ಇಂದು ಗಂಧದಗುಡಿ ಸಿನಿಮಾ ಸುಮಾರು 200 ಅಧಿಕ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ ಅಪ್ಪು ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಇದೀಗ ಅಭಿಮಾನಿಗಳಿಗೆ ಸಿಕ್ಕಿರುವುದು ನಿಜಕ್ಕೂ ಸಂತೋಷದ ವಿಚಾರವೇ. ಅಪ್ಪು ಅವರನ್ನು ಕೊನೆಯ ಬಾರಿಗೆ ಬೆಳ್ಳಿ ತರೆಯಲ್ಲಿ ನೋಡುವ ಕಾತುರದಿಂದಾಗಿ ಮುಂಜಾನೆಯಿಂದಲೂ ಕೂಡ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕಾದು ಕುಳಿತಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಈ ಸಿನಿಮಾದಲ್ಲಿ ಅಪ್ಪು ಅವರು ಹೇಳಿದ ಡೈಲಾಗ್ ಒಂದು ಎಲ್ಲರ ಮನ ಮುಟ್ಟುವಂತಿದೆ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಅಷ್ಟೇ ಅಲ್ಲದೆ ಈ ಡೈಲಾಗ್ ಕೇಳಿದ ಅಭಿಮಾನಿಗಳು ಥಿಯೇಟರ್ ನಲ್ಲಿಯೇ ಕಣ್ಣೀರು ಹಾಕಿದ್ದಾರೆ ಹೌದು, ಅಪ್ಪು ಎಂದರೆ ಹೆಸರಲ್ಲ ಬದಲಿಗೆ ಅದೊಂದು ಭಾವನೆ ಅದೊಂದು ಶಕ್ತಿ ಅಂತಾನೆ ಹೇಳಬಹುದು. ಗಂಧದಗುಡಿ ಸಾಕ್ಷ ಸಿನಿಮಾವನ್ನು ಅಪ್ಪು ಅವರು ಕಳೆದ ಎರಡು ವರ್ಷಗಳ ಹಿಂದೆಯೇ ಲಾಕ್ ಡೌನ್ ಇದ್ದ ಸಮಯದಲ್ಲಿ ಚಿತೀಕರಣ ಮಾಡಿದ್ದರು. ನಮ್ಮ ಕರ್ನಾಟಕದಲ್ಲಿ ಇರುವಂತಹ ಹಲವಾರು ಪ್ರಕೃತಿಯ ರಮಣೀಯ ತಾಣಗಳಿಗೆ ಹೋಗಿ ಅಲ್ಲಿನ ವನ್ಯಜೀವಿ ಹಾಗೂ ಪ್ರಕೃತಿಯ ಸೌಂದರ್ಯವನ್ನು ತೆರೆ ಹಿಡಿಯುವ ಮೂಲಕ ಅದನ್ನು ಎಲ್ಲಾ ಪ್ರೇಕ್ಷಕರಿಗೂ ತೋರಿಸಬೇಕು ಎಂಬ ಆಸೆ ಕನಸನ್ನು ಹೊಂದಿದ್ದರು.
ಅಷ್ಟೇ ಅಲ್ಲದೆ ಈ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದರು ಆದರೆ ಇದಕ್ಕೂ ಮೊದಲೇ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ವಿ.ಧಿ.ವ.ಶ.ರಾದರು. ಈ ಕಾರಣಕ್ಕಾಗಿಯೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಕನಸಿನ ಕೂಸು ಆದಂತಹ ಗಂಧದಗುಡಿಯನ್ನು ದೊಡ್ಡ ರೀತಿಯಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿ ಅದನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ ಬಹಳ ಸಹಜವಾಗಿದ್ದಾರೆ ಎಲ್ಲಿಯೂ ಕೂಡ ಮೇಕಪ್ ಹಾಕಿಲ್ಲ ಅಷ್ಟೇ ಅಲ್ಲದೆ ಅಸಂಬದ್ಧವಾದ ಡೈಲಾಗ್ ಗಳು ಇಲ್ಲ. ಅಪ್ಪು ಅವರು ನಿಜ ಜೀವನದಲ್ಲಿ ಎಷ್ಟು ಸರಳವಾಗಿದ್ದಾರೋ ಅಷ್ಟೇ ಸರಳವಾಗಿ ಈ ಒಂದು ಗಂಧದ ಗುಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ.
ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ.?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ.
ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ ಅಭಿಮಾನಿಗಳು ಈ ಸಿನಿಮಾವನ್ನು ನೋಡಿ ಇದೀಗ ಕಣ್ಣೀರು ಹಾಕಿದ್ದಾರೆ ಒಂದು ವೇಳೆ ಅಪ್ಪು ಅವರು ಇಂದು ಬದುಕಿದ್ದರೆ. ಈ ಸಿನಿಮಾವನ್ನು ಇನ್ನಷ್ಟು ವೈಭವಿಕರಿಸುತ್ತಿದ್ದರು ಎಂಬುವುದು ಕೆಲವು ಸಿನಿ ರಸಿಕರ ಅಭಿಪ್ರಾಯವಾಗಿದೆ. ಗಂಧದ ಗುಡಿ ಸಿನಿಮಾಗದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ. ನೀವು ಕೂಡ ಗಂಧದಗುಡಿ ಸಿನಿಮಾವನ್ನು ನೋಡಿ ಅಪ್ಪು ಅವರನ್ನು ಕೊನೆಗೆ ಬಾರಿ ಕಣ್ತುಂಬಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಿ.