ಅಪ್ಪು ಹುಟ್ಟುವಾಗಲೇ ಕಲೆಯನ್ನು ರಕ್ತಗತವಾಗಿ ಪಡೆದುಕೊಂಡು ಬಂದಿದ್ದ ಶ್ರೇಷ್ಠ ನಟ. ಆದರೆ ಸ್ಟಾರ್ ಮಕ್ಕಳಾದ ಎಲ್ಲರಿಗೂ ಈ ರೀತಿ ಅಭಿನಯ ಕೈ ಹಿಡಿದು ನಡೆಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಲಾದೇವಿಯ ಆಶೀರ್ವಾದ ಹಾಗೂ ಸ್ವಲ್ಪಮಟ್ಟಿನ ಪ್ರಯತ್ನವೂ ಬೇಕು. ಅಪ್ಪು ಆ ವಿಷಯದಲ್ಲಿ ಭಾಗ್ಯವಂತ, ಬಾಲ್ಯದಿಂದಲೂ ಅಪ್ಪನ ಜೊತೆ ಸಿನಿಮಾಗಳಲ್ಲಿ ತೊಡಗಿಕೊಂಡ ಈತ ಮಾತು ಬರುವ ಮುನ್ನವೇ ಕ್ಯಾಮರಾ ಎದುರಿಸಿದ್ದರು ಮತ್ತು ಅಪ್ಪನೊಂದಿಗೆ ಹಲವು ಸಿನಿಮಾಗಳಲ್ಲಿ ಬಾಲ ನಟನಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದರು.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಅದರಲ್ಲೂ ಅಪ್ಪು ಅವರು ಮಾಡುತ್ತಿದ್ದದ್ದು ಅಂತಿಂಥ ಪಾತ್ರ ಅಲ್ಲ ಅಪ್ಪ ಹಿರಣ್ಯಕಷ್ಯಪನ ಆರ್ಭಟ ಎದುರು ಬಾಲ ಪುನೀತ ಪ್ರಹ್ಲಾದರಾಗಿ ಕಾಣಿಸಿಕೊಂಡಿದ್ದರು. ಆಡುವ ವಯಸಿಗೆ ರಾಷ್ಟ್ರಪತಿ ಬಳಿ ಹೋಗಿ ಬೆಟ್ಟದ ಹೂ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದು ಕೊಂಡಿದ್ದರು. ಭಾಗ್ಯವಂತ, ಎರಡು ನಕ್ಷತ್ರಗಳು, ಯಾರಿವನು ಈ ಸಿನಿಮಾಗಳು ಅಪ್ಪುಗಾಗಿಯೇ ತಯಾರಾಗಿದ್ದ ಸಿನಿಮಾಗಳು ಎನ್ನಬಹುದು.
ತಮ್ಮದೇ ಹೋಂ ಬ್ಯಾನರ್ ಇಂದ ಲಾಂಚ್ ಆಗಿದ್ದ ಪುನೀತ್ ಅವರು ಮತ್ತೆ ಅಪ್ಪು ಎನ್ನುವ ಸಿನಿಮಾದ ಮೂಲಕ ಬಾಲಕ ನಟನಿಂದ ನಾಯಕ ನಟ ಆಗಿ ಕಾಣಿಸಿಕೊಂಡರು. ಅಪ್ಪು, ಅಭಿ, ಅರಸು, ವಂಶಿ, ಹುಡುಗರು ಮುಂತಾದ ಸಿನಿಮಾಗಳು ಅವರದೇ ಪ್ರೊಡಕ್ಷನ್ ಹೌಸ್ ಇಂದ ಬಂದ ಸಿನಿಮಾಗಳಾದರೆ ಅದನ್ನು ಹೊರತಪಡಿಸಿ ಮೌರ್ಯ, ಆಕಾಶ್, ಮಿಲನ, ಪೃಥ್ವಿ ,ಮೈತ್ರಿ ,ಯಾರೇ ಕೂಗಾಡಲಿ, ರಾಜಕುಮಾರ, ನಟಸಾರ್ವಭೌಮ ಯುವರತ್ನ ಹೀಗೆ ಬೇರೆ ಬ್ಯಾನರ್ ಅಡಿಯಲು ಕೂಡ ಅಭಿನಯಿಸಿ ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಖ್ಯಾತಿ ಅವರದ್ದು.
ಅವರ ಸಿನಿಮಾಗಳ ವಿಶೇಷತೆ ಏನೆಂದರೆ ಅದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ವಿಷಯಗಳು ಇರುತ್ತಿತ್ತು. ಯುವಕರಿಗೆ ಸ್ಪೂರ್ತಿ, ಮಕ್ಕಳಿಗೆ ಡ್ಯಾನ್ಸ್, ವೃದ್ಧರಿಗೆ ಮನೋರಂಜನೆ, ಸಮಾಜಕ್ಕೆ ಸಂದೇಶ, ಸಂಗೀತ ಪ್ರಿಯರಿಗೆ ಸೂಪರ್ ಹಿಟ್ ಹಾಡುಗಳು ಹೀಗೆ ಎಲ್ಲ ಮಿಶ್ರಿತವಾಗಿರುತ್ತಿತ್ತು. ಇದೀಗ ಅಪ್ಪು ಅವರು ನಮ್ಮನ್ನೆಲ್ಲ ಆಗಲಿ ವರ್ಷ ಉರುಳಿ ಹೋಯಿತು. ಅವರ ಅಗಲಿಕೆ ನಂತರ ಜೇಮ್ಸ್ ,ಲಕ್ಕಿಮಾನ್ ಮತ್ತು ಗಂಧದ ಗುಡಿ ಸಿನಿಮಾ ರಿಲೀಸ್ ಆಗಿ ದಾಖಲೆ ಮಾಡಿವೆ.
ಆದರೆ ಅಪ್ಪು ಮಾಡಬೇಕಾಗಿದ್ದ ಮತ್ತಷ್ಟು ಸಿನಿಮಾಗಳು ಹಾಗೆ ಇದೆ ಅವುಗಳಲ್ಲಿ ಪ್ರಮುಖವಾಗಿ ಪವನ್ ನಿರ್ದೇಶನದ ದ್ವಿತ್ವಾ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು, ಪ್ರಿ ಪ್ರೊಡಕ್ಷನ್ ಕೆಲಸವು ಆರಂಭವಾಗಿತ್ತು ಆದರೆ ಸಿನಿಮಾದ ಮುಂದಿನ ಸ್ಥಿತಿ ಎನ್ನುವುದರ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ತಂಡ ಬಿಟ್ಟು ಕೊಟ್ಟಿಲ್ಲ. ರಾಜಕುಮಾರ ಹಾಗೂ ಯುವರತ್ನ ರೀತಿಯಲ್ಲಿ ಮತ್ತೊಂದು ಸಿನಿಮಾವನ್ನು ಮಾಡುವುದಾಗಿ ಸಂತೋಷ್ ಆನಂದ್ ರಾಮ್ ಅವರು ಹೇಳಿಕೊಂಡಿದ್ದರು, ಆದರೆ ಅದು ಕೂಡ ಸಾಧ್ಯವಾಗಲಿಲ್ಲ.
ಕಾಂತರಾ ಸಿನಿಮಾವನ್ನು ಅಪ್ಪು ಅವರೇ ಮಾಡಬೇಕಿತ್ತಂತೆ ಈ ಬಗ್ಗೆ ರಿಷಭ್ ಅವರೇ ಹೇಳಿದ್ದಾರೆ. ಡೇಟ್ಸ್ ಕೊರತೆಯಿಂದ ಅದನ್ನು ಅಪ್ಪು ಕೈಬಿಟ್ಟಿದ್ದರು, ಮುಂದೊಂದು ದಿನ ಒಟ್ಟಿಗೆ ಕೆಲಸ ಮಾಡೋಣ ಎಂದು ರಿಷಬ್ ಗೆ ಹೇಳಿದ್ದರಂತೆ. ತೂಗುದೀಪ್ ಪ್ರೊಡಕ್ಷನ್ ಜೊತೆ ಅಪ್ಪು ಸಿನಿಮಾ ಆಗಬೇಕಿತ್ತು ಅದೂ ಸಾಧ್ಯವಾಗಲಿಲ್ಲ ಮತ್ತು ಮನ್ಸೂರೆ ಅವರು ಅಪ್ಪುಗಾಗಿ ಕೊಲಂಬಸ್ ಎನ್ನುವ ಸಿನಿಮಾ ಕಥೆಯನ್ನು ರೆಡಿ ಮಾಡುತ್ತಿದ್ದರಂತೆ.
ಅಪ್ಪು ಸಿನಿಮಾ ನೋಡಲು ಅಭಿಮಾನಿಗಳು ಹೇಗೆ ಕಾಯುತ್ತಿದ್ದರು ನಿರ್ದೇಶಕರು ಕೂಡ ಅವರಿಗೆ ನಿರ್ದೇಶನ ಮಾಡಲು ಅದೇ ರೀತಿ ಕಾಯುತ್ತಿದ್ದರು. ಇವರೆಲ್ಲರ ಆಸೆ ಈಡೇರುವ ಮುನ್ನ ಭಗವಂತನೇ ಮೋಸ ಮಾಡಿದ್ದಾನೆ. ಹಾಗಾದರೆ ಅಪ್ಪು ಸಿನಿಮಾ ಇನ್ನು ಬರುವುದಿಲ್ಲವಾ ಎಂದರೆ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಅಪ್ಪುವಿನ ಸಿನಿಮಾ ತರಲು ಪ್ರಯತ್ನ ನಡೆಯುತ್ತಿದ್ದೆಯಂತೆ. ಇದರ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ ಈ ಬಗ್ಗೆ ಸುದ್ದಿಗಳು ಓಡಾಡುತ್ತಿವೆ. ಇದು ಸಾಧ್ಯವಾದರೆ ಮತ್ತೆ ಅಪ್ಪು ಅನ್ನು ತೆರೆ ಮೇಲೆ ನೋಡುವ ಅದೃಷ್ಟ ಸಿಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.