
.
ಸ್ಯಾಂಡಲ್ ವುಡ್ ಅಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಧ್ರುವ ಸರ್ಜಾ ಅವರ ಸಿನಿಮಾಗಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ, ಯಾಕೆಂದರೆ ಅವರು ವರ್ಷಕ್ಕಿಂತಲೂ ಹೆಚ್ಚು ಕಾಲ ಸಮಯ ತೆಗೆದುಕೊಂಡು ಒಂದು ಸಿನಿಮಾಗೆ ತಯಾರಾಗಿ ಅಭಿನಯಿಸುತ್ತಾರೆ. ಹಾಗಾಗಿ ಇವರ ಅಭಿಮಾನಿಗಳು ಇವರ ಚಿತ್ರವನ್ನು ಬಹಳ ಅದ್ದೂರಿಯಾಗಿ ಸ್ವಾಗತಿಸುತ್ತಾರೆ.
ಇದೇ ರೀತಿ ನಾಡಿನಾದ್ಯಂತ ಥಿಯೇಟರ್ ಗಳಲ್ಲಿ ಧ್ರುವ ಸರ್ಜಾ ಅವರ ಅಭಿಮಾನಿಗಳ ವತಿಯಿಂದ ಸಿನಿಮಾ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ ಸಿನಿಮಾ ಆರಂಭ ಆಗುವ ಮುನ್ನ ಎಂದಿನಂತೆ ಎಲ್ಲಾ ಸಿನಿಮಾಗಳ ರೀತಿ ಈ ಚಿತ್ರದಲ್ಲೂ ಕೂಡ ಪುನೀತ್ ರಾಜಕುಮಾರ್ ಅವರ ಫೋಟೋ ಮತ್ತು ಜೊತೆಗೆ ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಫೋಟೋ ಎರಡನ್ನು ಸಹ ಫ್ರೇಮ್ ಪೂರ್ತಿ ಹಾಕಿ ಶ್ರದ್ಧಾಂಜಲಿ ಕೋರಲಾಗಿದೆ.
ಅಪ್ಪು ಮತ್ತು ಚಿರು ಫೋಟೋ ತೆರೆ ಮೇಲೆ ಬರುತ್ತಿದ್ದಂತೆ ಥಿಯೇಟರ್ ಅಲ್ಲಿದ್ದ ಎಲ್ಲಾ ಧ್ರುವ ಮತ್ತು ಅಪ್ಪು ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹಾಕಿ ಎದ್ದು ನಿಂತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಯಾವುದೋ ಒಂದು ಥಿಯೇಟರ್ ನ ಪರಿಸ್ಥಿತಿ ಅಲ್ಲ ಬಹುತೇಕ ಎಲ್ಲಾ ಥಿಯೇಟರ್ ಗಳು ಕೂಡ ಅವರಿಗೆ ಅರಿವಿಲ್ಲದಂತೆ ಅಪ್ಪು ಫೋಟೋ ನೋಡುತ್ತಿದ್ದರೆ ಈ ರೀತಿ ಮಾಡಬೇಕು ಎಂದು ಅಭಿಮಾನಿಗಳಿಗೆ ಅನಿಸಿದೆ.
ಅಪ್ಪು ಆಶೀರ್ವಾದದಿಂದ ಈ ಸಿನಿಮಾ ಒಳ್ಳೆ ಸಕ್ಸಸ್ ಪಡೆಯಲಿ ಶುಭವಾಗಲಿ ಎಂದು ಅಪ್ಪುವಿನ ಅಭಿಮಾನಿಗಳು ಹಾರೈಸುತಿದ್ದರೆ ಮತ್ತೆ ಎಂದಿನಂತೆ ಕೆಲ ಕಿಡಿಗೇಡಿಗಳು ಈ ವಿಷಯದಲ್ಲೂ ಕೂಡ ಮತ್ತೊಂದು ಚಿತ್ರದ ನೆನೆದು ಕುಟುಕುತ್ತಿದ್ದಾರೆ. ಡಿ ಬಾಸ್ ಅವರ ಕ್ರಾಂತಿ ಸಿನಿಮಾದಲ್ಲಿ ಅಪ್ಪು ಅವರ ಫೋಟೋ ಹಾಕಿ ಶ್ರದ್ದಾಂಜಲಿ ಸಲ್ಲಿಸಲಿಲ್ಲ, ಅಪ್ಪು ಅವರು ಅ’ಗ’ಲಿ’ದ ಅಂದಿನಿಂದಲೂ ಕೂಡ ಯಾವುದೇ ಕಿರುಚಿತ್ರ ರಿಲೀಸ್ ಆದರು ಕೂಡ ಅದಕ್ಕೂ ಅಪ್ಪು ಅವರ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿತ್ತು.
ಯಾವುದೇ ಸಿನಿಮಾ ಕಾರ್ಯಕ್ರಮ ನಡೆದರೂ ಕೂಡ ಅಪ್ಪು ಫೋಟೋ ಮುಂದೆ ದೀಪ ಹಚ್ಚಿ ನಂತರ ಅದನ್ನು ಆರಂಭಿಸಲಾಗುತ್ತಿತ್ತು. ಮೊದಲ ಬಾರಿಗೆ ಕ್ರಾಂತಿ ಸಿನಿಮಾ ಆ ನಿಯಮವನ್ನು ಮುರಿದಿತ್ತು ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾರ್ಟಿನ್ ಚಿತ್ರದಲ್ಲಿ ಟ್ರಬ್ಯೂಟ್ ಸಲ್ಲಿಸಿರುವ ರೀತಿ ನೋಡಿ, ಹಿಂದಿನದನ್ನು ನೆನೆದು ಜನರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಮಾರ್ಟಿನ್ ಚಿತ್ರದ ಬಗ್ಗೆ ಹೇಳುವುದಾದರೆ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಅವರ ಕಾಂಬಿನೇಷನಲ್ಲಿ ಮೂಡಿ ಬಂದಿರುವ ಮತ್ತೊಂದು ಚಿತ್ರ ಇದಾಗಿದೆ.
ಈಗಾಗಲೇ ಇವರಿಬ್ಬರ ಕಾಂಬಿನೇಷನ್ನ ಅದ್ದೂರಿ ಮತ್ತು ಬಹುದ್ದೂರ್ ಗೆದ್ದು ಒಳ್ಳೆ ಕಲೆಕ್ಷನ್ ಕೂಡ ಗಿಟ್ಟಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಕೂಡ ಆಗಿರುವುದರಿಂದ ಮಾರ್ಟಿನ್ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಉದಯ್ ಮೆಹ್ತಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವೈಭವಿ ಶಾಂಡೀಲ್ಯ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಟೀಸರ್ ಹಾಗೂ ಟೈಟಲ್ ಲಾಂಚ್ ಆದ ಸಮಯದಿಂದಲೂ ಕೂಡ ಬಹಳ ಕುತೂಹಲವನ್ನು ಉಂಟು ಮಾಡಿತ್ತು, ಇಂದು ಎಲ್ಲರಿಗೂ ನೆಚ್ಚಿನ ನಟವನ್ನು ಸಿನಿಮಾವನ್ನು ನೋಡಿಕೊಂಡಿ ಸಂಭ್ರಮಿಸುವ ಘಳಿಗೆ ಕೂಡಿ ಬಂದಿದೆ. ಮತ್ತೊಮ್ಮೆ ಕನ್ನಡದ ಮತ್ತೊಂದು ಪಾನ್ ಇಂಡಿಯಾ ಚಿತ್ರಕ್ಕೆ ಶುಭವಾಗಲಿ ಎಂದು ಹರಸೋಣ.