ಪುನೀತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಗಾಯಕರಾಗಿ ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಪುನೀತ್ ರಾಜಕುಮಾರ್ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ ನಂತರ ಸಿನಿಮಾರಂಗದಿಂದ ಸ್ವಲ್ಪ ವಿರಾಮವನ್ನು ತೆಗೆದುಕೊಂಡಿದ್ದರು, ಆದರೆ ಆ ಸಣ್ಣ ಗ್ಯಾಪ್ ಅಲ್ಲಿ ಪುನೀತ್ ರಾಜಕುಮಾರ್ ಅವರು ಏನನ್ನು ಮಾಡುತ್ತಿದ್ದರು ಎಂಬುದು ಯಾರಿಗೂ ತಿಳಿದಿಲ್ಲ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಇನ್ನು ಕೆಲವರಿಗೆ ಚಿತ್ರದಿಂದ ಸ್ವಲ್ಪ ಸಮಯ ದೂರವಿದ್ದಾಗ ಗ್ರಾನೈಟ್ ಬಿಸ್ನೆಸ್ ಶುರುಮಾಡಿದ್ದರು, ಆದರೆ ತದನಂತರ ಏನಾಯಿತು ಎಂಬುದು ತಿಳಿದಿಲ್ಲ. ಆದರೆ ಕೆಲವೊಬ್ಬರ ಮನಸ್ಸಿನಲ್ಲಿ ಗ್ರಾನೈಟ್ ವಿಚಾರವಾಗಿ ಕೆಲವೊಂದು ಊಹಾಪೋಹಗಳು ಉಳಿದುಕೊಂಡಿತ್ತು. ಸಿನಿಮಾ ರಂಗದಲ್ಲಿ ಆಗಾಗಲೇ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಅಭಿನಯ ಮಾಡುತ್ತಿದ್ದ ಕಾರಣದಿಂದಾಗಿ ಅಪ್ಪು ಅವರಿಗೆ ಸಿನಿಮಾರಂಗ ಬಿಟ್ಟು ಬೇರೆ ಯಾವುದಾದರಲ್ಲೂ ಸಾಧನೆ ಮಾಡಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಅದಕ್ಕೆ ಸರಿಯಾಗಿ ಅವರ ಸ್ನೇಹಿತರು ಬಂದು ಮಾರ್ಬಲ್ಸ್ ಗ್ರಾನೈಟ್ ಬಗ್ಗೆ ಸಲಹೆ ನೀಡುತ್ತಾರೆ.
ಈ ರೀತಿ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಅವರ ಸ್ನೇಹಿತರು ಪುನೀತ್ ರಾಜಕುಮಾರ್ ಅವರಿಗೆ ಹೇಳುತ್ತಾರೆ. ಪುನೀತ್ ರಾಜಕುಮಾರ್ ಅವರಿಗೆ ಕೇವಲ ಬಂಡವಾಳವನ್ನು ಹಾಕಲು ಅವರ ಸ್ನೇಹಿತರು ಹೇಳುತ್ತಾರೆ. ಇಷ್ಟೇ ಅಲ್ಲದೆ ನಿಮ್ಮನ್ನು ಎಲ್ಲಿಯೂ ಮುಖ್ಯ ಪಾರ್ಟ್ನರ್ ಆಗಿ ಎಲ್ಲಿಯೂ ತೋರಿಸುವುದಿಲ್ಲ. ವ್ಯಾಪಾರದಲ್ಲಿ ಲಾಭ ಬಂದಾಗ ಲಾಭದ ಮೊತ್ತವನ್ನು ನಿಮ್ಮ ಮನೆಗೆ ನಾವೇ ತಂದುಕೊಡುತ್ತೇವೆ ಎಂದು ಅಪ್ಪು ಅವರಿಗೆ ಅವರ ಸ್ನೇಹಿತರು ಹೇಳುತ್ತಾರೆ. ಕೊನೆಗೆ ಅಂತಿಮವಾಗಿ ಪುನೀತ್ ರಾಜಕುಮಾರ್ ಪಾರ್ವತಮ್ಮ ರಾಜಕುಮಾರ್ ಅವರ ಬಳಿ ಹಣವನ್ನು ಪಡೆದುಕೊಂಡು ಅವರ ಸ್ನೇಹಿತರಿಗೆ ನೀಡುತ್ತಾರೆ.
ರಾಜಕುಮಾರ್ ಅವರ ಹೆಸರನ್ನು ಬಳಸಿಕೊಂಡು ಶುರುಮಾಡಿದ ಬಿಸ್ನೆಸ್ ತದನಂತರ ಇಲ್ಲಿಗಲ್ ಹಂತಕ್ಕೆ ಹೋಗಿ ತಲುಪುತ್ತದೆ ಅಪ್ಪು ಅವರ ಹೆಸರನ್ನು ಬಳಸಿಕೊಂಡು ಕೆಲಸವನ್ನು ಮಾಡಿದರೆ ಎಲ್ಲಿಯೂ ತೊಂದರೆಯಾಗುವುದಿಲ್ಲ ಎಂದು ಬಿಸ್ನೆಸ್ ಮಾಡುತ್ತಿರುತ್ತಾರೆ, ಆದರೆ ಇದು ಪುನೀತ್ ಅವರಿಗೆ ತಿಳಿದಿರುವುದಿಲ್ಲ. ತದನಂತರ ಎಲ್ಲಾ ಕಡೆ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಹೆಸರು ಪ್ರಸ್ತಾಪ ಆಗಲು ಶುರುವಾಗುತ್ತದೆ. ಆಗ ಪೊಲೀಸ್ ಕಮಿಷನರ್ ಆಗಿದ್ದ ಕೆಂಪಯ್ಯ ಅವರು ಪುನೀತ್ ರಾಜಕುಮಾರ್ ಅವರನ್ನು ಕರೆಸಿಕೊಂಡು ಎಲ್ಲಾ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ನಿನಗ್ಯಾಕೆ ಬೇಕು ಸಿನಿಮಾದ ಕಡೆ ಹೆಚ್ಚಿನ ಗಮನ ಕೊಡಿ ಅಷ್ಟೇ ಸಾಕು ಎಂದು ಪುನೀತ್ ರಾಜ್ ಕುಮಾರ್ ಅವರಿಗೆ ಹೇಳುತ್ತಾರೆ. ತದನಂತರ ಹಾಕಿದ್ದ ಬಂಡವಾಳವನ್ನು ಬಿಟ್ಟು ಪುನೀತ್ ರಾಜಕುಮಾರ್ ಅವರು ಗ್ರಾನೈಟ್ ಬಿಸ್ನೆಸ್ ಇಂದ ಹೊರ ಬರುತ್ತಾರೆ.
ಆದರೂ ಕೂಡ ಈ ಗ್ರಾನೆಟ್ ಬಿಸಿನೆಸ್ ಮಾಡಿ ಅಪ್ಪು ಅವರು ತುಂಬಾನೇ ನೋವನ್ನು ಅನುಭವಿಸುತ್ತಾರಂತೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಬಿಸಿನೆಸ್ ನಲ್ಲಿ ಮುಂದುವರೆಯುವುದು ಬೇಡ ಅಂತ ಅಣ್ಣವರು ಸಲಹೆ ನೀಡುತ್ತಾರೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಈ ಮಾತನ್ನು ಸ್ವತಹ ಪುನೀತ್ ರಾಜಕುಮಾರ್ ಅವರ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ ನಿಜಕ್ಕೂ ಕೂಡ ಅಪ್ಪು ಅವರು ಇಂದು ಇಷ್ಟು ಹೆಸರು ಮಾಡಿದ್ದಾರೆ ಅಂದರೆ ಆ ಕಾಲದಲ್ಲಿ ಎಷ್ಟು ನೋವನ್ನು ಅನುಭವಿಸಿದರು ಅಂತ ಕೇಳಿದರೆ ಒಂದು ಕ್ಷಣ ಬಹಳ ಬೇಸರವಾಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.