Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಅಂದು ಆಟೋದಲ್ಲಿ ಆಶ್ವಿನಿ ಜೊತೆ ಕುಳಿತುಕೊಂಡು ಆರಾಮಾಗಿ ಸುತ್ತಾಡಿದ ಅಪ್ಪು ಅವರ ವಿಡಿಯೋ ವೈರಲ್, ಈ ಕ್ಯೂಟ್ ಮೂಮೆಂಟ್ ನೋಡಿ.

Posted on July 11, 2022July 11, 2022 By Kannada Trend News No Comments on ಅಂದು ಆಟೋದಲ್ಲಿ ಆಶ್ವಿನಿ ಜೊತೆ ಕುಳಿತುಕೊಂಡು ಆರಾಮಾಗಿ ಸುತ್ತಾಡಿದ ಅಪ್ಪು ಅವರ ವಿಡಿಯೋ ವೈರಲ್, ಈ ಕ್ಯೂಟ್ ಮೂಮೆಂಟ್ ನೋಡಿ.

ಅಪ್ಪು ಅವರು ಹಲವಾರು ವಿಷಯಗಳಿಂದ ನಮಗೆ ಸ್ಪೂರ್ತಿಯಾಗಿದ್ದಾರೆ ಅಪ್ಪು ಅವರಿಗೆ ಇಷ್ಟೊಂದು ಅಭಿಮಾನಿಗಳು ಇರಲು ಕಾರಣ ಅವರ ಆದರ್ಶ ವ್ಯಕ್ತಿತ್ವ. ಇಂದು ಅವರಿಲ್ಲದರು ಕೂಡ ಅವರು ಬದುಕಿದ ರೀತಿ ಮನುಷ್ಯರಾಗಿ ಬದುಕುವ ಎಲ್ಲರಿಗೂ ಕೂಡ ರೋಲ್ ಮಾಡಲ್ ಎನ್ನಬಹುದು. ಅಪ್ಪು ಅವರು ಒಬ್ಬ ಕನ್ನಡದ ಮೇರು ನಟನ ಪುತ್ರನಾದರು ಕೂಡ, ಹುಟ್ಟುವಾಗದಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟುವಷ್ಟು ಶ್ರೀಮಂತ ಆಗಿದ್ದರು ಕೂಡ ಅವರು ಬೆಳೆಯುತ್ತಿದ್ದಂತೆ ತುಂಬಾ ಪ್ರಬುದ್ಧತೆಯಿಂದ ನಡೆದುಕೊಂಡರು ಹಾಗೂ ತುಂಬಾ ಸರಳ ಜೀವನವನ್ನು ಅನುಸರಿಸಿ ಪ್ರತಿ ಕ್ಷಣಕ್ಕೂ ಕೂಡ ಬೆಲೆಕೊಟ್ಟು ಯಾವಾಗಲೂ ನಗುಮುಖದಿಂದ ಕೂಡಿದ್ದು ಸುತ್ತಲಿದ್ದವರೆಲ್ಲರಿಗೂ ಬೆಟ್ಟದಷ್ಟು ಪ್ರೀತಿ ಕೊಡುತ್ತಿದ್ದರು. ಅವರು ಅವರ ಕುಟುಂಬದ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸ ಅವರಿಗೆ ಕೊಡುತ್ತಿದ್ದ ಸಮಯ ಹಾಗೂ ಅಭಿಮಾನಿಗಳ ಜೊತೆ ಅವರು ನಡೆದುಕೊಳ್ಳುತ್ತಿದ್ದ ವರ್ತನೆ ಹಾಗೂ ಕನ್ನಡದ ಜನತೆಗೆ ಒಳಿತು ಮಾಡಲು ಅವರು ಮಾಡಿದ ಸಹಾಯಗಳು ಎಲ್ಲರಿಗೂ ಸ್ಪೂರ್ತಿವಾಗುವಂಥದ್ದು.

ಅಪ್ಪು ಅವರಿಗಿದ್ದ ಶ್ರೀಮಂತಿಕೆಗೆ ಅವರು ದಿನಕ್ಕೆ 100 ಬಟ್ಟೆ ಬೇಕಾದರೂ ಬದಲಾಯಿಸಬಹುದಾಗಿತ್ತು ಆದರೆ ನಾನು ಏನು ಮಾಡುತ್ತೇನೆ ನನ್ನ ಅಭಿಮಾನಿಗಳು ನನ್ನನ್ನು ಗಮನಿಸಿ ಅದನ್ನೇ ಮಾಡಲು ಪ್ರಯತ್ನ ಪಡುತ್ತಾರೆ ಹಾಗಾಗಿ ನಾನು ಅವರಿಗೆ ಒಳ್ಳೆಯ ರೀತಿಯಲ್ಲಿ ಸ್ಪೂರ್ತಿಯಾಗಲು ಇಷ್ಟಪಡುತ್ತೇನೆ ಒಂದು ಒಳ್ಳೆಯ ಬಟ್ಟೆ ಸಾಕು 10 ಕಾರ್ಯಕ್ರಮವಿದ್ದರೂ ಕೂಡ ದಿನಪೂರ್ತಿ ನಾನು ಅದೇ ಕಾಸ್ಟ್ಚೂಮ್ ಅಲ್ಲಿ ಓಡಾಡುತ್ತೇನೆ ಎನ್ನುತ್ತಿದ್ದರು ಅಪ್ಪು. ಹಾಗೂ ಮೂರು ಹೊತ್ತು ಫೈವ್ ಸ್ಟಾರ್ ಹೋಟೆಲ್ನಲ್ಲಿ ತಿನ್ನಬಹುದಾದ ಸವಲತ್ತು ಹೊಂದಿದ್ದ ಅಪ್ಪು ರಸ್ತೆ ಬಳಿ ಕೂತು ಇಡ್ಲಿ ತಿನ್ನುತ್ತಿದ್ದ ಹಾಗೂ ಸಣ್ಣಪುಟ್ಟ ಕ್ಯಾಂಟೀನ್ ನಲ್ಲಿ ಯಾವುದೇ ಇರಿಸು ಮುರಿಸು ಮಾಡದೆ ಹೊಟ್ಟೆ ತುಂಬಾ ಊಟ ಮಾಡಿ ಹೊಗಳುತ್ತಿದ್ದ ಅಪ್ಪುವಿನ ಗುಣಕ್ಕೆ ಅಪ್ಪುವೇ ಸಾಟಿ.

WhatsApp Group Join Now
Telegram Group Join Now

ಹಾಗೆಯೇ ಅಪ್ಪು ಓಡಾಡಬೇಕು ಎಂದರೆ ಅದಕ್ಕೆ ಒಂದು ಪ್ರೈವೇಟ್ ಜೆಟ್ ಬೇಕಾದ್ರೂ ಖರೀದಿ ಮಾಡಬಹುದಾಗಿತ್ತು ಆದರೆ ಅಪ್ಪು ಅವರು ಬದುಕನ್ನು ಬದುಕಲು ಹಾಗೂ ಅದರಲ್ಲಿರುವ ಪ್ರತಿಯೊಂದು ಅನುಭವದ ಆನಂದನವನ್ನು ಸರಳವಾಗಿ ಅನುಭವಿಸಲು ಮತ್ತು ಸಾಮಾನ್ಯ ಮನುಷ್ಯನ ರೀತಿ ಜೀವನ ನಡೆಸಲು ತುಂಬಾ ಆಸೆಪಡುತ್ತಿದ್ದರು. ಇದಕ್ಕಾಗಿ ಅವರು ಒಮ್ಮೆ ಆಟೋ ಹತ್ತಿ ಕೂಡ ಓಡಾಡಿದ್ದರು. ಅಪ್ಪು ಅಂತಹ ಪವರ್ ಸ್ಟಾರ್ ಈ ರೀತಿ ಮಾಡಿದ್ದರೆ ಇಂದು ಎಲ್ಲರಿಗೂ ಆಶ್ಚರ್ಯ ಆಗಬಹುದು ಆದರೆ ಇದಕ್ಕೆ ಸಾಕ್ಷಿಯಂತೆ ಇರುವ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಪ್ಪು ಅವರು ಅಶ್ವಿನಿ ಅವರನ್ನು ಕೂರಿಸಿಕೊಂಡು ಆಟೋದಲ್ಲಿ ಸುತ್ತಾಡುತ್ತಿದ್ದಾರೆ ಹಾಗೂ ಅವರಿಬ್ಬರು ನಗುನಗುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದನ್ನು ಎದುರಿಗಿದ್ದ ವ್ಯಕ್ತಿ ಒಬ್ಬರು ಸೆರೆಹಿಡಿದು ಹಾಕಿರುವ ವಿಡಿಯೋ ರೀತಿ ಇದೆ ಇದು.

ಅವರಿಗಿದ್ದ ಫೇಮ್ ಗೆ ಕರ್ನಾಟಕದಲ್ಲಿ ಎಲ್ಲೇ ಅವರು ಓಡಾಡಿದರು ಈ ರೀತಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ ಯಾಕೆಂದರೆ ಇವರನ್ನು ನೋಡಿದ ತಕ್ಷಣ ಅಭಿಮಾನಿಗಳೆಲ್ಲ ಬಂದು ಪ್ರೀತಿಯಿಂದ ಮುತ್ತಿಗೆ ಹಾಕಿಬಿಡುತ್ತಿದ್ದರು. ಆದರೆ, ಅಪ್ಪು ಅವರು ಪತ್ನಿ ಅಶ್ವಿನಿ ಜೊತೆ ಮುಂಬೈಗೆ ಹೋಗಿದ್ದ ಸಂದರ್ಭ ಒಂದರಲ್ಲಿ ಈ ರೀತಿ ಆಟೋ ಹತ್ತಿ ಮುಂಬೈ ನಗರವನ್ನು ಸುತ್ತಾಡಿ ಪತ್ನಿಯ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಅಪ್ಪು ಅವರ ವ್ಯಕ್ತಿತ್ವದಲ್ಲಿ ಅವರನ್ನು ಮೆಚ್ಚುವ ಇನ್ನೊಂದು ಅಂಶ ಎಂದರೆ ಅವರು ಅವರ ಹೆಂಡತಿ ಹಾಗೂ ಮಕ್ಕಳಿಗಾಗಿ ಕೊಡುತ್ತಿದ್ದ ಸಮಯ ಹಾಗು ಪ್ರೀತಿ. ಈ ರೀತಿಯ ಒಂದು ಸಂಸ್ಕೃತಿಯನ್ನು ರಾಜ್ ಕುಟುಂಬವನ್ನು ನೋಡಿ ಈ ಕಾಲದ ಎಲ್ಲಾ ನಟರು ಕೂಡ ಕಲಿಯಬೇಕು. ಅಪ್ಪು ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ. ಅಪ್ಪು ಅವರ ಈ ವಿಡಿಯೋ ಇಷ್ಟ ಆಗಿದ್ರೆ ಹೆಚ್ಚು ಶೇರ್ & ಲೈಕ್ ಮಾಡಿ.

WhatsApp Group Join Now
Telegram Group Join Now
Entertainment Tags:Appu, Appu ashwini, Powerstar puneethrajkumar

Post navigation

Previous Post: ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಮೊದಲು ಪರಿಚಯವಾದ ನಟ ಅಪ್ಪು ಅಂತೆ.
Next Post: ಮಗನನ್ನು ಯಾವಾಗ ಸಿನಿಮಾರಂಗಕ್ಕೆ ಕರೆ ತರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ದರ್ಶನ್ ಕೊಟ್ಟ ಖಡಕ್ ಉತ್ತರ ಏನು ನೋಡಿ.

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme