Friday, June 9, 2023
HomeViral Newsಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ...

ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.

 

ಶ್ರೀನಿವಾಸ್ ಮೂರ್ತಿ (Shreenivas Murthy) ಅವರು ಈಗಷ್ಟೇ ರಿಲೀಸ್ ಆದ ಸೌತ್ ಇಂಡಿಯನ್ ಹೀರೋ (Sounth Indian hero kannada movie) ಎನ್ನುವ ಸಿನಿಮಾವನ್ನು ಚಿತ್ರತಂಡದ ಜೊತೆ ಅವರ ಅಪೇಕ್ಷೆ ಮೇರೆಗೆ ನೋಡಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಹೇಳುವುದರ ಜೊತೆಗೆ ಆ ಸಿನಿಮಾದ ನೀಡಿರುವ ಸಂದೇಶದ ಸಾರ ಮತ್ತು ಅದನ್ನು ಪ್ರಸ್ತುತಪಡಿಸಿರುವ ಕಲಾವಿದರ ಟ್ಯಾಲೆಂಟ್ ಮತ್ತು ಇದರಿಂದ ಜನರಿಗೆ ಏನು ಅರ್ಥ ಆಗಬೇಕು.

ಅವರಿಗಿಂತ ಮುಖ್ಯವಾಗಿ ಕನ್ನಡದ ಸ್ಟಾರ್ ಹೀರೋಗಳಿಗೆ (taunt for star heroes) ಇದು ಹೇಗೆ ಪಾಠ ಆಗಬೇಕು ಎನ್ನುವುದನ್ನೆಲ್ಲಾ ತಮ್ಮ ನೇರವಾಗಿ ಮತ್ತು ಕಠೋರವಾಗಿ ನುಡಿದಿದ್ದಾರೆ. ಇಷ್ಟು ದಿನ ಇದ್ದ ತಮ್ಮ ಮನದಾಳದ ಬೇಸರವನ್ನೆಲ್ಲ ಈ ಮಾತುಗಳ ಮೂಲಕ ಹೊರ ಹಾಕಿದ್ದಾರೆ ಎಂದೂ ಹೇಳಬಹುದು. ಪ್ರಸಕ್ತ ವಿದ್ಯಮಾನವನ್ನು ಎಲ್ಲರಂತೆ ಅವರು ಗಮನಿಸುತ್ತಾರೆ, ಸ್ಟಾರ್ ವಾರ್, ಕಲೆಕ್ಷನ್ ವಿಚಾರದಲ್ಲಿ ಮನಸ್ತಾಪ ಮತ್ತು ಅಭಿಮಾನಿಗಳಿಂದ ಮಿತಿಮೀರಿದ ವರ್ತನೆ.

ಈ ರೀತಿ ಅಪಾಯಕಾರಿ ಬೆಳವಣಿಗೆಗಳನ್ನೆಲ್ಲ ಗಮನಿಸಿರುವ ಅವರು ಸಿನಿಮಾ ಬಗ್ಗೆ ಮಾತನಾಡುವ ಸಮಯದಲ್ಲಿ ಇದೆಲ್ಲವನ್ನು ಸೇರಿಸಿ ಹೇಳಿದ್ದಾರೆ. ಅವರು ಈ ಸಿನಿಮಾ ಬಗ್ಗೆ ಹೇಳಿದ್ದು ಇಷ್ಟೆ, ಸೌತ್ ಇಂಡಿಯನ್ ಹೀರೋ ಸಿನಿಮಾ ನಿಜಕ್ಕೂ ಅದ್ಭುತವಾಗಿದೆ ಯಾವುದೇ ಸ್ಟಾರ್ ಗೂ ಕಡಿಮೆ ಇಲ್ಲದಂತೆ ಈ ಹೊಸ ಹೀರೋ ಸಾರ್ಥಕ್ ಅಭಿನಯಸಿದ್ದಾನೆ ಅದಕ್ಕೆ ನಟಿಯರು ಕೂಡ ಅಷ್ಟೇ ಚೆನ್ನಾಗಿ ಸಾತ್ ಕೊಟ್ಟಿದ್ದಾರೆ.

ಕಾಮಿಡಿ ಆಕ್ಟರ್ಗಳ ಅಭಿನಯವನ್ನು ಅಲ್ಲ ಕಳೆಯುವಂತಿಲ್ಲ. ಎಲ್ಲರೂ ಸೇರಿ ಒಂದೊಳ್ಳೆ ಚಿತ್ರವನ್ನು ಕನ್ನಡಕ್ಕೆ ತಂದಿದ್ದಾರೆ. ಈ ಹೀರೋ ಬಹಳ ಚೆನ್ನಾಗಿ ಲಾಂಚ್ ಮಾಡಿದ್ದಾರೆ ಮುಂದೆ ಇಂಡಸ್ಟ್ರಿಯ ಭರವಸೆ ನಾಯಕನೂ ಆಗುತ್ತಾನೆ. ಇದು ಕಾಂತರಾ ಸಿನಿಮಾದಷ್ಟೇ ಪ್ರಾಮುಖ್ಯತೆ ಇರುವ ಸಿನಿಮಾ ಎಂದು ಹೇಳಬಹುದು. ಈ ಸಿನಿಮಾವನ್ನು ಜನರು ನೋಡುವ ಜೊತೆಗೆ ಮೊದಲಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿರುವ ಹೀರೋಗಳು ಬಂದು ನೋಡಬೇಕು, ಯಾಕೆಂದರೆ ಇದು ಅವರಿಗೆ ಹೆಚ್ಚು ಅನ್ವಯವಾಗುತ್ತದೆ.

ಅವರೆಲ್ಲರೂ ಹೇಳುತ್ತಾರೆ ಅಭಿಮಾನಿಗಳು ನಾವು ಬೇಡ ಎಂದರು ಹಾರ ತರುತ್ತಾರೆ, ಅಭಿಷೇಕ ಮಾಡುತ್ತಾರೆ, ಕಟೌಟ್ ಹಾಕುತ್ತಾರೆ, ಬೇಡ ಎಂದರು ಇದನ್ನೆಲ್ಲ ಮಾಡುತ್ತಾರೆ ಎಂದು ಅದೆಲ್ಲ ಬರೀ ಬೂಟಾಟಿಕೆ ಮಾತು. ಅವರೆಲ್ಲರಿಗೂ ಕೂಡ ಅಭಿಮಾನಿಗಳು ಬೇಕೇ ಬೇಕು, ಈಗಿನ ಕಾಲದಲ್ಲಿ ಹೇಗಾಗಿದೆ ಎಂದರೆ ಅವರ ಸಿನಿಮಾ ಗೆದ್ದರೆ ಇವರಿಗೆ ಹೊಟ್ಟೆ ಕಿಚ್ಚು, ಇವರ ಚಿತ್ರ ಹೆಸರು ಮಾಡುತ್ತಿದ್ದರೆ ಮತ್ತೊಬ್ಬರನ್ನು ಚೂ ಬಿಟ್ಟು ತಮಾಷೆ ನೋಡುವುದು.

ಇದರಿಂದ ಇಂಡಸ್ಟ್ರಿ ಎಲ್ಲಿ ಬೆಳೆಯುತ್ತದೆ? ಅದರ ಬದಲು ಒಬ್ಬರಿಗೊಬ್ಬರು ಈ ರೀತಿ ಕಾಂಪಿಟೇಶನ್ ಹಾಕಿಕೊಳ್ಳಿ ನೀನು ಯಾವ ರೀತಿ ಸಬ್ಜೆಕ್ಟ್ ತೆಗೆದುಕೊಂಡು ಪಾತ್ರ ಮಾಡಿ ಗೆಲ್ಲುತ್ತೀಯೋ ಅದರ ದುಪ್ಪಟ್ಟು ಎಫರ್ಟ್ ಹಾಕಿ ನಾನು ಅದಕ್ಕಿಂತ ಒಳ್ಳೆ ಸಂದೇಶ ಇರುವ ಹಾಗೂ ಅದಕ್ಕಿಂತ ಮಹತ್ವವುಳ್ಳ ಪಾತ್ರದಲ್ಲಿ ಅಭಿನಯಿಸುತ್ತೇನೆ ಎಂದು ಚಾಲೆಂಜ್ ಮಾಡಿ ಅಂತಹ ಸಿನಿಮಾಗಳನ್ನು ತನ್ನಿ. ಇದರಿಂದ ಕನ್ನಡ ಹೆಸರು ಬರುತ್ತದೆ ಆ ರೀತಿ ಸಾಮರ್ಥ್ಯ ಸದ್ಯಕ್ಕೆ ಈಗಿನ ಯಾವ ನಟರಲ್ಲೂ ಇಲ್ಲ.

ಆ ರೀತಿ ಇದ್ದವರು ಒಬ್ಬರೇ ಅವರು ಡಾಕ್ಟರ್ ರಾಜಕುಮಾರ್ ಅವರು ಮಾತ್ರ ಎಂದು ರಾಜಕುಮಾರ ಅಣ್ಣಾವ್ರನ್ನು ನೆನೆದಿದ್ದಾರೆ. ಈ ಕಾಲದಲ್ಲಿ ಮಾರ್ನಿಂಗ್ ಶೋ ನೋಡಿಕೊಂಡು ಬಂದರೆ ಮಧ್ಯಾನದ ಅಷ್ಟೊತ್ತಿಗೆ ಆ ಸಿನಿಮಾ ಥೀಯೇಟರ್ ಅಲ್ಲಿ ಇರುವುದೇ ಇಲ್ಲ, ಈ ಸಿನಿಮಾ ಹಾಗಾಗುವುದು ಬೇಡ. ಇದು ಒಂದು ಒಳ್ಳೆ ವಿಷಯ ಇಟ್ಟು ಕೊಂಡಿರುವ ಬಂದಿರುವ ಸಿನಿಮಾಗೆ ಎಲ್ಲರೂ ಸಹಕರಿಸಿ ಸಿನಿಮಾ ಗೆಲ್ಲಿಸಿ ಎಂದಿದ್ದಾರೆ.