Friday, June 9, 2023
HomeViral Newsನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ...

ನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ 4 ದಿನಕ್ಕೆ ಇದೆಂಥ ಶಾ-ಕ್ ಕೊಟ್ರು ವಿಚಾರ ಕೇಳಿ ಕಣ್ಣಿರಿಟ್ಟ ನಟಿ ಸ್ವರ ಭಾಸ್ಕರ್

 

ಸೆಲೆಬ್ರಿಟಿಗಳು ಅಂತರ್ಜಾತಿ ವಿವಾಹ ಆಗುವುದು ಹೊಸದೇನಲ್ಲ ಈಗಾಗಲೇ ಭಾರತದಲ್ಲಿ ಹಲವು ಚಿತ್ರರಂಗದ ನಟಿಯರು ಈ ರೀತಿ ಬೇರೆ ಧರ್ಮದವರನ್ನು ವರಿಸಿದ್ದಾರೆ. ಅದೇ ರೀತಿ ಬಾಲಿವುಡ್ ನ ಹೆಸರಾಂತ ನಟಿ ಸ್ವರ ಭಾಸ್ಕರ್ ಅವರು ಕೂಡ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಫಹದ್ ಅಹ್ಮದ್ ಅವರನ್ನು ಕೈಹಿಡಿದಿದ್ದಾರೆ. ಇವರಿಬ್ಬರದು ಪ್ರೇಮ ವಿವಾಹ ಆಗಿದ್ದು, ಜೋಡಿ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಲ್ಲಿ ಮದುವೆ ಆಗಿರುವ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಇದರ ಬೆನ್ನಲ್ಲೇ ಇವರ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜೋರು ಚರ್ಚೆ ಆಗುತ್ತಿದೆ. ಕೆಲವರು ಇದು ಮತ್ತೊಂದು ಲವ್ ಜಿಹಾದ್ ಪ್ರಕರಣ ಎನ್ನುತ್ತಿದ್ದರೆ, ಇಸ್ಲಾಂ ಧರ್ಮಗುರುಗಳೇ ಈ ಮದುವೆ ಅಸಿಂಧು ಎಂದು ಹೇಳುತ್ತಿದ್ದಾರೆ. ಸ್ವರ ಭಾಸ್ಕರ್ ಅವರು ಶರಿಯ ಕಾನೂನಿನ ಅಡಿಯಲ್ಲಿ ಫಹಾದ್ ಅಹ್ಮದ್ ಅವರನ್ನು ಮದುವೆ ಆಗಿದ್ದಾರೆ. ಇಸ್ಲಾಂ ಧರ್ಮ ಗುರುಗಳಾದ ಚಿಕಾಗೋ ಮೂಲದ ನಿಯತಕಾಲಿಕ ಸಂಪಾದಕ ಮತ್ತು ವಿದ್ವಾಂಸರಾಗಿರುವ ಡಾಕ್ಟರ್ ಯಾಸಿರ್ ನಹೀಮ್ ಅಲ್ ವಾಜಿದಿ ಅವರು ಸೋಶಿಯಲ್ ಮೀಡಿಯಾ ಟ್ವಿಟರ್ ಅಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಈ ಮದುವೆಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ ಎಂದಿದ್ದಾರೆ.

ಇಬ್ಬರು ಅನ್ಯ ಧರ್ಮಿಯರು ಮದುವೆ ಆಗುವುದನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ, ಈಗ ಮದುವೆ ಆಗುವ ಕಾರಣಕ್ಕಾಗಿ ಸ್ವರ ಭಾಸ್ಕರ್ ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಅದನ್ನು ಸಹ ಅಲ್ಲಾ ಒಪ್ಪುವುದಿಲ್ಲ ಎಂದು ಹೇಳಿ ಅವರ ದೃಷ್ಟಿಕೋನದ ಪ್ರಕಾರ ಮದುವೆ ಆ ಸಿಂಧು ಎಂದಿದ್ದಾರೆ. ಇದರ ಬೆನ್ನಲ್ಲೇ ಇದು ದೇಶದಾದ್ಯಂತ ವ್ಯಾಪಕ ಚರ್ಚೆ ಆಗುತ್ತಿದೆ ದೇಶದ ಪ್ರತಿಷ್ಠಿತ ರೇಡಿಯೋ ಆರ್ ಜೆ ಸಯೇಮಾ ಅವರು ಧಾರ್ಮಿಕ ವಿದ್ವಾಂಸರು ಜನರ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಬಾರದು, ಈಗಲೇ ಭಾರತದಂತಹ ದೇಶದಲ್ಲಿ ಅಂತರ್ಜಾತಿಗಳ ವಿವಾಹಗಳು ಹಗೆತನ ಮತ್ತು ಅನುಮಾನವನ್ನು ಎದುರಿಸುತ್ತಿವೆ.

ಇಂತಹ ಬೆಳವಣಿಗೆ ಇರುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಅದಕ್ಕೆ ರೀ ಟ್ವೀಟ್ ಮಿಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಇಷ್ಟಾಗುತ್ತಿದ್ದಂತೆ ಅನೇಕ ಟ್ವಿಟರ್ ಬಳಕೆದಾರರು ಆರ್.ಜೆ ಸಯೇಮಾ ಪರ ಮಾತನಾಡುತ್ತಿದ್ದಾರೆ. ಸಯೀನಾ ಎನ್ನುವ ಒಬ್ಬ ಟ್ವಿಟರ್ ಬಳಕೆಗಾರ್ತಿ ಧರ್ಮ ಗುರುಗಳು ಯಾರಾದರೂ ಬಂದು ಅಲ್ಲಾ ಏನು ಹೇಳಿದ್ದರು ಎಂದು ಕೇಳಿದರೆ ಆಗ ಮಾತ್ರ ಮಾತನಾಡಬೇಕು ಅಲ್ಲಿಯವರೆಗೂ ಸುಮ್ಮನಿರಿ, ವಿನಾಕಾರಣ ಬೇರೆಯವರ ಮದುವೆ ವಿಷಯಕ್ಕೆ ತಲೆ ಹಾಕಬೇಡಿ ಎಂದು ಕಮೆಂಟ್ ಮಾಡಿದ್ದಾರೆ.

ಸಮರ್ ಖಾನ್ ಎನ್ನುವ ಮತ್ತೊಬ್ಬ ಬರಹಗಾರರು ಧರ್ಮ ಗುರುಗಳು, ಧರ್ಮ ಪ್ರಚಾರಕರು ಮತ್ತು ವಿದ್ವಾಂಸರು ಎಂದುಕೊಂಡು ಕೆಲವರು ಎಲ್ಲ ವಿಷಯಕ್ಕೂ ಮೂಗು ತೂರಿಸುತ್ತಾರೆ. ಆದರೆ ಯಾರು ಯಾರ ವೈಯಕ್ತಿಕ ವಿಷಯಕ್ಕೂ ಹೋಗದೆ ಇದ್ದರೆ ಅದೇ ಒಳ್ಳೆಯದು ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಸದಾ ಸ್ವರ ಭಾಸ್ಕರ್ ಅವರು ಹಿಂದು ಧರ್ಮವನ್ನು ಲೇವಾಡಿ ಮಾಡುತ್ತಾ ಅಥವಾ ಹಿಂದು ಭಾವನೆಗಳಿಗೆ ಧಕ್ಕೆ ಆಗುವಂತ ಪೋಸ್ಟ್ ಹಾಕುತ್ತಾ ಕಾಂಟ್ರವರ್ಸಿ ಕ್ವೀನ್ ಎನಿಸಿಕೊಂಡಿದ್ದರು.

ಈಗ ಮದುವೆ ವಿಷಯದಲ್ಲೂ ಕೂಡ ಅಣ್ಣ ಎಂದು ಕರೆದವರನ್ನೇ ಮದುವೆಯಾಗಿ ಮತ್ತೊಂದು ವಿವಾದ ಸೃಷ್ಟಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಇವರ ಮದುವೆ ಬೆಳವಣಿಗೆ ಇನ್ನೂ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.