Sunday, May 28, 2023
HomeEntertainmentನಾವಿಬ್ಬರು ಪ್ರೀತಿಸುತ್ತಿದ್ದೇವೆ ಮದುವೆಯಾಗುತ್ತೇವೆ ಅಂತ ಹೇಳಿದ್ದ ಸಂಜು ಬಸಯ್ಯ ಮತ್ತು ಪಲ್ಲವಿ ಇದೀಗ ಇದಕ್ಕಿದ್ದ ಹಾಗೆ...

ನಾವಿಬ್ಬರು ಪ್ರೀತಿಸುತ್ತಿದ್ದೇವೆ ಮದುವೆಯಾಗುತ್ತೇವೆ ಅಂತ ಹೇಳಿದ್ದ ಸಂಜು ಬಸಯ್ಯ ಮತ್ತು ಪಲ್ಲವಿ ಇದೀಗ ಇದಕ್ಕಿದ್ದ ಹಾಗೆ ನಾವಿಬ್ಬರು ಅಕ್ಕ ತಮ್ಮ ಅಂತ ಉಲ್ಟಾ ಹೊಡೆದದ್ದು ಯಾಕೆ ಗೊತ್ತಾ.?

ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಕಾರ್ಯಕ್ರಮದಲ್ಲಿ ಇವರಿಗೆ ಅಪಾರ ಕೀರ್ತಿ ಹೆಸರು ದೊರೆಯಿತು ಒಂದು ರೀತಿಯಲ್ಲಿ ಹೇಳಬೇಕಾದರೆ ಸಂಜು ಬಸಯ್ಯ ಅವರನ್ನು ಈ ಕಾರ್ಯಕ್ರಮದಿಂದಲೇ ಇಂದು ಎಲ್ಲರೂ ಕೂಡ ಗುರುತು ಹಿಡಿಯುತ್ತಿರುವುದು ಅಷ್ಟರ ಮಟ್ಟಿಗೆ ಜೀ ಕನ್ನಡ ವೇದಿಕೆಯಲ್ಲಿ ಸಂಜು ಬಸಯ್ಯ ಅವರ ಫೇಮಸ್ ಆಗಿದ್ದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ಕಾರ್ಯಕ್ರಮದಲ್ಲಿ ಇವರು ಆಕ್ಟ್ ಮಾಡಿದ ನಂತರ ಚಿತ್ರರಂಗದಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದಲ್ಲಿಯೂ ಕೂಡ ಇವರು ಅಭಿನಯಿಸಿದ್ದಾರೆ ಕೇವಲ ಇದಿಷ್ಟು ಮಾತ್ರವಲ್ಲದೆ ಕನ್ನಡದಲ್ಲಿಯೇ ಸುಮಾರು ಏಳರಿಂದ ಎಂಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕೇವಲ ಕಿರುತರೆ ಮತ್ತು ಚಿತ್ರರಂಗವಲ್ಲದೆ ಹಲವಾರು ನಾಟಕಗಳಲ್ಲಿ ರಂಗಭೂಮಿಯಲ್ಲಿ ಮತ್ತು ಆರ್ಕೆಸ್ಟ್ರಾದಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ನೋಡುವಾಗಕ್ಕೆ ಚಿಕ್ಕ ಹುಡುಗನಂತೆ ಕಂಡರೂ ಕೂಡ ಕುಳ್ಳಗೆ ಇದ್ದರೂ ಕೂಡ ಇವರು ಅದನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಮ್ಮ ದೇಹದ ನೂನ್ಯತೆಯನ್ನು ನೆನಪಿಸಿಕೊಂಡು ಕೊರಗುವ ಈ ಜಗತ್ತಿನಲ್ಲಿ ತನ್ನ ದೇಹದ ನ್ಯೂನತೆಯನ್ನೇ ಆಧಾರವನ್ನಾಗಿ ಇಟ್ಟುಕೊಂಡಂತಹ ಸಂಜು ಬಸಯ್ಯ ಅವರು ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಅಂತ ಸಾಗುತ್ತಾರೆ.

ಆದರೆ ಕಳೆದ ಕೆಲವು ದಿನಗಳ ಹಿಂದೆ ಸಂಜು ಬಸಯ್ಯ ಅವರು ಒಬ್ಬ ಯುವತಿಯ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ತದನಂತರ ಸಂಜು ಬಸಯ್ಯ ಅವರು ಪಲ್ಲವಿ ಅವರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಸಂಜು ಬಸಯ್ಯ ಪಲ್ಲವಿ ಅವರನ್ನು ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಹೇಳಿದಂತಹ ವಿಡಿಯೋ ಕ್ಲಿಪ್ ಒಂದು ವೈರಲ್ ಆಗುತ್ತದೆ.

ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ಇವರಿಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಹಾಗೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಪ್ರಚಾರ ಮಾಡುತ್ತಾರೆ. ಇದನ್ನು ನೋಡುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ನಿಜಕ್ಕೂ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಸಂಜು ಬಸಯ್ಯ ಇರುವುದು ಕೇವಲ 3 ಅಡಿ ಆದರೆ ಇವರು ಪ್ರೀತಿಸುತ್ತಿರುವ ಹುಡುಗಿ ಸುರದ್ರೂಪಿ ಅಷ್ಟೇ ಅಲ್ಲದೆ ಇವರು ಕೂಡ ಒಬ್ಬ ಕಲಾವಿದೆ ಇಷ್ಟೆಲ್ಲ ಆಪರ್ಚುನಿಟಿ ಇದ್ದರೂ ಕೂಡ ಸಂಜು ಬಸಯ್ಯ ಅವರನ್ನು ಮದುವೆಯಾಗುತ್ತಿರುವುದಾದರೂ ಏಕೆ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.

ಇನ್ನು ಕೆಲವು ಜನ ಪ್ರೀತಿಗೆ ಕಣ್ಣಿಲ್ಲ ಎಂಬುದು ಸತ್ಯ ಬಿಡಿ ಅಂತ ಹೇಳುವುದಕ್ಕೆ ಪ್ರಾರಂಭ ಮಾಡುತ್ತಾರೆ ಒಟ್ಟಾಗಿ ಹೇಳುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ಸಂಜು ಬಸಯ್ಯ ಹಾಗೂ ಪಲ್ಲವಿ ಇಬ್ಬರಿಗೂ ಕೂಡ ಇಲ್ಲ ಸಲದ ಸಂಬಂಧವನ್ನು ಕಲ್ಪಿಸಿ ಬಿಟ್ಟಿರುತ್ತಾರೆ. ಇದನ್ನು ನೋಡಿದಂತಹ ಸಂಜು ಬಸಯ್ಯ ಮತ್ತು ಪಲ್ಲವಿ ಅವರು ಮಾನಸಿಕವಾಗಿ ತುಂಬಾನೇ ನೊಂದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಬೇಸರವನ್ನು ಕೂಡ ವ್ಯಕ್ತಪಡಿಸುತ್ತಾರೆ. ತದನಂತರ ಸಂಜು ಬಸಯ್ಯ ಅವರು ಹರಿದಾಡುತ್ತಿರುವ ಪೋಸ್ಟರ್ ಗೆ ಸ್ಪಷ್ಟವನ್ನು ನೀಡುವಂತಹ ಪ್ರಯತ್ನವನ್ನು ಮಾಡುತ್ತಾರೆ.

ಹೌದು ಸಂಜು ಬಸಯ್ಯ ಅವರು ನೇರವಾಗಿ ಲೈವ್ ಬಂದು ಪಲ್ಲವಿ ಹಾಗೂ ನಾನು ಇಬ್ಬರೂ ಕೂಡ ಅಕ್ಕ ತಮ್ಮ ಇದ್ದಂತೆ ನಮ್ಮಿಬ್ಬರ ನಡುವೆ ಅಕ್ಕ-ತಮ್ಮನ ಸಂಬಂಧವಿದೆ ದಯವಿಟ್ಟು ಕೂಡ ನಮ್ಮಿಬ್ಬರ ನಡುವೆ ಪ್ರೇಮಿಗಳ ಸಂಬಂಧವನ್ನು ಕಲ್ಪಿಸಬೇಡಿ. ಇದರಿಂದ ನಮ್ಮಿಬ್ಬರಿಗೂ ಕೂಡ ಬಹಳ ಬೇಸರವಾಗಿದೆ ನಾನು ಅಂದು ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದು ಕೇವಲ ಸ್ಕ್ರಿಪ್ಟ್ ಗಾಗಿ ಮಾತ್ರ ಆದರೆ ನಿಜಕ್ಕೂ ಕೂಡ ನಾವಿಬ್ಬರು ಅಕ್ಕ ತಮ್ಮ ಎಂದು ಮನವಿ ಮಾಡಿಕೊಳ್ಳುತ್ತಾರೆ.

ಈ ವಿಡಿಯೋ ನೋಡಿದ ನಂತರ ಕೆಲವು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಇನ್ನು ಕೆಲವು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಸಂಜು ಬಸಯ್ಯ ಅವರು ಮದುವೆಯಾಗುತ್ತಾರೆ ಅಂತ ಅಂದುಕೊಂಡಿದ್ದರು ಆದರೆ ಈ ರೀತಿ ಆಯಿತಲ್ಲ ಎಂದು ಮಾತನಾಡಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.