Sunday, May 28, 2023
HomeViral Newsಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ...

ಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ ವಿಧಿ ವಿಧಾನ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

 

ನಗುವಿನ ಒಡೆಯ, ನಾಡು ಕಂಡ ಶ್ರೇಷ್ಠ ಮಾನವ, ಚಿತ್ರರಂಗದ ಪವರ್ ಸ್ಟಾರ್ ಆಗಿದ್ದ ಪುನೀತ್ ರಾಜಕುಮಾರ್ ಅವರು ದೈವಾಧೀನರಾಗಿ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ದೇವರಾಗಿದ್ದಾರೆ. ಅವರೊಬ್ಬ ಸ್ಟಾರ್ ನಟ ಎನ್ನುವ ಕಾರಣಕ್ಕಿಂತ ಹೆಚ್ಚಾಗಿ ಅಪ್ಪು ಅವರ ಸಮಾಜ ಸೇವೆಯನ್ನು ಮನಗಂಡ ಅನೇಕ ಜನರು ಅಪ್ಪು ಅವರು ಹೋದ ಬಳಿಕ ಅವರ ವ್ಯಕ್ತಿತ್ವಕ್ಕೆ ಮನಸೋತು ಅವರಿಗೆ ಅಭಿಮಾನಿಗಳಾಗಿದ್ದಾರೆ.

ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಅಪ್ಪುವಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಇನ್ನಿತರ ವಿಷಯಗಳಲ್ಲಿ ಕೈ ಜೋಡಿಸುತ್ತಾರೆ. ಮುಂದಿನ ಮಾರ್ಚ್ ತಿಂಗಳ 17ನೇ ತಾರೀಖಿನಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಇರುವ ಕಾರಣ ಅದನ್ನು ವಿಶೇಷವಾಗಿ ಆಚರಿಸಲು ಅವರ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ.

ಕಳೆದ ವರ್ಷ ಇದೇ ದಿನ ಅಪ್ಪು ಅವರ ನಟನೆಯ ಕೊನೆಯ ಸಿನಿಮಾ ಆಗಿದ್ದ ಜೇಮ್ಸ್ ಚಿತ್ರ ರಿಲೀಸ್ ಆಗಿತ್ತು. ನಾಡಿನಾದ್ಯಂತ ಪುನೀತ್ ಅವರ ಹುಟ್ಟು ಹಬ್ಬವನ್ನು ಒಂದು ಜಾತ್ರೆ ರೀತಿ ಮಾಡಿ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸಿದ್ದರು. ಇವರ ಹುಟ್ಟು ಹಬ್ಬದ ಅಂಗವಾಗಿ ಅವರು ಮಾಡುತ್ತಿದ್ದ ರೀತಿ ತಾವು ಸಹ ಅವರ ಆದರ್ಶಗಳನ್ನು ರೂಢಿಸಿಕೊಂಡು ಸಮಾಜ ಸೇವೆ ಮಾಡಬೇಕು ಎಂದುಕೊಂಡು ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಇತ್ಯಾದಿಗಳನ್ನು ಏರ್ಪಡಿಸಿದ್ದರು.

ಪ್ರತಿ ಊರಿನಲ್ಲೂ ಅನ್ನಸಂತರ್ಪಣೆ ಅಭಿಮಾನಿಗಳಿಂದ ನೆರವೇರಿತ್ತು. ಈ ಬಾರಿ ಅದಕ್ಕಿಂತ ಒಂದು ಹೆಚ್ಚು ಮುಂದು ಹೋಗಿ ದೈವ ಸ್ವರೂಪವಾದ ಅಪ್ಪು ಅವರನ್ನು ದೇವರನ್ನಾಗಿ ಮಾಡಿ ಅವರ ಮಾಲೆ ಹಾಕುವ ನಿರ್ಧಾರ ಮಾಡಿದ್ದಾರೆ ಅವರ ಅಭಿಮಾನಿಗಳು. ದಕ್ಷಿಣ ಭಾರತದಲ್ಲಿ ಹೆಸರುವಾಸಿ ಆಗಿರುವ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಹಾಕುವ ರೀತಿ ಪುನೀತ್ ರಾಜಕುಮಾರ್ ಮಾಲೆಯನ್ನು ಹಾಕಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಅದಕ್ಕೆ ಈಗಾಗಲೇ ವಿಧಿ ವಿಧಾನ ಹೇಗಿರಬೇಕು ಎನ್ನುವ ನಿಯಮಾವಳಿಯನ್ನು ಸಹ ತಯಾರು ಮಾಡಿ ಹಂಚಿದ್ದಾರೆ. ಆ ಪಾಂಪ್ಲೆಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಬರೆದಿರುವ ಅಂಶಗಳು ಈ ರೀತಿ ಇದೆ. ಪುನೀತ್ ರಾಜ್ ಕುಮಾರ್ ಮಾಲೆಯನ್ನು ಹಾಕಬೇಕು, ಇದಕ್ಕೆ ಅಪ್ಪು ಡಾಲರ್ ಇರುವ ಮಾಲೆಯನ್ನು ಧರಿಸಬೇಕು. ಕೇಸರಿ ಪಡೆದ ಪಂಚೆ, ಶರ್ಟ್ ಮತ್ತು ಟವಲ್ ಅನ್ನು ಹಾಕಿಕೊಂಡು ಪುನೀತ್ ಅವರ ಭಾವಚಿತ್ರ ಇಟ್ಟುಕೊಂಡು ಪೂಜೆ ಮಾಡಲಾಗುತ್ತದೆ.

ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ಸ್ನಾನ ಮಾಡಬೇಕು. ದಿನದ ಮೂರು ಹೊತ್ತು ಕೂಡ ಕೇವಲ ಉಪಹಾರವನ್ನು ಸೇವಿಸಬೇಕು. 18ನೇ ತಾರೀಖಿನ ಬೆಳಗ್ಗೆ ಅಪ್ಪು ಪುಣ್ಯ ಭೂಮಿಗೆ ಬೇಟಿ ಕೊಟ್ಟು ದರ್ಶನ ಪಡೆದುಕೊಳ್ಳುವ ಮೂಲಕ ಇದು ಪೂರ್ತಿಗೊಳ್ಳುತ್ತದೆ. ಮಾಲೆ ಹಾಕಿದ್ದ ಸಮಯದಲ್ಲಿ ಯಾರು ಕೂಡ ಯಾವುದೇ ದುಶ್ಚಟ ಅಭ್ಯಾಸ ಇದ್ದರೂ ಅದನ್ನು ಮಾಡಬಾರದು, ಎಲ್ಲರಿಗೂ ಸಹ ಮಾಲೆ ಹಾಕಲು ಅನುಕೂಲತೆ ಇರುವುದಿಲ್ಲ ಎನ್ನುವ ಕಾರಣಕ್ಕೆ.

ಅವರವರ ಅವಸರಕ್ಕೆ ಅನುಸಾರವಾಗಿ ಐದು ದಿನಗಳು ಅಥವಾ 11 ದಿನಗಳು ಇರುವಾಗ ಬೇಕಾದರೂ ಮಾಲೆ ಹಾಕಬಹುದು ಎಂದು ಇದರಲ್ಲಿ ಬರೆಯಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಫೋಟೋ ಬಾರಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಸದ್ಯಕ್ಕೆ ವಿಜಯನಗರ ಜಿಲ್ಲೆಯಲ್ಲಿ ಈ ರೀತಿ ಯೋಜನೆ ಹಾಕಿದ್ದಾರೆ ಎನ್ನುವ ಮಾಹಿತಿಗಳ ಲಭ್ಯ ಆಗಿದ್ದು, ನಂತರ ಇದನ್ನು ಎಲ್ಲೆಡೆ ಹಬ್ಬುವುದರಲ್ಲಿ ಯಾವುದೇ ಅನುಮಾನ ಇಲ್ಲ.