ಅಪ್ಪು ಅವರು ತಮ್ಮ ದೇಹವನ್ನಷ್ಟೇ ಅಲ್ಲದೇ ತಮ್ಮನ್ನು ಪ್ರೀತಿಸುತ್ತಿದ್ದ ಪ್ರೀತಿಯ ಅಭಿಮಾನಿಗಳು ಹಾಗೂ ಕರುನಾಡಿನ ಜನತೆಯನ್ನು ಅ.ಗ.ಲಿ ಒಂದು ವರ್ಷದ ಸನಿಹವಾಗುತ್ತಿದ್ದು ಇಂದಿಗೂ ಅಪ್ಪು ಅವರ ಅಕಾಲಿಕ ಮ.ರ.ಣ.ಕ್ಕೆ ಮರುಗದ ಕನ್ನಡಿಗರಿಲ್ಲ. ಕಳೆದ ತಿಂಗಳಿನಲ್ಲಿ ಆಗಸ್ಟ್ 15 ರಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಂದೆ ತಾಯಿಗಳ ಪ್ರತಿಮೆಯೊಂದಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಿ ಅಪ್ಪು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಬಿಂಬಿಸುವ ಕೆಲವು ಚಿತ್ರಣಗಳು ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ ಶೋಭೆಯನ್ನು ಹೆಚ್ಚಿಸಿತ್ತು.
ಇದಿಷ್ಟೇ ಸಾಕು ಅಪ್ಪು ಅವರ ಸರಳತೆ ಮುಗ್ಧತೆಯ ಶ್ರೀಮಂತಿಕೆಯನ್ನು ಪ್ರಚುರ ಪಡಿಸಿ ಅಭಿಮಾನ ಮೆರೆಯಲು. ಇಂದಿಗೂ ಸಹ ಅಪ್ಪು ಅಜರಾಮರರಾಗಿದ್ದು ಅಪ್ಪು ಅವರ ಗುಣಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಪ್ಪುರನ್ನು ಕಾಣ ಬಹುದಾಗಿದೆ. ತಮ್ಮ ಬದುಕಿನ ದಿನಗಳಲ್ಲಿ ಅಪ್ಪು ಅವರು ಸಾಮಾನ್ಯವಾಗಿ ಎಲ್ಲಿಯೂ ಯಾರ ಜೊತೆಯೂ ಸಹ ತಮ್ಮ ಕಾರ್ಯ ವೈಖರಿಯನ್ನಾಗಲಿ ತಮ್ಮ ಸಾಮಾಜಿಕ ಸೇವೆಗಳನ್ನಾಗಲಿ ಹಂಚಿಕೊಂಡಿಲ್ಲ. ಅದರ ಫಲವೇ ಇಂದು ಅಪ್ಪು ಅವರು ಸ.ತ್ತ ನಂತರವೂ ಅಮರರಾಗಿ ಉಳಿಯಲು ಕಾರಣ ಎಂದರೆ ಅತಿಶಯೋಕ್ತಿ ಅಲ್ಲ.
ಅವರ ಈ ಗುಣಗಳೇ ಹೆಚ್ಚು ಜನರನ್ನು ಆಕರ್ಷಿಸಲು ಕಾರಣವಾಗಿದ್ದು ಈ ಕಲಿಯುಗದಲ್ಲಿ ಇಂತಹ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ವಿಶೇಷ ಮಾನ್ಯತೆಗೆ ಪಾತ್ರರಾಗುತ್ತಾರೆ. ಅಪ್ಪು ಅವರು ಮನೆಯಲ್ಲಿಯೂ ಸಹ ತಮ್ಮ ಕುಟುಂಬದ ಜೊತೆಗೆ ಹೊರಗಿನ ಸಮಾಜದ ಜೊತೆ ಹೇಗೆ ಇರುತ್ತಿದ್ದರೋ ಹಾಗೆಯೇ ತಮ್ಮ ಕುಟುಂಬದಲ್ಲಿ ಅನ್ಯೋನ್ಯತೆಯಿಂದ ಇದ್ದು ತಮ್ಮ ಮಕ್ಕಳನ್ನು ಶಿಸ್ತು ಸರಳತೆಯಿಂದ ಬೆಳೆಸಿದ್ದಾರೆ ಎನ್ನುವುದನ್ನು ಅವರ ಮಕ್ಕಳನ್ನು ನೋಡಿದರೆ ತಿಳಿಯುತ್ತದೆ. ಅವರ ಮಕ್ಕಳು ಯಾವುದೇ ಮಾಧ್ಯಮ ಅಥವಾ ಕಾರ್ಯಕ್ರಮಗಳಲ್ಲಿ ಇಂದಿಗೂ ಸಹ ಕಾಣಿಸಿಕೊಳ್ಳದೆ ತಂದೆ ಹಾಕಿದ ಹೆಜ್ಜೆಯ ಮೇಲೆ ತಮ್ಮ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಅಪ್ಪು ಅವರ ಒಬ್ಬ ಪುತ್ರಿ ವಿದೇಶದಲ್ಲಿ ಓದುತ್ತಿದ್ದು ಈಕೆ ತನ್ನ ಸ್ವಂತ ಹಣದಿಂದ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾಳೆ ಎನ್ನುವುದು ವಿಸ್ಮಯ ಸಂಗತಿ ಏಕೆಂದರೆ ಒಬ್ಬ ದೊಡ್ಡ ಸ್ಟಾರ್ ಪುತ್ರಿಯಾಗಿ ಅವರ ಮೇಲೆ ಅವಲಂಬಿತವಾಗದೆ ತಮ್ಮ ಕಾಲ ಮೇಲೆ ತಾನು ನಿಂತು ತಮ್ಮ ಸಂಪಾದನೆ ಹಣದಿಂದ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತಿದ್ದಾಳೆ. ಸಂಪಾದನೆ ಎಂದರೆ ಯಾವುದೋ ಪಾರ್ಟ್ ಟೈಮ್ ಜಾಬ್ ಅಥವಾ ಫುಲ್ ಟೈಮ್ ಜಾಬ್ ಮಾಡುತ್ತಿರ ಬಹುದೆಂದು ತಿಳಿಯಬೇಡಿ ಈಕೆ ತಮ್ಮ ವಿದ್ಯಾಭ್ಯಾಸದಲ್ಲಿ ಶೇಕಡಾ 90 ರಷ್ಟು ಅಂಕವನ್ನು ಗಳಿಸಿ ಅಲ್ಲಿನ ಪ್ರತಿಷ್ಠಿತ ಕಾಲೇಜಿನ ಸ್ಕಾಲರ್ಷಿಪ್ ಗೆ ಪಾತ್ರರಾಗಿದ್ದಾರೆ.
ಈ ಸ್ಕ್ಯಾಲರ್ಷಿಪ್ ನ ಹಣದಿಂದ ತಮ್ಮ ಖರ್ಚನ್ನು ನೀಗಿಸುತ್ತಿದ್ದಾರೆ ಇಂತಹ ಸರಳತೆಯ ಬುದ್ದಿಯನ್ನು ಹೊಂದಿರುವ ಅಪ್ಪು ಅವರ ಪುತ್ರಿಯರು ತಮ್ಮ ತಂದೆಯಂತೆಯೇ ಸರಳ ಮನೋಭಾವನೆ ಹೊಂದಿದ್ದು ಅವರ ಹೆಸರಿಗೆ ಧಕ್ಕೆ ಆಗದ ರೀತಿಯಲ್ಲಿ ನಡೆಯುತ್ತಿದ್ದು ಅಪ್ಪು ಅವರ ಪ್ರೀತಿಯನ್ನು ಅಶ್ವಿನಿ ಪುನೀತ್ ಅವರು ತಮ್ಮ ಮಕ್ಕಳಿಗೆ ನೀಡುತ್ತಿದ್ದಾರೆ. ಅಪ್ಪು ಅವರು ತಮ್ಮ ಮಕ್ಕಳಿಗೆ ಶಿಸ್ತು ಸಂಯಮ ಕಲಿಸಿರುವುದಲ್ಲದೆ ಅಷ್ಟೇ ಪ್ರೀತಿ ವಿಶ್ವಾಸಗಳನ್ನು ನೀಡಿ ಬೆಳೆಸಿದ್ದಾರೆ. ತಮ್ಮ ಕುಟುಂಬ ಹಾಗೂ ಸಮಾಜ ಎರಡನ್ನೂ ಸಹ ಒಂದೇ ಭಾವನೆ ಪ್ರೀತಿಯಿಂದ ನೋಡುತ್ತಿದ್ದ ಅಪ್ಪು ಅವರು ಇಂದು ಎಲ್ಲರ ಮನ ಮನೆಗಳಲ್ಲಿ ಪ್ರೀತಿಯ ಅಪ್ಪುವಾಗಿ ರಾರಾಜಿಸಿ ಅಮರತ್ವ ಪಡೆದಿದ್ದಾರೆ. ಅಪ್ಪು ಮಕ್ಕಳ ಈ ಸಾಧನೆಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ