ಅಪ್ಪು ಮಾಲೆ ಬೆನ್ನಲ್ಲೇ ದೀಪಣ್ಣನ ಮಾಲೆ ಹಾಕಲು ರೆಡಿಯಾದ ಕಿಚ್ಚನ ಅಭಿಮಾನಿಗಳು. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ಪುನೀತ್ ರಾಜಕುಮಾರ್ ಅವರನ್ನು ಮಾಲೆ ಹಾಕುವ ವಿಧಿ ವಿಧಾನದ ನಿಯಮಗಳನ್ನು ಒಳಗೊಂಡಿರುವ ಒಂದು ಪಾಂಪ್ಲೆಟ್ ಫೋಟೋ ವೈರಲ್ ಆಗಿತ್ತು. ಬಳಿಕ ಇದು ವಿಜಯನಗರ ಜಿಲ್ಲೆಯಲ್ಲಿ ಅಪ್ಪುಗೆ ಇರುವ ಡೈ ಹಾರ್ಟ್ ಫ್ಯಾನ್ಗಳು ನಿಜವಾಗಿಯೂ ಇಂತದ್ದೊಂದು ನಿರ್ಧಾರ ಮಾಡಿದ್ದಾರೆ ಎನ್ನುವುದು ಬಯಲಿಗೆ ಬಂದಿತ್ತು.
ಬಳಿಕ ಈ ವಿಷಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಎರಡು ಚರ್ಚೆಗಳು ಕೂಡ ನಡೆದು ಹೆಚ್ಚಿನ ಜನ ಅಪ್ಪು ಮತ್ತು ದೊಡ್ಮನೆ ಅಭಿಮಾನಿಗಳೇ ಇದನ್ನು ವಿರೋಧಿಸಿದ್ದರು. ಆ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿದ್ದಂತೆ ಮತ್ತೊಬ್ಬ ಸ್ಟಾರ್ ನ ಅಭಿಮಾನಿಗಳು ಈಗ ತಮ್ಮ ಹೀರೋನ ಮಾಲೆ ಹಾಕಲು ನಿರ್ಧರಿಸಿದ್ದಾರೆ, ಅದರ ಕುರಿತ ಪೋಸ್ಟ್ ಒಂದು ಟ್ರೋಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದೀಪಣ್ಣ ದೇವರ ಮಾಲೆ ಹಾಕುವ ವಿಧಾನ ಎಂದು ಬರೆದಿರುವ ಇದರಲ್ಲಿ ಸುದೀಪ್ ಫೋಟೋ ,ವಾಲ್ಮೀಕಿ ಅವರ ಫೋಟೋ, ಶ್ರೀರಾಮುಲು ಫೋಟೋ ಮತ್ತು ವಾಲ್ಮೀಕಿ ಮಠದ ಗುರುಗಳ ಫೋಟೋ ಹಾಗೂ ಹೀರೋ ಅಜಯ್ ಕೃಷ್ಣ ಫೋಟೋ ಕೂಡ ಹಾಕಲಾಗಿದೆ. ಹೇಳಬೇಕು ಎಂದರೆ ನೆನ್ನೆ ವೈರಲ್ ಆಗಿದ್ದ ಅಪ್ಪು ಮಾಲೆ ನಿಯಮಾವಳಿಗಳಲ್ಲಿ ಒಂದು ರೀತಿಯ ಅರ್ಥಪೂರ್ಣವಾದ ವಿಧಿ ವಿಧಾನವಾದರೂ ಇತ್ತು.
ಆದರೆ ಈಗ ಹೇಳಲಾಗುತ್ತಿರುವ ದೀಪಣ್ಣ ದೇವರ ಮಾಲೆ ವಿಧಿ ವಿಧಾನಗಳಲ್ಲಿ ಎಲ್ಲವೂ ಅಸಂಬದ್ಧವಾಗಿದೆ. ಒಂದು ರೀತಿಯಲ್ಲಿ ಇದನ್ನು ಯಾರೋ ಕಿಡಿಗೇರಿಗಳು ಮತ್ತೊಮ್ಮೆ ಸ್ಟಾರ್ಗಳ ನಡುವೆ ಕಿಚ್ಚು ಹಚ್ಚುವ ಸಲುವಾಗಿ ಈ ರೀತಿ ಹುಚ್ಚುಚ್ಚಾಗಿ ಬರೆದಿದ್ದಾರೆ ಎನ್ನುವ ರೀತಿಯೇ ಇದರಲ್ಲಿ ನಿಯಮಗಳನ್ನು ಬರೆದು ಸುದೀಪ್ ಅಭಿಮಾನಿಗಳನ್ನು ಲೇವಡಿ ಮಾಡಿದ್ದಾರೆ.
ತುಂಗಭದ್ರ ಜಲಾಶಯದಲ್ಲಿ ಸೂರ್ಯೋದಯ ಮುಂಚೆ ಹಾಗೂ ಸೂರ್ಯಾಸ್ತದ ನಂತರ ಓಂ ದೀಪಣ್ಣಾಯ ನಮಃ ಎಂದು ಹೇಳುತ್ತಾ ಮುಳುಗಿ ಏಳಬೇಕು, ದೀಪಣ್ಣ ದೇವರ ಮಾಲೆ ಹಾಕುವ ಎಲ್ಲರೂ, ಕೇಸರಿ ಬಣ್ಣದ ಪಂಚೆ, ಶಾಲು ಮತ್ತು ಶರ್ಟ್ ಜೊತೆ ವಾಲ್ಮೀಕಿ ಗುರೂಜಿ ಮತ್ತು ದೀಪಣ್ಣ ಇರುವ ಡಾಲರ್ ಜಪ ಮಣಿ ಧರಿಸಬೇಕು. ದೀಪಣ್ಣ ದೇವರ ಮತ್ತು ವಾಲ್ಮೀಕಿ ಅವರ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕು.
ವ್ರತ ಇರುವ ಎಲ್ಲರಿಗೂ ಪ್ರಸಾದವಾಗಿ ದೀಪಣ್ಣ ಅವರ ತಂದೆ ಹೋಟೆಲ್ ಆದ ಸರೋವರ್ ಇಂದ ಬೆಳಗ್ಗೆ ಇಡ್ಲಿ ಗಟ್ಟಿ ಚಟ್ನಿ, ಮಧ್ಯಾಹ್ನ ಮೊಸರನ್ನ ಮತ್ತು ರಾತ್ರಿ ತಿಳಿಸಾರು ಬರುತ್ತದೆ. ರಾತ್ರಿ ವೇಳೆ ದೀಪಣ್ಣ ಮಾಲದಾರಿಗಳು ಯಾರು ಸರೋವರ ಬಾರಿಗೆ ಹೋಗಿ ಎಣ್ಣೆ ಹೊಡೆಯಬಾರದು. ಅದಕ್ಕಿಂತ ವಿಶೇಷವಾದ ಸೂಚನೆ ಏನೆಂದರೆ ದೀಪಣ್ಣ ದೇವರ ಮುಂದಿನ ಚಿತ್ರ ರಿಲೀಸ್ ಆದಾಗ ಎಲ್ಲರೂ ಮೂರು ಬಾರಿ ಟಿಕೆಟ್ ತೆಗೆದುಕೊಂಡು ಚಿತ್ರದ ನಿರ್ಮಾಪಕರು ಹಿಮಾಲಯಕ್ಕೆ ಹೋಗದಂತೆ ತಡೆಯಬೇಕು ಎಂದು ಬರೆದಿದ್ದಾರೆ.
ಸದ್ಯಕ್ಕೆ ಈಗ ಇದರ ಬಗ್ಗೆ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಇದಕ್ಕೆಲ್ಲ ಕಾರಣ ಡಿ ಬಾಸ್ ಅಭಿಮಾನಿಗಳು ಎಂದು ಡಿ ಬಾಸ್ ಮಾಲೆ ಹಾಕಿದ್ದರೆ ಯಾವ ರೀತಿ ಇರಬಹುದು ಎನ್ನುವುದನ್ನು ಊಹಿಸಿ ಕಮೆಂಟ್ ಗಳ ಮೂಲಕ ಚುಚ್ಚುತಿದ್ದಾರೆ . ಮುಂದೆ ಇದು ಯಾವ ರೀತಿ ತಿರುವು ಪಡೆದುಕೊಳ್ಳಲಿದೆಯೋ ಕಾದು ನೋಡೋಣ. ಒಂದು ರೀತಿಯಲ್ಲಿ ಧಾರ್ಮಿಕ ಭಾವನೆ ಆಗಿದ್ದ ಮಾಲೆ ವಿಷಯ ಈ ಸ್ಯಾಂಡಲ್ ವುಡ್ ಸ್ಟಾರ್ ಗಳ ಅಂಧಭಿಮಾನಿಗಳ ಕಚ್ಚಾಟದಿಂದ ತನ್ನ ಮೌಲ್ಯ ಕಳೆದುಕೊಳ್ಳದಿದ್ದರೆ ಸಾಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ