ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿ ಅಲ್ಲದೆ ಇಡೀ ಪ್ರಪಂಚಕ್ಕೆ ಜೀವನ ನಡೆಸಲು ಮಾದರಿ ಜೀವನ ಮಾಡಿ ತೋರಿಸಿಕೊಟ್ಟು ಹೋದ ಸಾಧಕ. ಇಂತಹ ಸಹೃದಯದ ವ್ಯಕ್ತಿಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ ಎನ್ನಬಹುದು ಈತನ ಸ್ಟಾರ್ ಗಿರಿ ನೋಡಿ ಅಭಿಮಾನಿ ಆದವರಿಗಿಂತ ಹೆಲ್ಪಿಂಗ್ ನೇಚರ್ ನೋಡಿ ದಾಸರಾದವರೇ ಹೆಚ್ಚು ಎಂದು ಹೇಳಬಹುದು. ಆದರೆ ಅಪ್ಪು ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ ಎನ್ನುವುದೇ ತುಂಬಾ ನೋ.ವಿ.ನ ವಿಚಾರ. ಅಪ್ಪು ಅವರು ನಮ್ಮನ್ನು ಅ.ಗ.ಲಿ ಈಗಾಗಲೇ 9 ತಿಂಗಳು ಕಳೆದಿವೆ. ಆದರೂ ಕೂಡ ಅಪ್ಪು ನಮ್ಮೊಂದಿಗೆ ಇಲ್ಲ ಎನ್ನುವ ನೋವನ್ನು ಅಭಿಮಾನಿಗಳು ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕೆ ಸಾಕ್ಷಿಯಾಗಿ ಈಗ ಊರಿನ ಯಾವುದೇ ರಸ್ತೆಯ ತಿರುವಿಗು ಹೋದರು ಅಲ್ಲಿ ಅಪ್ಪು ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿರುವ ಪೋಸ್ಟರ್ ಇನ್ನೂ ಕೂಡ ಕೆಳಗೆ ಇಳಿಸದೆ ಹಾಗೆ ಬಿಟ್ಟಿರುತ್ತಾರೆ.
ಅಲ್ಲದೇ ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಅಥವಾ ಕುಟುಂಬ ಕಾರ್ಯಕ್ರಮಗಳೆಲ್ಲ ಭಾಗಿಯಾದಾಗಲು ಕೂಡ ಯಾರಿಗಾದರೂ ಉಡುಗೊರೆ ಕೊಡಬೇಕು ಎಂದು ಎನಿಸಿದರೆ ಮೊದಲು ನೆನಪಾಗುವುದೇ ಪುನೀತ್ ಅವರ ಫೋಟೋ ಫ್ರೇಮ್ ಕೊಡೋಣ ಎಂದು ಮತ್ತು ಸಿನಿಮಾ ಇಂಡಸ್ಟ್ರಿಗೆ ಸಂಬಂಧ ಪಟ್ಟ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಮೊದಲು ಪುನೀತ್ ಅವರಿಗೆ ಗೌರವ ಸಲ್ಲಿಸಿ ನಂತರ ಕಾರ್ಯಕ್ರಮ ಶುರು ಮಾಡುವುದು ಕಳೆದ 9 ತಿಂಗಳಿನಿಂದ ಕರ್ನಾಟಕದಲ್ಲಿ ವಾಡಿಕೆ ಆಗಿದೆ. ಯಾವುದೇ ಸಿನಿಮಾ ತೆರೆ ಮೇಲೆ ಮೂಡುವ ಮೊದಲು ಅಲ್ಲಿ ಅಪ್ಪು ಫೋಟೋ ಕಾಣಿಸಿಕೊಳ್ಳುತ್ತದೆ ಮತ್ತು ಯಾವುದೇ ಊರಿನ ಜಾತ್ರೆಗೆ ಹೋದರು ಕೂಡ ಅಲ್ಲಿ ದೇವರ ರಥೋತ್ಸವದ ಮೆರವಣಿಗೆ ಜೊತೆ ಹಿಂದೆ ಅಪ್ಪು ದೇವರ ಫೋಟೋ ಕೂಡ ಅಭಿಮಾನಿಗಳು ಹೊತ್ತು ತಿರುಗುತ್ತಿರುತ್ತಾರೆ.
ಹೀಗೆ ದಾಖಲೆ ಮಟ್ಟದಲ್ಲಿ ಅಂತ್ಯ ಸಂಸ್ಕಾರಕ್ಕೆ ಬಂದು ಹೊಸದೊಂದು ದಾಖಲೆ ಬರೆದ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ನೇತ್ರದಾನ ಅನ್ನದಾನ ಇನ್ನು ಮುಂತಾದ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡು ಆ ದಿನವನ್ನು ಕರುನಾಡಲ್ಲಿ ಹಬ್ಬವನ್ನಾಗಿ ಆಚರಿಸಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ನಾವು ವಾಸ್ತವಿಕತೆಯನ್ನು ಒಪ್ಪಿಕೊಂಡು ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದರು ಕೂಡ ದಿನನಿತ್ಯದ ಚಟುವಟಿಕೆ ನಡುವೆ ಇನ್ನೂ ಮನದಲ್ಲಿ ಅಪ್ಪು ಇಲ್ಲ ಎನ್ನುವ ನೋವಿನ ನೆನಪು ಗಟ್ಟಿಯಾಗಿ ಹೆಪ್ಪುಗಟ್ಟಿದೆ. ಈಗಾಗಲೇ ಅಪ್ಪು ಅವರನ್ನು ಅಕಾಲಿಕ ಮೃ.ತ್ಯು.ಗೆ ಈಡು ಮಾಡಿದ ವಿಧಿಗೆ ಕೋಟ್ಯಾಂತರ ಜನರು ಶಾಪ ಹಾಕಿದ್ದಾರೆ. ಆದರೆ ವಿಶೇಷವಾಗಿ ಇಲ್ಲೊಬ್ಬ ಭಕ್ತ ದೇವರ ಬಳ್ಳಿ ಅಪ್ಪು ಅವರ ವಿಷಯವಾಗಿ ಹೊಸ ಮನವಿ ಒಂದನ್ನು ಮಾಡಿದ್ದಾನೆ. ಈ ಘಟನೆ ಅಫ್ಜಲ್ ಪುರದಲ್ಲಿ ನಡೆದಿದೆ ಅಲ್ಲಿಯ ದೇವಸ್ಥಾನದ ಹುಂಡಿಯ ಹಣದ ಎಣಿಕೆ ಕಾರ್ಯ ನಡೆಯುತ್ತಿತ್ತು.
ಅಲ್ಲಿ ಒಂದು ಚೀಟಿಯು ಎಣಿಕೆ ಮಾಡುವ ಸಿಬ್ಬಂದಿಗೆ ಸಿಕ್ಕಿದೆ ಕುತೂಹಲದಿಂದ ಚೀಟಿಯನ್ನು ತೆರೆದು ಓದಿದಾಗ ಅಲ್ಲಿ ದೇವರ ಭಕ್ತರೊಬ್ಬರು ಪುನೀತ್ ರಾಜಕುಮಾರ್ ಅವರ ಅಭಿಮಾನಿ ಆಗಿದ್ದು, ಮತ್ತೆ ಪುನೀತ್ ಅಣ್ಣನನ್ನು ಭೂಮಿ ಮೇಲೆ ಕಳಿಸಿ ಕೊಡು ದೇವರೇ ಎಂದು ಬರೆದು ತಮ್ಮ ಸಹಿಯನ್ನು ಕೂಡ ಮಾಡಿದ್ದಾರೆ. ನಿಜವಾಗಿಯೂ ಇಂತಹ ಅಭಿಮಾನಿಗಳನ್ನು ಪಡೆದ ಅಭಿಮಾನಿಗಳ ದೇವರಾದ ಪುನೀತ್ ರಾಜಕುಮಾರ್ ಅವರೇ ಧನ್ಯರು ಎಂದು ಹೇಳಬಹುದು. ಈ ಪ್ರಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ಕಾಮೆಂಟ್ ಮಾಡಿ