Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.

Posted on February 23, 2023 By Kannada Trend News No Comments on ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.

ನಟಿ ಸಮಂತ ಋತು ಪ್ರಭು (Samantha Ruthu Prabhu) ಎನ್ನುವ ಮುದ್ದು ಮುಖದ ಚಲುವೆ ಇಡೀ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ನಟಿ ಎನಿಸಿಕೊಳ್ಳುವಷ್ಟು ಹತ್ತಿರಕ್ಕೆ ಹೆಸರು ಮಾಡಿದವರು. ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳು, ವೆಬ್ ಸೀರೀಸ್ ಅಲ್ಲಿ ಬ್ಯಾಕ್ ಟು ಬ್ಯಾಕ್ ಇಟ್ ಕೊಟ್ಟ ಸ್ಟಾರ್ ನಟಿ. ಸಮಂತ ವರ್ಷಗಳ ಹಿಂದೆಯಿಂದ ಮಯೋಸಿಟಿಸ್ (Myositos) ಎನ್ನುವ ಕಾಯಿಲೆಗೆ ತುತ್ತಾಗಿ ವಿಪರೀತವಾಗಿ ಬಳಲಿ ಹೋಗಿದ್ದಾರೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ.

ಮಯೋಸಿಟಿಸ್ ಎನ್ನುವ ಕಾಯಿಲೆ ಎಷ್ಟು ಮಾರಕವಾದದ್ದು ಎಂದರೆ ನಟಿ ಸಮಂತ ಸ್ಥಾನದಲ್ಲಿ ಜನಸಾಮಾನ್ಯರು ಯಾರಾದರೂ ಇದ್ದಿದ್ದರೆ ಖಂಡಿತ ಅವರು ಬದುಕುಳಿಯುವ ಸಾಧ್ಯತೆ ಇರಲಿಲ್ಲ, ಹೀರೋಯಿನ್ ಆಗಿರುವ ಕಾರಣ ದುಬಾರಿ ಚಿಕಿತ್ಸೆ (costly treatment) ಪಡೆದು ಭಾರತ ಅಮೆರಿಕ ದಕ್ಷಿಣ ಕೊರಿಯಾ ಇಲ್ಲೆಲ್ಲ ಚಿಕಿತ್ಸೆಗಾಗಿ ಅಲೆದಾಡಿ ಮತ್ತೆ ಭಾರತಕ್ಕೆ ಹಿಂದಿರುಗಿ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ.

ಕಳೆದ ತಿಂಗಳಷ್ಟೇ ಶಾಕುಂತಲ ಸಿನಿಮಾದ ಪ್ರಚಾರದಲ್ಲಿ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾಗ ಸಮಂತ ಎಷ್ಟು ಒದ್ದಾಡುತ್ತಿದ್ದಾರೆ ಎನ್ನುವುದು ಕ್ಯಾಮರ ಎದುರು ಬಯಲಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಈಗಷ್ಟೇ 600 ಇಮೆಟ್ಟಿಲುಗಳನ್ನು ಹತ್ತಿ ಹರಕೆ ಸಲ್ಲಿಸಿದ್ದಾರೆ. ಹಾಗಾದರೆ ನಟಿಮಣಿ ಸಂಪೂರ್ಣವಾಗಿ ಗುಣವಾಗಿದ್ದಾರಾ ಎಂದರೆ ಇಲ್ಲ, ಬದಲಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಇನ್ನೂ ಕೂಡ ಆಕೆಗೆ ದಿನಕ್ಕೆ ನಾಲ್ಕು ಗಂಟೆಗಳ ಚಿಕಿತ್ಸೆ ನಡೆಯುತ್ತದೆ.

ಸಮಂತ ಅವರ ಆರೋಗ್ಯ ಸುಧಾರಿಸಲು ಕಾರಣವಾಗಿರುವುದು ಚಿಕಿತ್ಸೆ ಜೊತೆಗೆ ಅವರ ಆತ್ಮವಿಶ್ವಾಸ ಮತ್ತು ಅವರು ನಂಬಿರುವ ದೇವರು ಎಂದರೆ ಆ ಮಾತು ಸುಳ್ಳಲ್ಲ. ಇದೇ ಕಾರಣಕ್ಕಾಗಿ ಸಮಂತ ಹರಕೆ ತೀರಿಸಲು ಹೋಗಿದ್ದಾರೆ ತಮಿಳುನಾಡಿನ ಪಳನಿ ಮುರುಗನ್ (Palani Murugan temple) ದೇವಸ್ಥಾನದ ಪವಾಡ ಶಕ್ತಿಯ ಬಗ್ಗೆ ದಕ್ಷಿಣ ಭಾರತದ ಎಲ್ಲರಿಗೂ ಗೊತ್ತು. ಸಮಂತ ಅವರು ಸಹ ಹತ್ತಿರದವರ ಸಲಹೆ ಮೇರೆಗೆ ಆ ದೇವಾಲಯದಲ್ಲಿ ಹರಕೆ ಕಟ್ಟಿಕೊಂಡಿದ್ದಾರಂತೆ.

ಬೇಗ ಗುಣವಾದರೆ ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆಯುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದರಂತೆ ಈಗ ಚೇತರಿಕೆ ಕಾಣುತ್ತಿರುವ ಕಾರಣ ಸಮಂತ ಮಾತಿನಂತೆ 600 ಮೆಟ್ಟಿಲುಗಳನ್ನು ಜನಸಾಮಾನ್ಯರ ನಡುವೆ ಹತ್ತಿ ಪ್ರತಿ ಮೆಟ್ಟಿಲಿಗೂ ಕೂಡ ಕರ್ಪೂರವನ್ನು ಹಚ್ಚಿ ಕೈಮುಗಿದು ಪಳನಿ ಮುರುಗನ್ ದರ್ಶನ ಪಡೆದು ಧನ್ಯರಾಗಿದ್ದಾರೆ. ಸಮಂತ ಈಗ ಆಧ್ಯಾತ್ಮದ ಕಡೆ ಹೆಚ್ಚು ವಾಲಿದ್ದಾರೆ ಎನ್ನುವುದಕ್ಕೆ ಅವರು ಎಲ್ಲೇ ಕಾಣಿಸಿಕೊಂಡರು ಅವರ ಕೈಯಲ್ಲಿ ಒಂದು ಜಪಮಾಲೆ ಇರುವುದೇ ಸಾಕ್ಷಿ.

ಮೂಲತಃ ಕ್ರಿಶ್ಚಿಯನ್ ಧರ್ಮದವರಾದ ಸಮಂತ ನಂತರ ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿದ್ದರು. ಹಿಂದೂ ಧರ್ಮದ ಎಲ್ಲಾ ಆಚರಣೆಗಳನ್ನು ಅನುಸರಿಸುತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಜಪ ಶ್ಲೋಕ ಪಠಣೆ ಮಾಡುವುದು ಮುಂತಾದವುಗಳನ್ನು ಮಾಡುತ್ತಿದ್ದರು. ಈಗ ಅವರ ಕೈಯಲ್ಲಿರುವ ಜಪಮಾಲೆ ಬಗ್ಗೆ ಪ್ರಶ್ನೆ ಕೇಳಿದರೆ ವಿಷ್ಣು ಸಹಸ್ರನಾಮ ಹೇಳುತ್ತೇನೆ ಎಂದು ಅವರೇ ಉತ್ತರ ಕೊಡುತ್ತಾರೆ. ಮಯೋಸಿಟಿಸ್ ಖಾಯಿಲೆಗೆ ಮುಖ್ಯ ಕಾರಣ ಖಿನ್ನತೆ. ಯೋಗ, ವ್ಯಾಯಾಮ, ಆಧ್ಯಾತ್ಮ, ಧ್ಯಾನ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದರಿಂದ ಇದು ಬೇಗ ಗುಣವಾಗಲು ಸಹಾಯಕವಾಗುತ್ತದೆ.

ಮತ್ತೆ ಸಮಂತ ತನ್ನ ಅರ್ಧ ಆಗಿದ್ದ ಸಿನಿಮಾಗಳಾದ ಖುಷಿ ಶಾಕುಂತಲಾ ಮತ್ತು ಹಿಂದಿ ವೆಬ್ ಸೀರೀಸ್ ಗಳ ಶೂಟಿಂಗ್ ಕಡೆ ಗಮನ ಕೊಡುತ್ತಿದ್ದಾರೆ. ಜೊತೆಗೆ ವೈವಾವಿಕ ಜೀವನದಲ್ಲಾದ ಕಹಿ ಘಟನೆಗಳ ನೋವಿನಿಂದ ಆಚೆ ಬರುವ ಪ್ರಯತ್ನ ಮಾಡುತ್ತಿದ್ದು, ಹೈದರಾಬಾದ್ ತೊರೆದು ಮುಂಬೈ ಅಲ್ಲಿ ಸೆಟಲ್ ಆಗಲು ನಿರ್ಧಾರ ಕೂಡ ಮಾಡಿ ಮುಂಬೈಯಲ್ಲಿ 15 ಕೋಟಿಯ ಮನೆ ಖರೀದಿಸಿದ್ದಾರಂತೆ. ಸಾವಿನ ಕದ ತಟ್ಟಿ ಬದುಕನ್ನು ಗೆದ್ದಿರುವ ಸಮಂತ ಬದುಕು ಭರವಸೆ ಕಳೆದುಕೊಂಡ ಎಷ್ಟೋ ಜನರಿಗೆ ಸ್ಪೂರ್ತಿ ಆಗಿದೆ.

Viral News Tags:Samanth Ruth Prabhu, Samantha
WhatsApp Group Join Now
Telegram Group Join Now

Post navigation

Previous Post: ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು
Next Post: ವಿಷ್ಣುವರ್ಧನ್ ಸಿನಿಮಾ ನೋಡೋಕೆ ಅಣ್ಣಾವ್ರ ಇಡೀ ಕುಟುಂಬನೇ ಥಿಯೇಟರ್ ಗೆ ಬಂದಿತ್ತು ಅದು ಯಾವ ಸಿನಿಮಾ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore