಾವಣೆಯಲ್ಲಿ ಚಾಮರಾಜಪೇಟೆ ಇಂದ ಸ್ಪರ್ಧಿಸಿದ್ದ ಇವರು ಸೋಲಬೇಕಾಯಿತು. ಅದ್ಯಾಕೋ ಆ ನಂತರ ಇವರು ಹಂತ ಹಂತವಾಗಿ ರಾಜಕೀಯದಿಂದ ದೂರ ಉಳಿದರು. ನಂತರ ಕನ್ನಡ ಚಲನಚಿತ್ರ ರಂಗದ ಉತ್ತಮ ಸಿನಿಮಾಗಳಲ್ಲಿ ಒಳ್ಳೊಳ್ಳೆ ಪಾತ್ರಗಳನ್ನು ನಿಭಾಯಿಸುವ ಮೂಲಕ ರಾಜಕೀಯ ಮರೆತು ಸಿನಿಮಾ ರಂಗದಲ್ಲಿಯೇ ಸಕ್ರಿಯರಾಗಿ ಬಿಟ್ಟರು.
ಇತ್ತೀಚೆಗೆ ಬಿಜೆಪಿ ಸರ್ಕಾರದ ಕಡೆ, ಉತ್ತಮ ಅಭಿಪ್ರಾಯಗಳನ್ನು ಹೊಂದಿರುವ ಇವರು ಮತ್ತೊಮ್ಮೆ ಸಮಾಜ ಸೇವೆ ಮಾಡಲು ಕಾತುರದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅನಂತನಾಗ್ ಅವರ ತಮ್ಮ ನಮ್ಮೆಲ್ಲರ ಹೆಮ್ಮೆಯ ಶಂಕರ್ ನಾಗ್ ಅವರು ನೆನಪಾಗದೆ ಇರದು. ಶಂಕರ್ ನಾಗ್ ಅವರಿಗೂ ಸಹ ಈ ರೀತಿ ರಾಜಕೀಯ ಪ್ರವೇಶ ಮಾಡಿ ಕರ್ನಾಟಕದಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ತರಬೇಕು ಎನ್ನುವ ಮಹತ್ವಾಕಾಂಕ್ಷೆ ಇತ್ತು.
ಅವರ ಕನಸುಗಳನ್ನು ತಮ್ಮ ಕೈಲಾದಷ್ಟು ಸಾಕಾರ ಮಾಡುವ ಪ್ರಯತ್ನವನ್ನು ಅನಂತ್ ನಾಗ್ ಅವರು ಮಾಡಿದ್ದಾರೆ. ಮುಂದೆ ಅವಕಾಶ ಹಾಗೂ ಅಧಿಕಾರ ಸಿಕ್ಕರೆ ಮಾಡಲೂಬಹುದು. ಜನ ಅಭಿಪ್ರಾಯ ಏನಿದೆ ಎಂದು ಕಾದು ನೋಡೋಣ ಸದ್ಯಕ್ಕೆ ಇವರು ಯಾವ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ ಎನ್ನುವುದು ಕರ್ನಾಟಕದ ನಾಗರಿಕರ ಕುತೂಹಲ.