ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ಬರಿ ಪವರ್ ಸ್ಟಾರ್ ಮಾತ್ರ ಆಗಿ ಉಳಿದಿಲ್ಲ ಬದಲಾಗಿ ಇಡೀ ಕರ್ನಾಟಕದ ಆಸ್ತಿಯಾಗಿ ಕನ್ನಡಿಗರ ಮನೆ ಮಗನಾಗಿ ಕನ್ನಡದ ಕಣ್ಮಣಿ ಆಗಿ ಮರೆಯಲಾಗದ ಮಾಣಿಕ್ಯನಾಗಿದ್ದಾರೆ. ಅಪ್ಪು ಅವರ ಅಭಿನಯಕ್ಕಾಗಿ ಬಾಲ್ಯದಿಂದಲೇ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಆಡುವ ವಯಸ್ಸಿನಲ್ಲಿಯೇ ರಾಷ್ಟ್ರಪತಿಯ ಬಳಿ ಹೋಗಿ ಬೆಟ್ಟದ ಹೂ ಸಿನಿಮಾ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಗಳಿಸಿ ಬಂದ ದಿಟ್ಟ ಬಾಲಕ ಪುನೀತ. ಇದಲ್ಲದೆ ಸಿನಿಮಾ ವಿಚಾರವಾಗಿ ಈಗಾಗಲೇ ಸಾಕಷ್ಟು ಅವಾರ್ಡ್ಗಳು ಅವರನ್ನು ಅರಸಿ ಬಂದಿವೆ. ಆದರೆ ಕರ್ನಾಟಕದ ಮಂದಿ ಅವರ ಮೇಲಿರುವ ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನದ ಮುಂದೆ ಬೇರೆ ಯಾವ ಅವಾರ್ಡ್ ಕೂಡ ಇಲ್ಲ ಎಂದರೆ ಅದು ಅತಿಶೋಕ್ತಿ ಆಗಲಾರದು.
ಅಷ್ಟ ಮಟ್ಟಿಗೆ ಅಪ್ಪುವನ್ನು ಇಂದು ಅಖಂಡ ಕರ್ನಾಟಕ ಕೊಂಡಾಡುತ್ತಿದೆ. ಅಪ್ಪು ಅವರು ಮಾಡಿರುವ ಸಮಾಜ ಸೇವೆ ಅವರ ಅಗಲಿಕೆಗೆ ಮುನ್ನ ಜನಸಾಮಾನ್ಯರಿಗೆ ತಿಳಿಯದೆ ಹೋಯಿತು. ಅವರು ಮಾಡಿದ ಎಷ್ಟೋ ಸಹಾಯಗಳು ಅವರ ಹತ್ತಿರದ ಬಳಗಕ್ಕೂ ಕೂಡ ತಿಳಿದಿರಲಿಲ್ಲ. ಅಷ್ಟರಮಟ್ಟಿಗೆ ಬಲಗೈ ಕೊಟ್ಟದ್ದು ಎಡಗೈ ಗೂ ತಿಳಿಯಬಾರದು ಎನ್ನುವ ಸಂಸ್ಕಾರ ಹೊಂದಿದ್ದ ಈತ ಕರ್ನಾಟಕಕ್ಕಾಗಿ ಮಾಡಿರುವುದು ಅಷ್ಟಿಷ್ಟು ಉಪಕಾರ ಅಲ್ಲ.
ಕರ್ನಾಟಕದ ರೈತರಿಗಾಗಿ ಉಚಿತವಾಗಿ ನಂದಿನಿ ಹಾಲಿನ ಜಾಹಿರಾತುಗಳಲ್ಲಿ ಅಭಿನಯಿಸಿದ್ದರು. ಬೇರೆ ಸಿನಿಮಾಗಳಿಗಾಗಿ ಹಾಡುತ್ತಿದ್ದ ಹಾಡುಗಳಿಂದ ಹಾಗೂ ಬೇರೆ ಜಾಹೀರಾತುಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪಡೆಯುತ್ತಿದ್ದ ಸಂಭಾವನೆಯನ್ನು ಪೂರ್ತಿಯಾಗಿ ಸಮಾಜಸೇವೆಕ್ಕಾಗಿ ಮೀಸಲಿಟ್ಟಿದ್ದರು. ಮೈಸೂರಿನ ಶಕ್ತಿಧಾಮ, ಅದೆಷ್ಟೋ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಇವುಗಳಿಗೆಲ್ಲಾ ಸಾಕಷ್ಟು ಹಣವನ್ನು ಠೇವಣಿ ಇಟ್ಟು ನೋಡಿಕೊಳ್ಳುತ್ತಿದ್ದ ಅಪ್ಪು ಇಲ್ಲದೆ ಮತ್ತೊಮ್ಮೆ ಎಲ್ಲರೂ ಅನಾಥರಾಗಿದ್ದಾರೆ.
ಇವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಈ ವರ್ಷದಂದು ಕನ್ನಡ ರಾಜ್ಯೋತ್ಸವದ ದಿನ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು ಮತ್ತು ಇದಕ್ಕೂ ಮುನ್ನ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಮ.ರ.ಣೋ.ತ್ತ.ರ ಗೌರವ ಡಾಕ್ಟರೇಟ್ ಅನ್ನು ಕೂಡ ನೀಡಿತ್ತು. ಇದಾದ ಬಳಿಕ ಅಪ್ಪು ಅವರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಮತ್ತೊಂದು ಸನ್ಮಾನ ನಡೆಯುತ್ತಿದೆ.
ಈ ಬಾರಿ ಬೆಂಗಳೂರಿನ ಪ್ರಮುಖ ರಸ್ತೆ ಒಂದಕ್ಕೆ ಅಪ್ಪು ಹೆಸರು ಇಡುವ ಮೂಲಕ ಅಪ್ಪು ಅವರಿಗೆ ಗೌರವ ನೀಡಲಾಗುತ್ತಿದೆ. ಅಪ್ಪು ಅವರ ಸ್ಮಾರಕ ಇರುವ ಎಂಟು ಕಿಲೋಮೀಟರ್ ಉದ್ದದ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ಘೋಷಣೆ ಮಾಡುವುದಾಗಿ ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ. ಈಗಾಗಲೇ ಕರ್ನಾಟಕದ ಪ್ರತಿ ಗ್ರಾಮದ ತಾಲೂಕಿನ ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಟ್ಟು ಅಭಿಮಾನ ತೋರಿದ್ದಾರೆ.
ಅಲ್ಲದೆ ಎಷ್ಟೋ ಸರ್ಕಲ್ಗಳಲ್ಲಿ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿಲ್ಲಿಸಿ ಆ ಸರ್ಕಲ್ ಗೆ ಪುನೀತ್ ರಾಜಕುಮಾರ್ ಸರ್ಕಲ್ ಅಂದು ಹೆಸರು ಕೊಟ್ಟು ತಮ್ಮ ಅಭಿಮಾನ ಮೆರೆದಿದ್ದಾರೆ. ಆದರೆ ಬೆಂಗಳೂರಿನ ವಿಷಯದಲ್ಲಿ ಮೊದಲಿನಿಂದಲೂ ಅಪ್ಪು ಅವರ ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಸ್ವಲ್ಪ ಗೊಂದಲ ಇತ್ತು ಹೀಗಾಗಿ ತಡವಾದರೂ ಸರಿಯಾದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಅಪ್ಪು ಅವರು ಮಾಡಿರುವ ಸೇವೆಯನ್ನು ನೆನೆದರೆ ಸದ್ಯಕ್ಕೆ ಸರ್ಕಾರ ಮಾಡುತ್ತಿರುವುದು ಬಹಳ ಕಡಿಮೆಯೇ, ಏನನ್ನು ಬಯಸದೆ ಪರೋಪಕಾರ ಮಾಡುತ್ತಿದ್ದ ಅಪ್ಪು ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ. ಅವರಿಲ್ಲದೆ ಇಂದು ನಾವು ಏನು ಮಾಡಿದರು ಕೂಡ ಅದು ತುಂಬಾ ಕಡಿಮೆ ಎನಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.