ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ

ಕದಂಬ ಸಿನಿಮಾದಿಂದ ಕಲಿತ ಅಭಿನಯ ಹಾಗೂ ವಿಷ್ಣುವರ್ಧನ್ ಅವರಿಂದ ಕಲಿತ ಪಾಠವನ್ನು ಹೇಳಿಕೊಂಡ ನವೀನ್ ಕೃಷ್ಣ. ಸಾಹಸ ಸಿಂಹ ವಿಷ್ಣುವರ್ಧನ್ ಇಡೀ ಕರುನಾಡೇ ಕೊಂಡಾಡುವಂತೆ ಮಾಣಿಕ್ಯ. ಪ್ರೀತಿಯಿಂದ ಎಲ್ಲರೂ ಇವರನ್ನು ದಾದಾ ಎಂದು ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಇವರು ಒಬ್ಬ ಅಣ್ಣನ ಸ್ಥಾನದಲ್ಲಿ ಇದ್ದುಕೊಂಡು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾರೆ.

ಹಿರಿಯರು ಕಿರಿಯರು ಎನ್ನುವ ಯಾವ ಭೇದ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಇವರ ವ್ಯಕ್ತಿತ್ವಕ್ಕೇ ಅವರೇ ಸಾಟಿ. ಅವರ ಜೊತೆ ಅಭಿನಯ ಮಾಡಿರುವ ಅವರ ಚಿತ್ರಗಳಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರು ಕೂಡ ವಿಷ್ಣುವರ್ಧನ್ ಅವರ ಗುಣಗಾನ ಮಾಡುತ್ತಾರೆ ಇದೇ ರೀತಿ ಕನ್ನಡದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಮಗ ಆಗಿರುವ ನವೀನ್ ಕೃಷ್ಣ ಅವರು ಸಹ ಕದಂಬ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಮಗನಾಗಿ ಪಾತ್ರ ಮಾಡಿದ್ದಾರೆ.

ಸಿನಿಮಾ ಅನುಭವದ ಬಗ್ಗೆ ವೇದಿಕೆ ಒಂದರಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ ನಾನು ವಿಷ್ಣುವರ್ಧನ್ ಸರ್ ಮಗನಾಗಿ ಕದಂಬ ಸಿನಿಮಾದಲ್ಲಿ ಅಭಿನಯ ಮಾಡಲು ಪಡೆದುಕೊಂಡ ಆ ಅವಕಾಶ ಅದು ಅವಕಾಶವಲ್ಲ ನನ್ನ ಅದೃಷ್ಟ. ನಾನು ಎಷ್ಟೇ ಸಿನಿಮಾದಲ್ಲಿ ಬಣ್ಣ ಹಾಕಿದರೂ, ನಿರ್ದೇಶನ ಮಾಡಿದರೂ ಆ ಸಿನಿಮಾ ನನ್ನ ಜೀವ ಮಾನದ ಶ್ರೇಷ್ಠ ಅನುಭವ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದ ಒಂದು ಸೀನ್ ನ ಬಗ್ಗೆ ಹೇಳಿಕೊಂಡು ವಿಷ್ಣುವರ್ಧನ್ ಅವರ ಹೃದಯದ ವೈಶಾಲ್ಯತೆಯನ್ನು ವಿವರಿಸಿದ್ದಾರೆ.

ನವೀನ್ ಕೃಷ್ಣ ಅವರು ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಿಂದಲೂ ತಂದೆಯನ್ನು ದ್ವೇಷಿಸುತ್ತಿರುತ್ತಾರೆ. ಅವರ ಹುಟ್ಟು ಹಬ್ಬದ ದಿನದಂದೆ ತಂದೆಗೆ ಚಾಲೆಂಜ್ ಮಾಡಿ ಇಂದಿನಿಂದ ನನಗೂ ನಿನಗೂ ಸಂಬಂಧ ಇಲ್ಲ ನಾನು ನಿನ್ನ ಮಗನೇ ಅಲ್ಲ ಎಂದು ಗಲಾಟೆ ಮಾಡಿ ಹೊರ ಹೋಗುವ ಸೀನ್ ಇರುತ್ತದೆ. ಒಂದೆರಡು ಮಾನಿಟರ್ ಮಾಡಿದ ಮೇಲೆ ವಿಷ್ಣು ಸರ್ ಅವರಿಗೆ ನವೀನ್ ಕೃಷ್ಣ ಅವರು ಯಾಕೋ ಒದ್ದಾಡುತ್ತಿರುವುದು ಕಾಣಿಸುತ್ತದೆ. ಅದಕ್ಕಾಗಿ ಹೊರಗೆ ಕರೆದುಕೊಂಡು ಬಂದು ಸ್ಮೋಕ್ ಮಾಡುತ್ತೀಯ ಎಂದು ಕೇಳಿದರಂತೆ ಆದರೆ ಇಲ್ಲ ಎಂದು ಸುಳ್ಳು ಹೇಳಿದ್ದು ಗೊತ್ತಾದ ತಕ್ಷಣ ಬೇರೆ ಒಬ್ಬರನ್ನು ಕರೆಸಿ ಇವನನ್ನು ಹೊರಗೆ ಕರೆದುಕೊಂಡು ಹೋಗಿ ಎಂದು ಹೇಳಿದರಂತೆ.

ಆರಾಮಾಗಿ ರಿಲಾಕ್ಸ್ ಆಗಿ ಬಾ ಎಂದು ಕಾಯುತ್ತಾ ಕುಳಿತಿದ್ದರಂತೆ. ಅಲ್ಲಿಂದ ಬಂದು ವಿಷ್ಣುವರ್ಧನ್ ಅವರ ಮಾತುಗಳನ್ನು ಕೇಳಿ ಮತ್ತೆ ಆ ಸೀನಲ್ಲಿ ತೊಡಗಿಸಿಕೊಂಡಿರಂತೆ. ಬಹಳ ಚೆನ್ನಾಗಿ ಆ ಸೀನ್ ಬಂದ ಕಾರಣ ಸೆಟ್ ಅಲ್ಲಿದ್ದ ಎಲ್ಲರೂ ಚಪ್ಪಾಳೆ ಹೊಡೆದರಂತೆ ಆದರೆ ಆ ಸೀನ್ ನಲ್ಲಿ ವಿಷ್ಣುವರ್ಧನ್ ಅವರ ಮೇಲೆ ಅವರು ಕ್ಯಾಪ್ ಹಾಕಿದ್ದ ಕಾರಣ ಶೇಡ್ ಬರುತ್ತದೆ ಅದನ್ನು ಗಮನಿಸಿದ ತಂತ್ರಜ್ಞರು ವಿಷ್ಣು ಸರ್ ಗೆ ಬಂದು ಹೇಳಿದಂತೆ.

ಇಡೀ ಸಿನಿಮಾ ಪೂರ್ತಿ ನಾನು ಕಾಣಿಸಿಕೊಳ್ಳುತ್ತೇನೆ ಈ ಸೀನ್ ಒಂದರಲ್ಲಿ ಶೇಡ್ ಇದ್ರೆ ಪರವಾಗಿಲ್ಲ. ಇವನು ತುಂಬಾ ಚೆನ್ನಾಗಿ ಮಾಡಿದ್ದಾನೆ ಮತ್ತೆ ಶಾಟ್ ತೆಗೆದರೆ ಅದು ಬರುವುದಿಲ್ಲ ಇರಲಿ ಬಿಡಿ ಎಂದು ಹೇಳಿದರಂತೆ. ಅಂತಹ ಮನಸ್ಸು ಎಷ್ಟು ಜನರಿಗೆ ತಾನೇ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಸುಮ್ಮನೆ ಇರಲಾರದೆ ಆ ಸೆಟ್‌ಗೆ ನಾನು ಪ್ರೀತಿಸುವ ಹುಡುಗಿಯನ್ನು ಕರೆದುಕೊಂಡು ಹೋಗಿದ್ದೆ ತಕ್ಷಣವೇ ನನ್ನ ತಂದೆಗೆ ಫೋನ್ ಮಾಡಿ ಹೇಳಿ ಬಿಟ್ಟರು ಅದರ ಪರಿಣಾಮ ಇಂದು ಅವಳು ನನ್ನ ಹೆಂಡತಿ ಆಗಿದ್ದಾಳೆ ಎಂದು ಅದನ್ನು ಸಹ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

Leave a Comment