ನಟಿ ಆಶಿಕಾ ರಂಗನಾಥ್ ಅವರು ಮೂಲತಃ ಹಾಸನದವರು ಮೊದಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ತದನಂತರ ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ತಮ್ಮ ಪ್ರತಿಭೆಯನ್ನು ಇಡೀ ದಕ್ಷಿಣ ಭಾರತದ ತುಂಬೆಲ್ಲ ಚೆಲ್ಲಿದರು. ಹೌದು ಶರಣ್ ಅಭಿನಯದ ರಾಂಬೊ 2 ಸಿನಿಮದಲ್ಲಿ ಚುಟು ಚುಟು ಎಂಬ ಹಾಡಿಗೆ ಇವರು ಮಾಡಿರುವಂತಹ ಡಾನ್ಸ್ ಬಹಳ ಮನ ಮೋಹಕವಾಗಿದೆ. ಇದನ್ನು ಹೊರತು ಪಡಿಸಿದರೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮದಗಜಾ ಸಿನಿಮಾದಲ್ಲಿಯೂ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಒಂದು ಪಾತ್ರಕ್ಕೆ ಇವರು 2022 ಸೈಮಾ ಫಿಲಂ ಅವಾರ್ಡನ್ನು ಕೂಡ ಪಡೆದುಕೊಂಡಿದ್ದಾರೆ ಆಶಿಕಾ ರಂಗನಾಥ್ ಅವರು ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಕಳೆದಿದೆ. ಆದರೆ ಒಂದು ಬಾರಿಯೂ ಕೂಡ ಇವರು ಯಾವುದೇ ಅವಾರ್ಡನ್ನು ಸ್ವೀಕರಿಸಿರಲಿಲ್ಲ ಇದೆ ಮೊದಲ ಬಾರಿಗೆ ಮದಗಜ ಸಿನಿಮಾದ ಮೂಲಕ ಅವಾರ್ಡ್ ಅದು ಸ್ವೀಕರಿಸಿದ್ದಾರೆ. ಹಾಗಾಗಿ ಮದಗಜ ಸಿನೆಮಾದ ಟೀಮ್ ಗೆ ತಮ್ಮ ಅವಾರ್ಡ್ ಅನ್ನು ಅರ್ಪಿಸಿದ್ದಾರೆ ಈ ಒಂದು ಅವಾರ್ಡ್ ಪಡೆದುಕೊಂಡ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳೊಂದಿಗೆ ತಮ್ಮ ಸಂತೋಷದ ಕ್ಷಣವನ್ನು ಸವಿದಿದ್ದಾರೆ.
ಇನ್ನು ನಟಿ ಆಶಿಕಾ ರಂಗನಾಥ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ ಹೌದು ಇತ್ತೀಚಿಗಷ್ಟೇ ಆಶಿಕಾ ಅವರು ತವೀಣ ಚಿತ್ರದಲ್ಲಿ ನಟನೆ ಮಾಡುತ್ತಿರುವುದರ ಬಗ್ಗೆ ಮಾಹಿತಿಯನ್ನು ಹೊರ ಹಾಕಿದ್ದಾರೆ. ಇತ್ತೀಚೆಗಷ್ಟೇ ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ನಟ ಸಿದ್ಧಾರ್ಥ್ ಅಭಿನಯದ ಮುಂದಿನ ತಮಿಳು ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಪ್ರೊಡಕ್ಷನ್ ನಂಬರ್ 1 ಎಂಬ ತಾತ್ಕಾಲಿಕ ಶೀರ್ಷಿಕೆ ಅಡಿಯಲ್ಲಿ ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಚಿತ್ರದ ಮುಹೂರ್ತ ಸಮಾರಂಭವನ್ನು ನಡೆದಿದ್ದು, ಈ ಕಾರ್ಯಕ್ರಮದ ಫೋಟೊಗಳನ್ನು ಆಶಿಕಾ ರಂಗನಾಥ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಆಶಿಕಾ ರಂಗನಾಥ್ ನೆಚ್ಚಿನ ನಟರಲ್ಲಿ ಓರ್ವರಾದ ಸಿದ್ಧಾರ್ಥ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರ. ಸಿದ್ಧಾರ್ಥ್ ಅಭಿನಯದ ‘ಬೊಮ್ಮರಿಲ್ಲು’ ಹಾಗೂ ‘ನುವ್ವೊಸ್ತಾನಂಟೆ ನೇನೊದ್ದಂಟಾನಾ’ ಚಿತ್ರಗಳನ್ನು ಎಷ್ಟು ಬಾರಿ ನೋಡಿದ್ದೇನೆ ಎಂಬುದೇ ಲೆಕ್ಕವಿಲ್ಲ. ಸಿದ್ಧಾರ್ಥ್ ಜೊತೆಗೆ ನಟಿಸುತ್ತಿರುವುದು ತುಂಬಾ ವಿಶೇಷ ಎಂದು ಬರೆದುಕೊಳ್ಳುವ ಮೂಲಕ ಸಂತಸದ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು.
ನಿಜಕ್ಕೂ ಕೂಡ ಇದು ಹೆಮ್ಮೆ ಪಡುವಂತಹ ವಿಚಾರವೇ ನಮ್ಮ ಕನ್ನಡದ ನಟಿಯರು ಬೇರೆ ರಾಜ್ಯಗಳಿಗೆ ಹೋಗಿ ಬೇರೆ ಭಾಷೆಯಲ್ಲಿ ಸಾಧನೆ ಮಾಡುತ್ತಿದ್ದಾರೆ ಅಂದರೆ ನಮ್ಮ ಕನ್ನಡಿಗರ ಪ್ರತಿಭೆ ಎಷ್ಟು ಇದೆ ಎಂಬುದನ್ನು ನಾವು ಇಲ್ಲೇ ಅರ್ಥಮಾಡಿಕೊಳ್ಳಬಹುದು. ಇನ್ನೂ ಆಶಿಕಾ ಅವರ ಈ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ನೀವು ಕಳೆದು ಹೋಗುತ್ತೀರಾ ಅಷ್ಟು ಮೋಹಕವಾಗಿ ಈ ಡಾನ್ಸ್ ಮಾಡಿದ್ದಾರೆ. ಇವರ ಎನರ್ಜಿಗೆ ಹಾಗೂ ಇವರ ಡೆಡಿಕೇಶನ್ ಗೆ ಎಲ್ಲರೂ ಒಂದು ಸಲಾಂ ಹೊಡೆಯಲೇಬೇಕು ಅಂತ ಹೇಳುತ್ತಾರೆ. ಆಶಿಕಾ ರಂಗನಾಥ್ ಅವರು ಮಾಡಿದಂತಹ ಡಾನ್ಸ್ ಈ ಕೆಳಗಿನ ವಿಡಿಯೋದಲ್ಲಿ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ