
ಅಪ್ಪು ಇದು ಒಂದು ಹೆಸರಲ್ಲ ಬದಲಾಗಿ ಒಂದು ಭಾವನೆ ಅಂತಾನೆ ಹೇಳಬಹುದು ಏಕೆಂದರೆ ಅಪ್ಪು ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರ ಕಣ್ಣಂಚಲು ಕೂಡ ನೀರು ಬರುತ್ತದೆ. ಅಷ್ಟೇ ಅಲ್ಲದೆ ಹೃದಯದಲ್ಲಿ ಹೇಳಲು ಆಗದಷ್ಟು ಅನುಭವ ಆಗುತ್ತದೆ ಈ ಕಾರಣಕ್ಕಾಗಿ ಅಪ್ಪು ಅವರನ್ನು ನಾವೆಲ್ಲರೂ ಮನುಷ್ಯನ ಮಾದರಿಯಲ್ಲಿ ನೋಡುತ್ತಿಲ್ಲ ಬದಲಾಗಿ ದೈವ ಸಂಭೂತನ ಮಾದರಿಯಲ್ಲಿ ನೋಡುತ್ತೇವೆ. ಬದುಕಿದ್ದರೆ ಅಪ್ಪು ಮಾದರಿಯಲ್ಲಿ ಬದುಕಬೇಕು ಅವರ ಆದರ್ಶಗಳನ್ನು ನಾವು ನಮ್ಮಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಪ್ಪು ಅವರನ್ನು ಕಳೆದುಕೊಂಡು 9 ತಿಂಗಳು ಆಗಿದೆ ಆದರೂ ಕೂಡ ಅವರನ್ನು ಮರೆಯುವುದಕ್ಕೆ ಇನ್ನೂ ಕೂಡ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಯಾವಾಗಲೂ ಕೂಡ ಏನೇ ಮಾತು ಕೊಟ್ಟರೂ ಕೂಡ ಅದನ್ನು ನೆರವೇರಿಸಿ ಕೊಡುತ್ತಾರೆ ಎಲ್ಲಿಯೂ ಕೂಡ ಇದುವರೆಗೂ ಅವರು ಕೊಟ್ಟ ಮಾತನ್ನು ತಪ್ಪೇ ಇಲ್ಲ.
ಆದರೆ ಇದೇ ಮೊದಲ ಬಾರಿಗೆ ಅಪ್ಪು ಅವರು ತಾವು ಕೊಟ್ಟಂತಹ ಮಾತನ್ನು ತಪ್ಪಿದ್ದಾರೆ ಅಂತ ಹೇಳಬಹುದು ಹೌದು ಅಷ್ಟಕ್ಕೂ ಅಪ್ಪು ಕೊಟ್ಟಂತಹ ಮಾತು ಯಾವುದು ಅದನ್ನು ಅವರು ತಪ್ಪಿದ್ದಾದರೂ ಯಾಕೆ ಎಂಬುದನ್ನು ನೋಡುವುದಾದರೆ. ಅಪ್ಪು ಅವರು ಬಾಲ ನಟನಾಗಿ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಪೂರ್ಣ ಪ್ರಮಾಣದ ನಾಯಕ 2001 ರ ವರೆಗೂ ಕೂಡ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. ಬಿಜಿನೆಸ್ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು ಆದರೆ ಚಿತ್ರರಂಗ ಇವರನ್ನು ಕೈಬೀಸಿ ಕರೆಯುತ್ತಿತ್ತು ಅಷ್ಟೇ ಅಲ್ಲದೆ ಹೋರಾಟ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರು ಕೂಡ ತಮ್ಮ ಮಗನನ್ನು ಸಿನಿಮಾದಲ್ಲಿ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ಕಾರಣಕ್ಕಾಗಿಯೇ ತೆಲುಗಿನ ಖ್ಯಾತ ನಿರ್ದೇಶಕ ಆದಂತಹ ಪುರಿ ಜಗನ್ನಾಥ ಅವರು ಅಪ್ಪುಗಾಗಿ ಒಂದು ವಿಶೇಷ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಈ ಕಥೆಯನ್ನು ಕೇಳಿದಂತಹ ಪಾರ್ವತಮ್ಮ ರಾಜಕುಮಾರ್ ಅವರು ಕೂಡ ಒಪ್ಪಿಗೆ ನೀಡುತ್ತಾರೆ.
ಇನ್ನು ಈ ಸಿನಿಮಾಗೆ ಯಾವ ಹೆಸರನ್ನು ಇಡಬೇಕು ಎಂಬ ಚರ್ಚೆ ಶುರುವಾಗುತ್ತದೆ ಆಗ ಎಲ್ಲರೂ ಕೂಡ ಪುನೀತ್ ರಾಜಕುಮಾರ್ ಅವರನ್ನು ಪ್ರೀತಿಯಿಂದ ಅಪ್ಪು ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹಾಗಾಗಿ ಇವರ ಮೊದಲ ಸಿನಿಮಾ ಹಾಗೂ ಕೂಡ ಇವರ ಹೆಸರನ್ನು ಇಡೋಣ ಎಂದು ನಿರ್ಧಾರ ಮಾಡಿ ಅಪ್ಪು ಎಂಬ ಹೆಸರನ್ನೇ ಫೈನಲ್ ಮಾಡುತ್ತಾರೆ. ಗಣೇಶ ಹಬ್ಬದ ದಿನದಂದೇ 2021 ರಂದು ಈ ಒಂದು ಸಿನಿಮಾದ ಚಿತ್ರೀಕರಣದ ಮಹೂರ್ತ ಕಾರ್ಯವನ್ನು ಬಹಳ ಅದ್ದೂರಿಯಾಗಿ ಏರ್ಪಡಿಸುತ್ತಾರೆ. ಈ ಸಿನಿಮಾದ ಮೊದಲ ಪೋಸ್ಟರ್ ನ್ಯೂಸ್ ಪೇಪರ್ ಗಳಲ್ಲಿ ಬರುತ್ತದೆ ಆ ಕಾಲದಲ್ಲಿ ಸೋಶಿಯಲ್ ಮೀಡಿಯಾ ಎಂಬುದು ಇರಲಿಲ್ಲ. ಸಿನಿಮಾ ಗೆ ಸಂಬಂಧಪಟ್ಟಂತಹ ವಿಚಾರಗಳ ಯಾವುದೇ ಆದರೂ ಕೂಡ ಟಿವಿ ಮಾಧ್ಯಮಗಳಿಗಿಂತ ಹೆಚ್ಚು ಜನಕ್ಕೆ ರೀಚ್ ಆಗುತ್ತಿದ್ದದ್ದು ಅಂದರೆ ಪತ್ರಿಕೆ ಮಾಧ್ಯಮಗಳ ಮುಖಾಂತರವೇ.
ಅಪ್ಪು ಸಿನಿಮಾದ ಲಾಂಚಿಂಗ್ ಪೋಸ್ಟರ್ ಬಿಡುಗಡೆ ಆಗಿಯಾದಾಗ ಆ ಆ ಪೋಸ್ಟರ್ ನಲ್ಲಿ “ಅಪ್ಪು ಭಾರೀ ಮೊಂಡ, ಬಲು ಕೋಪಿಷ್ಟ, ಪಕ್ಕಾ ಪೋಕರಿ ಇತ್ಯಾದಿ ಇತ್ಯಾದಿ ಆದರೂ ತುಂಬಾ ಒಳ್ಳೆಯವನು, ನಿಮ್ಮ ಜೊತೆಯಲ್ಲೇ ಇರುವವನು ಅವರು ಯಾರು ಗೊತ್ತಾ ಅಪ್ಪು ಎಂದು ಬರೆದಿತ್ತು” ಸದ್ಯ ಇದೀಗ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮ್ಮ ಜೊತೆಯಲ್ಲೇ ಇರುವವನು ಎನ್ನುವ ಸಾಲು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ನಿಮ್ಮ ಜೊತೆಯಲ್ಲೇ ಸದಾ ಇರುತ್ತೇನೆ ಅಂತ ಹೇಳಿದಂತಹ ಅಪ್ಪು ಇದೀಗ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ ಎಂದು ಅಭಿಮಾನಿಗಳು ಬಹಳ ದುಃಖಿಸುತ್ತಿದ್ದಾರೆ ಅಪ್ಪು ಅವರು ಜೊತೆಯಲ್ಲಿ ಇರದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ ಅಪ್ಪು ಮಾತಿಗೆ ತಪ್ಪಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.