Friday, June 9, 2023
HomeEntertainmentಜೋಡಿ ನಂಬರ್ ಒನ್ ಶೋ ಗೆದ್ದ ಅಭಿಜಿತ್ ಮತ್ತು ರೋಹಿಣಿ ದಂಪತಿಗಳಿಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ.?

ಜೋಡಿ ನಂಬರ್ ಒನ್ ಶೋ ಗೆದ್ದ ಅಭಿಜಿತ್ ಮತ್ತು ರೋಹಿಣಿ ದಂಪತಿಗಳಿಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು ಈ ಪೈಕಿ ಅಭಿಜಿತ್ ಮತ್ತು ರೋಹಿಣಿ ದಂಪತಿಗಳು ಕೂಡ ಭಾಗವಹಿಸಿದ್ದರು. ಸುಮಾರು ಮೂರು ತಿಂಗಳಗಳ ಕಾಲ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಇಬ್ಬರೂ ಕೂಡ ಅದ್ಭುತವಾದಂತಹ ಪರ್ಫಾರ್ಮೆನ್ಸ್ ನೀಡಿದ್ದರು‌. ಕಳೆದ ವಾರವಷ್ಟೇ ಗ್ರಾಂಡ್ ಫಿನಾಲೆಯನ್ನು ಆಯೋಜಿಸಲಾಗಿತ್ತು ಈ ವೇದಿಕೆಯಲ್ಲಿ ಅಭಿಜಿತ್ ಮತ್ತು ರೋಹಿಣಿ ದಂಪತಿಯವರು ವಿಜೇತರಾಗಿದ್ದಾರೆ. ಇದು ನಿಜಕ್ಕೂ ಕೂಡ ಸಂತಸ ಪಡಬೇಕಾದ ವಿಚಾರವೇ ಏಕೆಂದರೆ ಸತತ ಸೋಲುಗಳಿಂದ ಕಂಗಿಟ್ಟಿದ್ದಂತಹ ಅಭಿಜಿತ್ ದಂಪತಿಗಳಿಗೆ ಈ ಗೆಲವು ನಿಜಕ್ಕೂ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಅಷ್ಟೇ ಅಲ್ಲದೆ ಈ ಶೋನಲ್ಲಿ ಗೆದ್ದಿರುವ ಕಾರಣ ಬದುಕುವುದಕ್ಕೆ ಒಂದು ಭರವಸೆಯೂ ಕೂಡ ಮೂಡಿದೆಯಂತೆ ಈ ಮಾತನ್ನು ಅಭಿಜಿತ್ ಮತ್ತು ರೋಹಿಣಿ ದಂಪತಿಗಳಿಗೆ ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಭಿಜಿತ್ ಅವರು ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಸಿನಿಮಾರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಹಲವಾರು ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ಕಿರುತೆರೆಯ ಸಾಕಷ್ಟು ಧಾರಾವಾಹಿಯಲ್ಲೂ ಕೂಡ ಅಭಿನಯಿಸುತ್ತಿದ್ದಾರೆ ಆದರೆ ಇವರು ಮಾತ್ರ ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಇದ್ದ ಅಸ್ತಿ ಪಾಸ್ತಿಯನ್ನೆಲ್ಲ ಮಾಡಿಕೊಂಡಿದ್ದಾರೆ ಇದಕ್ಕೆ ಮುಖ್ಯ ಕಾರಣ ಇವರಲ್ಲಿ ಪ್ರತಿಭೆಯಿದ್ದರು ಕೂಡ ಸೂಕ್ತವಾದ ವೇದಿಕೆ ಮತ್ತು ಅವಕಾಶ ದೊರೆಯಲಿಲ್ಲ.

ಹಾಗಾಗಿಯೇ ಕುಟುಂಬ ನಿರ್ವಹಣೆಗಾಗಿ ತಮ್ಮ ಪೂರ್ವಜರ ಆಸ್ತಿ ಹಾಗೂ ಇವರು ಚಿತ್ರರಂಗದಿಂದ ಗಳಿಸಿದಂತಹ ಎಲ್ಲಾ ಆಸ್ತಿಯನ್ನು ಮಾರಿಕೊಂಡು ಕೊನೆಗೆ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಸಿನಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿಯಲ್ಲಿ ಲಕ್ಷ್ಮಣ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇದೇ ಸಮಯದಲ್ಲಿ ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಈ ದಂಪತಿಗಳಿಗೆ ಆಹ್ವಾನವನ್ನು ನೀಡಲಾಗುತ್ತದೆ. ಈ ಒಂದು ಆಹ್ವಾನವನ್ನು ಸ್ವೀಕರಿಸಿ ವೇದಿಕೆಯ ಮೇಲೆ ಅದ್ಭುತವಾದ ಪರ್ಫಾರ್ಮೆನ್ಸ್ ಅನ್ನು ಅಭಿಜಿತ್ ದಂಪತಿಗಳು ನೀಡಿದ್ದರು.

ಕಳೆದ ಎರಡು ವಾರಗಳ ಹಿಂದೆಯಷ್ಟೇ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ ಮೇಡಂ ಹಾಗೂ ಅರ್ಜುನ್ ಜನ್ಯ ಇನ್ನೂ ಹಲವಾರು ಸೆಲೆಬ್ರೇಟಿಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅಭಿಜಿತ್ ಮತ್ತು ರೋಹಿಣಿ ದಂಪತಿ ಮಾಡಿದಂತಹ ಡಾನ್ಸ್ ಎಲ್ಲರ ಗಮನವನ್ನು ಸೆಳೆದಿತ್ತು. ಈ ಡ್ಯಾನ್ಸ್ ನೋಡಿದಂತಹ ಶಿವಣ್ಣ ಅವರು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ ಇಲ್ಲಿಯವರೆಗೂ ಕಂಡಿತಂತಹ ಸೋಲು ಇಂದಿಗೆ ಮುಕ್ತಾಯವಾಗಲಿದೆ. ಇನ್ನು ಮುಂದೆ ನಿಮಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ದೊರೆಯಲಿದೆ ನನ್ನ ಎಲ್ಲಾ ಸಿನಿಮಾದಲ್ಲಿಯೂ ಕೂಡ ನಿಮಗಾಗಿ ಒಂದು ವಿಶೇಷ ಪಾತ್ರವನ್ನು ಕಲ್ಪಿಸಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ.

ಶಿವಣ್ಣ ಅವರ ಈ ಮಾತುಗಳನ್ನು ಕೇಳಿ ವೇದಿಕೆ ಮೇಲೆ ಅಭಿಜಿತ್ ಅವರು ಭಾವುಕರಾಗಿದ್ದರು ಇದೆಲ್ಲ ಒಂದು ಕಡೆಯಾದರೆ ಇದೀಗ ಜೋಡಿ ನಂಬರ್ ಒಂದು ಕಾರ್ಯಕ್ರಮವನ್ನು ವಿಜೇತರಾಗಿದ್ದಾರೆ. ಈ ದಂಪತಿಗಳಿಗೆ 5 ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಟ್ರೋಫಿ ದೊರೆತಿದೆ. ಈ ಸಂದರ್ಭದಲ್ಲಿ ಅಭಿಜಿತ್ ಮತ್ತು ರೋಹಿಣಿ ಮಾತನಾಡಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಮನಸು ವಿಚಲಿತವಾಗುತ್ತದೆ. ಹೌದು ಅದೇನೆಂದರೆ ರೋಹಿಣಿ ಅವರು ನಮಗೆ ಇಲ್ಲಿ ಸಿಕ್ಕ ಹಣಕ್ಕಿಂತ ಜಾಸ್ತಿ ನಮಗೆ ವಿಜಯ ಸಿಕ್ಕಿ ಬಹಳ ಸಮಯ ಆಗಿತ್ತು. ಇದಾದ ಮೇಲೆ ನನ್ನ ಪತಿ ವಿಜಯಪತಾಕೆ ಹಾರಿಸಬೇಕು” ಎಂದು ರೋಹಿಣಿ ಅವರು ಹೇಳಿದ್ದಾರೆ. ನಮಗೆ ಈ ಟ್ರೋಫಿ, ಈ ಬಹುಮಾನ ಎಲ್ಲವೂ ನಮಗೆ ಆಕ್ಸಿಜನ್ ಎಂದು ಭಾವಿಸುವೆ. ಎಲ್ಲರಿಗೂ ಧನ್ಯವಾದಗಳು” ಎಂದು ಅಭಿಜಿತ್ ಹೇಳಿದ್ದಾರೆ.

ಸಂತು-ಮಾನಸ, ಕಿರಿಕ್ ಕೀರ್ತಿ-ಅರ್ಪಿತಾ, ನೇಹಾ ಗೌಡ-ಪ್ರಣವ್, ಮಿತ್ರ-ಗೀತಾ, ಗೋವಿಂದೇ ಗೌಡ-ದಿವ್ಯಾ, ನಿನಾದ್-ರಮ್ಯಾ, ಪಂಕಜಾ ಶಿವಣ್ಣ-ಭವಾನಿ ಸಿಂಗ್, ಕೃಷ್ಣೇ ಗೌಡ ದಂಪತಿ, ಕಂಬದ ರಂಗಯ್ಯ ದಂಪತಿ ಈ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಮೊದಲನೇ ರನ್ನರ್ ಅಪ್ ಆಗಿ ಕಿರ್ತೀ ಹಾಗೂ ಅರ್ಪಿತ ಹೊರಹೊಮ್ಮಿದ್ದಾರೆ ಈ ದಂಪತಿಗಳಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ ಎರಡನೇ ರನ್ನರ್ ಅಪ್ ಆಗಿ ಸಂತು ಹಾಗೂ ಮಾನಸಾ ಅವರು ಹೊರ ಹೊಮ್ಮಿದರೆ ಈ ಜೋಡಿಗೆ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ದೊರೆತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ