Sunday, June 4, 2023
HomeEntertainmentAnilKumble: ಇಂಗ್ಲೀಷ್ ಜಾಹೀರಾತಿನಲ್ಲಿ ಬಾಲಿವುಡ್ ಹಾಡು ಬೇಡ ಕನ್ನಡದ ಹಾಡು ಹೇಳುತ್ತೇನೆ ಎಂದು ಶಂಕರ್ ನಾಗ್...

AnilKumble: ಇಂಗ್ಲೀಷ್ ಜಾಹೀರಾತಿನಲ್ಲಿ ಬಾಲಿವುಡ್ ಹಾಡು ಬೇಡ ಕನ್ನಡದ ಹಾಡು ಹೇಳುತ್ತೇನೆ ಎಂದು ಶಂಕರ್ ನಾಗ್ ಅಭಿನಯದ ಹಾಡು ಹೇಳಿ ಕನ್ನಡಿಗರ ಮನಸ್ಸನ್ನು ಗೆದ್ದ ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ಕನ್ನಾಡಭಿಮಾನ

ಅನಿಲ್ ಕುಂಬ್ಳೆ (Anil Kumble) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಕ್ರಿಕೆಟ್(Cricket) ಜಗತ್ತನ್ನು ಆಳುತ್ತಿದ್ದ ವ್ಯಕ್ತಿ ಸದ್ಯಕ್ಕೆ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಕೋಚ್ ಆಗಿದ್ದಾರೆ. ವಿಶೇಷ ಏನೆಂದರೆ ಅನಿಲ್ ಕುಂಬ್ಳೆ ಕೂಡ ನಮ್ಮ ಕರ್ನಾಟಕದವರೇ ಸಾಮಾನ್ಯವಾಗಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವು ವ್ಯಕ್ತಿಗಳು ಕರ್ನಾಟಕವನ್ನು ತೊರೆದು ಮುಂಬೈ ಅಥವಾ ದೆಹಲಿಯಂತಹ ದೊಡ್ಡ ದೊಡ್ಡ ನಗರ ಪಟ್ಟಣಗಳಲ್ಲಿ ವಾಸ ಮಾಡುತ್ತಾರೆ ಕನ್ನಡ ಮರೆತೆ ಅಲ್ಲೆ ಸೆಟಲ್ ಆಗಿ ಬಿಡುತ್ತಾರೆ. ಆದರೆ ಅನಿಲ್ ಕುಂಬ್ಳೆ ಅವರು ಮಾತ್ರ ತಾವು ಹುಟ್ಟಿ ಬೆಳೆದ ನಾಡನ್ನು ಎಂದಿಗೂ ಕೂಡ ಮರೆತಿಲ್ಲ ಹಾಗೂ ಮರೆಯುವುದಿಲ್ಲ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರೆತಿದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಅನಿಲ್ ಕುಂಬ್ಳೆ ಖ್ಯಾತ ಕ್ರಿಕೆಟಿಗರ್ ಸ್ಪಿನ್ನರ್ ಬ್ಯಾಟ್ಸ್ಮನ್ ಕೂಡ ಹೌದು ಕಳೆದ ಎರಡು ದಶಕಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು. ಸದ್ಯಕ್ಕೆ ಕೋಚ್ ಆಗಿ ಈಗಲೂ ಕೂಡ ಕ್ರಿಕೆಟ್ ಸೇವೆಯನ್ನು ಮುಂದುವರಿಸಿದ್ದಾರೆ. ಇನ್ನು ಅನಿಲ್ ಕುಂಬ್ಳೆ ಅವರಿಗೆ ಕನ್ನಡ ಅಭಿಮಾನ ಹಾಗೂ ಕನ್ನಡ ಹಾಡುಗಳ ಮೇಲೆ ಇರುವ ಅಭಿಮಾನ ನಿಮಗೆ ತಿಳಿದೇ ಇದೆ. ಏಕೆಂದರೆ ಕಳೆದ ವರ್ಷ ಸರಿಗಮಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಅನಿಲ್ ಕುಂಬ್ಳೆ ಅವರು ವೇದಿಕೆಯ ಮೇಲೆ ಡಾ. ವಿಷ್ಣುವರ್ಧನ್ ಹಾಗೂ ಭಾರತಿ ಅಭಿನಯದ “ಮಾಮರವೆಲ್ಲೋ ಕೋಗಿಲೆ ಅಲ್ಲೇ” ಎಂಬ ಹಾಡನ್ನು ಹೇಡಿ ಎಲ್ಲರನ್ನೂ ಕೂಡ ರಂಜಿಸಿದರು.

ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ಅವರ ಜೊತೆಗೆ ಬಹಳ ಆತ್ಮೀಯ ಒಡನಾಟವನ್ನು ಹೊಂದಿರುವಂತಹ ಅನಿಲ್ ಕುಂಬ್ಳೆ ಅವರು ಆಗಾಗ ಗೆಟ್ ಗೆದರು ಪಾರ್ಟಿ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅಲ್ಲಿ ಕನ್ನಡ ಹಾಡುಗಳನ್ನು ಹಾಡುವ ಮೂಲಕ ತಮ್ಮ ಭಾಷಾಭಿಮಾನವನ್ನು ತೋರ್ಪಡಿಸುತ್ತಾರೆ. ಸದ್ಯಕ್ಕೆ ಈಗ ಮತ್ತೊಮ್ಮೆ ನಮಗೆ ಕನ್ನಡ ಅಭಿಮಾನ ಎಷ್ಟು ಇದೆ ಎಂಬುದನ್ನು ಅನಿಲ್ ಕುಂಬ್ಳೆ ಅವರು ತೋರಿಸಿದ್ದಾರೆ. ಹೌದು ಪ್ರತಿಷ್ಠಿತ ಇಂಗ್ಲಿಷ್ ಜಾಹೀರಾತು ಒಂದರಲ್ಲಿ ಅನಿಲ್ ಕುಂಬ್ಳೆ ಅವರು ಅಭಿನಯಿಸಿದ್ದಾರೆ. ಈ ಒಂದು ಜಾಹೀರಾತಿನಲ್ಲಿ 80ರ ದಶಕದ ಕಾಸ್ಟ್ಯೂಮ್ ಅನ್ನು ಧರಿಸಿ ಹಿಂದಿ ಹಾಡನ್ನು ಹೇಳಬೇಕು ಎಂದು ನಿರ್ಮಾಪಕರು ಹೇಳುತ್ತಾರೆ.

ಆಗ ಅನಿಲ್ ಕುಂಬ್ಳೆ ”ನೀವು ನನಗೆ 80ರ ದಶಕದ ಹೀರೋನಂತೆ ಕಾಸ್ಟ್ಯೂಮ್‌ ಹಾಕಲು ಹೇಳಿ ಬಾಲಿವುಡ್‌ ಹಾಡಲು ಹೇಳುತ್ತಿದ್ದೀರಿ. ಬಾಲಿವುಡ್‌ ಬೇಡ, 80ರ ಫೇಮಸ್‌ ಕನ್ನಡ ಹಾಡನ್ನು ಹಾಡುತ್ತೇನೆ” ಎಂದು ಡೈಲಾಗ್‌ ಆರಂಭಿಸುವ ಕುಂಬ್ಳೆ, ಕರಾಟೆ ಕಿಂಗ್‌ ಶಂಕರ್‌ನಾಗ್‌ ಅಭಿನಯದ ‘ಗೀತಾ’ ಚಿತ್ರದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಕುಣಿದು , ತಾಳಕ್ಕೆ ಕುಣಿದು ಎಂದು ಚಿಟಿಕೆ ಹಾಕುತ್ತಾ ಹಾಡು ಹೇಳುವ ಮೂಲಕ ಆಪ್‌ ಕುರಿತು ಮಾತನಾಡುತ್ತಾರೆ. ಸದ್ಯಕ್ಕೆ ಅನಿಲ್ ಕುಂಬ್ಳೆ ಅವರು ಜಾಹೀರಾತಿನಲ್ಲಿ ಕನ್ನಡ ಹಾಡನ್ನು ಹೇಳಿರುವಂತಹ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು ನೋಡುಗರನ್ನು ಗಮನ ಸೆಳೆದಿದೆ.

ಅಷ್ಟೇ ಅಲ್ಲದೆ ಅನಿಲ್ ಕುಂಬಳೆ ಅವರ ಮೇಲೆ ಇದ್ದಂತಹ ಒಲವು ಗೌರವ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ವಿಶ್ವನಾಥನ್‌ ಆನಂದ್‌ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಬಹಳ ವೈರಲ್‌ ಆಗುತ್ತಿದೆ. ”ಅನಿಲ್‌ ಕುಂಬ್ಳೆ, ನೀವು ಮತ್ತೆ ಮತ್ತೆ ಕನ್ನಡ ಪ್ರೀತಿಯನ್ನು ತೋರುತ್ತಲೇ ಇದ್ದೀರಿ. ಎಷ್ಟು ಸಾರಿ ಅಂತ ನಮ್ಮ ಹೃದಯ ಕದಿಯುತ್ತೀರಿ” ಎಂದು ಕ್ರೀಡಾಭಿಮಾನಿಗಳು, ಸಿನಿಪ್ರಿಯರು ಕಮೆಂಟ್ಸ್‌ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.