ಎಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಅತಿದೊಡ್ಡ ರಿಯಾಲಿಟಿ ಶೋ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವ ವಿಚಾರ ತಿಳಿದೇ ಇದೆ. ವರ್ಷಕ್ಕೆ ಒಮ್ಮೆ ಮಾತ್ರ ಈ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ ಅದರಲ್ಲಿಯೂ ಕೂಡ ಸ್ಟಾರ್ ಸೆಲೆಬ್ರಿಟಿಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ವ್ಯಕ್ತಿಗಳನ್ನು ಇಲ್ಲಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಸ್ಪರ್ಧಿಗಳ ಪ್ರತಿಯೊಂದು ಹಾವಭಾವ ಮಾತು ಎಲ್ಲವೂ ಕೂಡ ಸಾರ್ವಜನಿಕವಾಗಿ ನೋಟಿಸ್ ಆಗುತ್ತದೆ ಹಾಗಾಗಿ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡುವಂತಹ ಪ್ರತಿಯೊಬ್ಬರೂ ಕೂಡ ತಮ್ಮ ಮಾತುಕತೆಯ ಮೇಲೆ ಹಾಗೂ ಹಾವಭಾವದ ಮೇಲೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ಇವರಿಗೆ ಅರಿವಿಲ್ಲದೆ ಅಚಾನಕ್ಕಾದ ಘಟನೆಗಳು ನಡೆದು ಬಿಡುತ್ತದೆ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲೂ ಅಂತಹ ಘಟನೆ ನಡೆದಿದೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ನಾಲ್ಕು ವಾರಗಳು ಕಳೆದು 5ನೇ ವಾರದತ್ತ ಕಾಲು ಹಾಕಿದೆ. ಅದೇ ರೀತಿ ತಮಿಳು ಬಿಗ್ ಬಾಸ್ ಕೂಡ ಪ್ರಾರಂಭವಾಗಿ ಎರಡು ವಾರ ಮುಕ್ತಾಯವಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ ಈ ಒಂದು ತಮಿಳು ಬಿಗ್ ಬಾಸ್ ಕಾರ್ಯಕ್ರಮವನ್ನು ಕಮಲ್ ಹಾಸನ್ ಅವರು ನಡೆಸಿಕೊಡುತ್ತಿದ್ದಾರೆ. ತಮಿಳಿನಲ್ಲಿ ಪ್ರಸಾರವಾಗುತ್ತಿರುವ ಆರನೇ ಬಿಗ್ ಬಾಸ್ ಕಾರ್ಯಕ್ರಮ ಈ ಕಾರ್ಯಕ್ರಮ ಪ್ರಾರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಸಖತ್ ಎಂಟರ್ಟೈನ್ಮೆಂಟ್ ಕೊಟ್ಟಿತ್ತು.
ಅಷ್ಟೇ ಅಲ್ಲದೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ನೋಡಿ ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದರು ಸಾಮಾನ್ಯವಾಗಿ ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಪ್ರೀತಿ, ಪ್ರೇಮ, ಜಗಳ, ನಿವೇದನೆ, ಇವೆಲ್ಲವೂ ಕೂಡ ಸಹಜವಾಗಿ ಇದ್ದೇ ಇರುತ್ತದೆ. ಇವೆಲ್ಲವೂ ಇದ್ದಾಗ ಮಾತ್ರ ಅದನ್ನು ರಿಯಾಲಿಟಿ ಶೋ ಅಂತ ಪರಿಗಣನೆ ಮಾಡಲಾಗುತ್ತದೆ ಆದರೆ ಕೆಲವೊಮ್ಮೆ ಅತಿರೇಕದ ವರ್ತನೆ ನೋಡುಗರ ಮನಸ್ಸಿನಲ್ಲಿ ಮುಜುಗರ ಉಂಟುಮಾಡುತ್ತದೆ.
ಹೌದು ಸಾಮಾನ್ಯವಾಗಿ ಬಿಗ್ ಬಾಸ್ ಅಂದಮೇಲೆ ಆ ಮನೆಗೆ ಕೆಲವೊಂದು ನೀತಿ ನಿಯಮ ಇರುತ್ತದೆ ಈ ರೀತಿ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಮುಲಾಜಿಲ್ಲದೆ ಅಂತಹ ಸ್ಪರ್ಧಿಗಳನ್ನು ಹೊರ ಹಾಕಲಾಗುತ್ತದೆ. ಈ ವಿಚಾರ ನೀವು ಇದಾಗಲೇ ನೋಡಿದಿರಾ ಹೌದು ಕನ್ನಡ ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಅವರು ಪ್ರಥಮ್ ಅವರೇ ಮೇಲೆ ಹ.ಲ್ಲೆ ಮಾಡಿದ ಸಂದರ್ಭದಲ್ಲಿ ವೆಂಕಟ್ ಅವರನ್ನು ಮುಲಾಜಿಲ್ಲದೆ ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಿದ್ದರು.
ಇದಕ್ಕೆ ಇದೀಗ ತಮಿಳು ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಅಂತಹದೇ ಒಂದು ಹಿಂಸಾಚಾರ ಘಟನೆ ನಡೆದಿದೆ ಹೌದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಜೀಂ ಮತ್ತು ನಟಿ ಆಯುಷ್ಯ ವಿರುದ್ಧ ಇದೀಗ ಮಾತಿನ ಚಕಮಕಿ ನಡೆದಿದೆ ಇವರಿಬ್ಬರದ ವರ್ತನೆ ಎಷ್ಟರ ಮಟ್ಟಿಗೆ ಮುಂದುವರೆದಿದೆ ಅಂದರೆ ಕಳೆದ ಎರಡು ದಿನಗಳ ಹಿಂದೆ ಅಜೀಂ ಮತ್ತು ಆಯೇಷಾ ನಡುವಿನ ಕಿತ್ತಾಟ ತಾರಕಕ್ಕೇರಿ ಅನಾಹುತವೇ ನಡೆದು ಹೋಗಿದೆ. ಮಹಿಳಾ ಸ್ಪರ್ಧಿಗಳನ್ನು ಅಜೀಂ ಕೆಟ್ಟ ಭಾಷೆಯಿಂದ ನಿಂದಿಸಿದ ಎನ್ನುವ ಕಾರಣಕ್ಕಾಗಿ ಆಯೇಷಾ ಸಿಟ್ಟಿಗೆದ್ದಿದ್ದಾರೆ ಕೋಪದಿಂದ ಶೂ ತಗೆದು ಅಜೀಂ ಮೇಲೆ ಎಸೆದಿದ್ದಾರೆ.
ತಮಿಳು ಬಿಗ್ ಬಾಸ್ ಮನೆಯಲ್ಲಿ ಈ ಘಟನೆ ಭಾರೀ ಆಘಾತವನ್ನು ಮೂಡಿಸಿದೆ ಮನೆಯ ಸದಸ್ಯರು ದಂಗಾಗಿದ್ದಾರೆ. ಆಯೇಷಾ ಬೇರೆ ರೀತಿಯಲ್ಲಿ ಹೇಳಬಹುದಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಆದರೆ ಆಯೇಷಾ ಮಾತ್ರ ತಮ್ಮ ನಿರ್ಧಾರ ಸರಿ ಇದೆ ಎಂದೇ ವಾದಿಸುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆಯ ಬಾರದಿತ್ತು ನಡೆದು ಹೋಗಿದೆ ವಾರಾಂತ್ಯದ ಎಪಿಸೋಡ್ ನಲ್ಲಿ ಕಮಲ್ ಹಾಸನ್ ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಒಂದು ವೇಳೆ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಈ ರೀತಿಯ ಘಟನೆ ನಡೆದಿದ್ದರೆ ಖಂಡಿತವಾಗಿಯೂ ಕೂಡ ಇದರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತಿದ್ದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.