ನಟಿ ಅನುಪಮ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಅಕ್ಕ ಎಂಬ ಧಾರಾವಾಹಿಯಿಂದ ಖ್ಯಾತಿ ಪಡೆದರು ತದನಂತರ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡರು. ಇದಕ್ಕೂ ಮುಂಚೆ ಇವರು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿದ್ದರು ಈ ಕಾರ್ಯಕ್ರಮದಲ್ಲಿ 100 ದಿನಗಳ ಕಾಲ ಪೂರೈಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದರೂ. ಆದರೂ ಕೂಡ ಅನುಪಮಾ ಅವರು ಅನುಭವಿಸಿದಂತಹ ಕಷ್ಟ ಒಂದೆರಡು ಅಲ್ಲ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದಾದ ಮೇಲೆ ಹೇಗೋ ಕಿರುತೆರೆಯಲ್ಲಿ ಅವಕಾಶವನ್ನು ತಿಟ್ಟಿಸಿಕೊಂಡು ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಬಿಗ್ ಬಾಸ್ ನಿಂದ ಕನ್ನಡ ಕೋಗಿಲೆ ಎಂಬ ಕಾರ್ಯಕ್ರಮದಲ್ಲಿ ಆಂಕರ್ ಆಗಿ ಮೊದಲ ಬಾರಿಗೆ ಆಂಕರಿಂಗ್ ವೃತ್ತಿಯನ್ನು ಪ್ರಾರಂಭ ಮಾಡುತ್ತಾರೆ.
ನಂತರ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಳ್ಳುತ್ತಾರೆ ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ರಾಜಾರಾಣಿ ಭಾಗ ಒಂದು ಕಾರ್ಯಕ್ರಮವನ್ನು ಕೂಡ ಬಹಳ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾರೆ. ಆದರೆ ರಾಜ ರಾಣಿ ಭಾಗ ಎರಡರಲ್ಲಿ ಮಾತ್ರ ಇವರು ನಿರೂಪಕಿಯಾಗಿ ಕಾಣಿಸಿಕೊಳ್ಳುವುದಿಲ್ಲ ಇದರಿಂದ ಸಾಕಷ್ಟು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಾರೆ. ಅದರ ಜೊತೆಗೆ ಅನುಪಮ ಗೌಡ ಅವರ ಬಗ್ಗೆ ಇಲ್ಲ ಸಲ್ಲದ ಪದಂತಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಪ್ರಾರಂಭವಾಗುತ್ತದೆ. ಇವೆಲ್ಲವನ್ನು ನೋಡಿದಂತಹ ಅನುಪಮ ಗೌಡ ಅವರ ಸ್ವತಃ ಲೈವ್ ಮತ್ತು ರಾಜ ರಾಣಿ ಕಾರ್ಯಕ್ರಮದಿಂದ ಹೊರ ಬಂದಿದೆ ಕಾರಣ ನನಗೂ ಕೂಡ ತಿಳಿದಿಲ್ಲ ನಾನು ಯಾವುದೇ ಕೆಲಸದಲ್ಲಿ ನಿರತವಾಗಿಲ್ಲ ಆದಷ್ಟು ಬೇಗ ಉತ್ತಮ ಶೋನೊಂದಿಗೆ ನಿಮ್ಮ ಮುಂದೆ ಮತ್ತೆ ಬರುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದರು.
ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಅನುಪಮ ಗೌಡ ಅವರು ಗರ್ಭಿಣಿ ಆಗಿರುವಂತಹ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಅಭಿಮಾನಿಗಳಿಗೆ ಆಶ್ಚರ್ಯ ಉಂಟಾಗುತ್ತದೆ ಏಕೆಂದರೆ ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ರಾಜ ರಾಣಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಗರ್ಭಿಣಿ ಆಗುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು ಆದರೆ ಈ ಫೋಟೋ ಮತ್ತು ವಿಡಿಯೋಗಳು ನಿಜವಾದದ್ದು ಅಲ್ಲ. ಹೌದು ಅನುಪಮ ಗೌಡ ಅವರು ತಮ್ಮ ದೀರ್ಘಕಾಲದ ಗೆಳತಿ ಅವರ ಬೇಬಿ ಶವರ್ ಕಾರ್ಯಕ್ರಮ ಒಂದಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಸ್ನೇಹಿತರೆಲ್ಲರೂ ಒಟ್ಟಾಗಿ ಸೇರಿ ಗರ್ಭಿಣಿ ಆದಂತಹ ವೇಶ ಧರಿಸಿ ಸ್ನೇಹಿತೆಗೆ ಖುಷಿ ಕೊಡುವ ಸಲುವಾಗಿ ತಾವು ಕೂಡ ಗರ್ಭಿಣಿ ಆಗಿರುವ ರೀತಿಯಲ್ಲಿ ವೇಶ ಧರಿಸುತ್ತಾರೆ.
ಈ ಫೋಟೋ ಮತ್ತು ವಿಡಿಯೋಗಳನ್ನು ಸ್ವತಃ ಅನುಪಮ ಗೌಡ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ ಇದನ್ನು ನೋಡಿದಂತಹ ಅಭಿಮಾನಿಗಳಿಗೆ ಒಂದು ಕ್ಷಣ ಶಾ.ಕ್ ಆಗುತ್ತದೆ. ತದನಂತರ ತಿಳಿಯುತ್ತದೆ ಇದು ನಿಜವಾದದ್ದು ಅಲ್ಲ ಅಂತ ಆಗ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ದೊರೆಯುತ್ತದೆ ಸದ್ಯಕ್ಕೆ ಯಾವುದೇ ಸಾಮಾಜಿಕ ಜಾಲತಾಣ ಖಾತೆ ನೋಡಿದರು ಕೂಡ ಅನುಪಮ ಗೌಡ ಅವರಿಗೆ ಸಂಬಂಧಪಟ್ಟಂತಹ ಈ ಫೋಟೋ ಮತ್ತೆ ವಿಡಿಯೋಗಳ ವೈರಲ್ ಆಗುತ್ತಿದೆ. ಅಸಲಿಗೆ ಇದು ತಮಾಷೆಗಾಗಿ ಮಾಡಿದಂತಹ ವಿಡಿಯೋ ಆಗಿದೆ ಅಭಿಮಾನಿಗಳು ಇದನ್ನು ಗಂಭೀರವಾಗಿ ಪರಿಗಣಿಸಬಾರದು ಒಮ್ಮೆ ಈ ಫನ್ನಿ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ನೀವು ಕೂಡ ನಕ್ಕು ಮುಂದೆ ಸಾಗುತ್ತೀರಾ. ಅನುಪಮಾ ಗೌಡ ಅವರು ಮಾಡಿದಂತಹ ಈ ಫನ್ನಿ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.