ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government) ಹಿರಿಯ ನಾಗರಿಕರಿಕ್ಕಾಗಿ (Senior Citizens) ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. 60 ವರ್ಷ ವರ್ಷಕ್ಕಿಂತ ಮೇಲ್ಪಟ್ಟವರನ್ನು ನಾವು ಹಿರಿಯ ನಾಗರಿಕರೆಂದು ಪರಿಗಣಿಸುತ್ತೇವೆ. ಇವರಿಗೆ ಎಲ್ಲ ವಿಷಯದಲ್ಲೂ ಕೂಡ ಮೊದಲ ಆದ್ಯತೆ ಇರುತ್ತದೆ.
ಹಿರಿಯ ನಾಗರಿಕರಿಗೆ ಗೌರವ ಮಾತ್ರವಲ್ಲದೆ ಅವರ ಬದುಕನ್ನು ಸರಾಗ ಗೊಳಿಸುವಂತಹ ಯೋಜನೆಗಳ ಅವಶ್ಯಕತೆ ಇರುತ್ತದೆ. ಇದನ್ನು ಮನಗಂಡಿರುವ ಸರ್ಕಾರವು ಇವರಿಗೆ ವಿಶೇಷ ವೈದ್ಯಕೀಯ ಸೌಲಭ್ಯಗಳು ಮಾತ್ರವಲ್ಲದೆ ಕೆಲ ಹಣಕಾಸಿನ ಯೋಜನೆಗಳನ್ನು ಜಾರಿಗೆ ತಂದಿದೆ. ಜೀವನ ನಿರ್ವಹಣೆಗಾಗಿ ಮಾಸಿಕ ಪೆನ್ಷನ್ (Pension) ಸೌಲಭ್ಯ ನೀಡಲಾಗಿದೆ.
ಶ್ರೀ ಲಕ್ಷ್ಮೀನಾರಾಯಣ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…
ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ ನೀಡುವ ಮೂಲಕ ಮತ್ತೊಂದು ವಿಧದಲ್ಲಿ ಹಣಕಾಸಿನ ಸಹಾಯ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗಾಗಿ ಇರುವ ಕೆಲ ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ರಾಷ್ಟ್ರೀಯ ವೃದ್ಯಾಪ್ಯ ಯೋಜನೆ (Rashtreeya Vruddapya Yojane) ಎನ್ನುವ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ಯೋಜನೆ (IGRVY) ಎಂದು ಹೆಸರಿನ ಈ ವೃದ್ಧಾಪ್ಯ ಈ ಯೋಜನೆಯಿಂದ 60 ವರ್ಷ ಮೇಲ್ಪಟ್ಟ BPL ರೇಷನ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರು ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯುತ್ತಾರೆ. 60 ರಿಂದ 79ನೇ ವಯಸ್ಸಿನ ಒಳಗಿನವರು 300ರೂ. ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರು 500ರೂ. ಮಾಸಿಕ ಪಿಂಚಣಿ ಪಡೆಯುತ್ತಾರೆ.
ಜಿಲ್ಲಾ ಪಂಚಾಯತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ವೇತನ 24,000/-
● ಅಟಲ್ ಪಿಂಚಣಿ ಯೋಜನೆ (Atal Pension Scheme) ಎನ್ನುವ ಯೋಜನೆ ಕೂಡ ಲಭ್ಯವಿದ್ದು ಈ ಯೋಜನೆಯಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ವಯಸ್ಸಾದ ಮೇಲೆ ಮಾಸಿಕ ಪಿಂಚಣಿ ಸಿಗುತ್ತದೆ. ಆದರೆ ಇವರು ಈ ಯೋಜನೆಯಡಿ ಕನಿಷ್ಠ 20 ವರ್ಷಗಳ ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿದರೂ ಗರಿಷ್ಠ 5,000ರೂ. ದವರೆಗೆ ಮಾಸಿಕ ಪಿಂಚಣಿ ಪಡೆಯಬಹುದು.
● ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ (PM Narenda Modi) ಅವರು ಪ್ರಧಾನ ಮಂತ್ರಿ ವಯೋ ವಂದನೆ ಯೋಜನೆ (PMVVY) ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಇದು ಹಿರಿಯ ನಾಗರಿಕರಿಗಾಗಿರುವ ವಿಶೇಷ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಿರಿಯ ನಾಗರಿಕರು 60 ವರ್ಷ ವಯಸ್ಸಿನವರೆಗೂ ಕೂಡ ಹಣವನ್ನು ಹೂಡಿಕೆ ಮಾಡಿ 60 ವರ್ಷ ವಯಸ್ಸಾದ ಬಳಿಕ ತಮ್ಮ ಬದುಕಿನ ನಿರ್ವಹಣೆಗಾಗಿ ಉಳಿತಾಯಕ್ಕೆ ಅನುಗುಣವಾದ ಮಾಸಿಕ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಾರೆ. ಇದರಿಂದ ಎಷ್ಟೋ ಹಿರಿಯ ನಾಗರಿಕರ ಜೀವನ ನಿರ್ವಹಣೆ ಸರಳವಾಗಿದೆ ಮತ್ತು ಈಗ ದೇಶದಾದ್ಯಂತ ಅನೇಕ ಹಿರಿಯ ನಾಗರಿಕರು ಈ ಯೋಜನೆಯ ಭಾಗವಾಗಿದ್ದಾರೆ.
ಉಪ್ಪಿನ ಜಾರಿನಲ್ಲಿ ಈ 3 ವಸ್ತುಗಳನ್ನು ಇಟ್ಟು ನೋಡಿ ಸಾಕು, ಬೇಡ ಅನ್ನುವಷ್ಟು ಹಣ ಬರುತ್ತಲೇ ಇರುತ್ತದೆ.!
● ಸೀನಿಯರ್ ಸಿಟಿಜನ್ ಗಳಿಗಾಗಿ ಇರುವ ಮತ್ತೊಂದು ವಿಶೇಷವಾದ ಯೋಜನೆ ಯಾವುದೆಂದರೆ ಬ್ಯಾಂಕ್ ಗಳು ಅಂಚೆ ಕಚೇರಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ನಿಶ್ಚಿತ ಠೇವಣಿ (FD) ಮೇಲೆ ನೀಢುವ ಬಡ್ಡಿದರ. ಸಾಮಾನ್ಯ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. 5 ವರ್ಷಗಳಿಗಿಂತ ಹೆಚ್ಚಿನ ಸಮಯ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ 1% ವರೆಗೂ ಹೆಚ್ಚು ಬಡ್ಡಿದರ ಸಾಮಾನ್ಯರಿಗಿಂತ ಸಿಗುತ್ತದೆ. ಇದರ ಮೂಲಕ ಹಿರಿಯ ನಾಗರಿಕದ ಬದುಕು ಸುಲಭವಾಗಿದೆ. ಈ ರೀತಿ ಇನ್ನೂ ಅನೇಕ ಯೋಜನೆಗಳು ಲಭ್ಯವಾಗಿದ್ದು, ಸರ್ಕಾರ ಅಧಿಕೃತ ವೆಬ್ಸೈಟ್ ಗಳಲ್ಲಿ ಸರ್ಚ್ ಮಾಡುವ ಮೂಲಕ ಅವುಗಳ ಸಂಪೂರ್ಣ ವಿವರವನ್ನು ಪಡೆದುಕೊಳ್ಳಬಹುದು.