ಅಪ್ಪನ ಸ.ಮಾ.ಧಿ ಮುಂದೆ ನಿಂತು ಅಳುತ್ತಿದ್ದ ವಂದಿತಾ ನೋಡಿ ಇವತ್ತು ಕಣ್ಣೀರು ಹಾಕಬಾರದು ಎಂದು ವಂದಿತಾಗೆ ಧೈರ್ಯ ತುಂಬಿದ ರಾಘಣ್ಣ.

 

ಕರ್ನಾಟಕದಲ್ಲಿ ಇಂದು ಅಪ್ಪು ಹುಟ್ಟು ಹಬ್ಬದ ಸಂಭ್ರಮ. ಅಪ್ಪು ಅವರ ಅಗಲಿಕೆ ನಂತರ ಅಪ್ಪು ಅವರ ಹುಟ್ಟು ಹಬ್ಬದ ದಿನ ಮತ್ತು ಅವರ ಪುಣ್ಯ ಸ್ಮರಣೆಯ ದಿನವನ್ನು ಕರ್ನಾಟಕದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಆದರ್ಶ ಪುರುಷ, ಸಿನಿಮಾ ಇಂಡಸ್ಟ್ರಿಯ ಮರೆಯಲಾಗದ ಮಾಣಿಕ್ಯ, ರಾಜವಂಶದ ಕೀರ್ತಿ ಕಳಶ, ಕರುನಾಡ ರಾಜಕುಮಾರನನ್ನು ಮಿಸ್ ಮಾಡಿಕೊಂಡಿರುವ ಜನ ಅವರು ಇದ್ದಾಗ ಎಷ್ಟು ಪ್ರೀತಿ ಅಭಿಮಾನ ತೋರುತ್ತಿದ್ದರು ಅದಕ್ಕಿಂತಲೂ ಮಿಗಿಲಾಗಿ ಈಗ ಇನ್ನೂ ಸಹ ವಿಜೃಂಭಣೆಯಿಂದ ಅಪ್ಪು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ.

ಆದರೆ ಇದುವರೆಗೆ ಅಪ್ಪು ಅಭಿಮಾನಿಗಳು ಅಪ್ಪು ಅವರ ಮನೆ ಮುಂದೆ ಬಂದು ಕೇಕ್ ಕಟ್ ಮಾಡಿಸಿ ಖುಷಿಪಡುತ್ತಿದ್ದರು ಆದರೆ ಈಗ ಕಂಠೀರವ ಸ್ಟುಡಿಯೋದಲ್ಲಿ ಇರುವ ಅವರ ಪುಣ್ಯ ಸ್ಮಾರಕದ ಬಳಿ ಈ ಆಚರಣೆ ನಡೆಯುತ್ತಿದೆ. ಮಧ್ಯರಾತ್ರಿ ಇಂದಲೇ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಅಪ್ಪು ಪುಣ್ಯ ಸ್ಮಾರಕದ ಬಳಿ ಧಾವಿಸಿದ್ದಾರೆ. ದೊಡ್ಮನೆಯಿಂದ ರಾಘಣ್ಣ ಹಾಗೂ ಅವರ ಧರ್ಮಪತ್ನಿ ಮಂಗಳ ರಾಘವೇಂದ್ರ ರಾಜಕುಮಾರ್, ವಿನಯ್ ರಾಜ್ ಕುಮಾರ್, ಯುವ ರಾಜ್‍ಕುಮಾರ್, ಅಪ್ಪು ಮುದ್ದಿನ ಮಗಳು ವಂದಿತ ಹಾಗೂ ಕುಟುಂಬದ ಮತ್ತಿತ್ತರ ಸದಸ್ಯರೆಲ್ಲಾ ಬಂದು ಅಪ್ಪು ಪುಣ್ಯ ಸ್ಮಾರಕದ ಎದುರು ನಿಂತು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ವೇಳೆ ಅಭಿಮಾನಿಗಳು ಅಪ್ಪುಗಾಗಿ ರೆಡಿ ಮಾಡಿ ತಂದಿದ್ದ ಕೇಕ್ ಅನ್ನು ರಾಘಣ್ಣ ಅಪ್ಪು ಮಗಳಿಗೆ ಕಟ್ ಮಾಡಲು ಹೇಳಿದ್ದಾರೆ, ಜೊತೆಗೆ ಅಪ್ಪನನ್ನು ನೆನೆದು ಕಣ್ಣೀರು ಹಾಕಿದ ಮಗಳಿಗೆ ಸಮಾಧಾನ ಕೂಡ ಮಾಡಿದ್ದಾರೆ. ಈ ದಿನ ಅಳಬಾರದು ಮಗಳೇ ಎಂದು ಹೇಳಿ ವಂದಿತಾಳನ್ನು ಸಮಾಧಾನ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಂದಿತಾ ಅಪ್ಪು ಅವರ ಕಿರಿಯ ಮಗಳು, ಅಪ್ಪನನ್ನು ಬಹಳ ಹಚ್ಚಿಕೊಂಡಿದ್ದರು.

ಪ್ರತಿದಿನ ಎಷ್ಟೇ ಕೆಲಸ ಇದ್ದರೂ ಸಂಜೆ ವೇಳೆ ಮಗಳನ್ನು ಕರೆದುಕೊಂಡು ಒಂದು ರೌಂಡ್ ವಾಕ್ ಮಾಡದೆ ನನ್ನ ದಿನ ಮುಗಿಯುವುದೇ ಇಲ್ಲ ಎಂದು ಕೆಲವು ಇಂಟರ್ವ್ಯೂಗಳಲ್ಲಿ ಪುನೀತ್ ಹೇಳಿಕೊಂಡಿದ್ದರು. ಇಂದು ಪಾಪ ಆ ಪುಟ್ಟ ಮನಸ್ಸಿಗೆ ಅಪ್ಪನ ಅಗಲಿಕೆ ನೋವು ಅದೆಷ್ಟು ಭಾರವಾಗುತ್ತಿದೆಯೋ ಆದರೂ ಸಹ ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳಾದ ವಿನಯ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಇಬ್ಬರು ಅಣ್ಣಂದಿರು ವಂದಿತಾ ಮತ್ತು ಧೃತಿ ಅವರಿಗೆ ಅಪ್ಪ ಸ್ಥಾನದಲ್ಲಿ ಜೊತೆಗೆ ನಿಂತು ಜೋಪಾನ ಮಾಡುತ್ತಿದ್ದಾರೆ.

ರಾಘಣ್ಣ ಹಾಗೂ ಶಿವಣ್ಣ ದಂಪತಿಗಳು ಸಹ ಈ ಮಕ್ಕಳನ್ನು ಮಡಿಲಿಗೆ ಹಾಕಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಆದರೂ ಅಪ್ಪು ಹುಟ್ಟು ಹಬ್ಬದ ದಿನ ಅಪ್ಪನ ಸ್ಮಾರಕದ ಎದುರು ನಿಂತು ವಂದಿತ ಅಳುತ್ತಿದ್ದದ್ದು ನೋಡಿದರೆ ಎಲ್ಲರ ಕರುಳು ಚುರುಕ್ ಎನ್ನುವಂತಿತ್ತು. ಇದ್ದಕ್ಕಿದ್ದಂತೆ ಮಧ್ಯರಾತ್ರಿ ಇಂದ ಬೆಂಗಳೂರಿನಲ್ಲಿ ವರ್ಣನ ಆರ್ಭಟ ಕೂಡ ನಡೆದಿದೆ. ಇದರ ನಡುವೆಯೂ ಅಲುಗಾಡದ ಅಪ್ಪು ಅಭಿಮಾನಿಗಳು ಈ ಸಾಧಕನ ಹುಟ್ಟುಹಬ್ಬವನ್ನು ಮಳೆ ನಡುವೆ ಆಚರಿಸಿದ್ದಾರೆ.

ಇದೆಲ್ಲ ನೋಡುತ್ತಿದ್ದರೆ ಆಕಾಶವೇ ಅಪ್ಪುವನ್ನು ನೋಡಿ ಎಂದು ಕಣ್ಣೀರು ಹಾಕಿದೆ ಎಂದು ಅನಿಸದೇ ಇರದು. ಅಪ್ಪು ಅವರ ಆದರ್ಶಗಳನ್ನು ಅಳವಡಿಸಿಕೊಂಡಿರುವ ಅವರ ಅಭಿಮಾನಿಗಳು ಈ ದಿನ ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಮುಂತಾದವುಗಳನ್ನು ನಡೆಸಿ ಅಪ್ಪು ಹೆಸರಿಗೆ ಗೌರವ ಸೂಚಿಸಲಿದ್ದಾರೆ. ಈ ರೀತಿ ಅಪ್ಪು ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಿದ್ದಾರೆ.

Leave a Comment