ಅಕ್ಟೋಬರ್ 29, 2021 ನೇ ಇಸ್ವಿಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ ಏಕೆಂದರೆ ಅಪ್ಪು ಅವರನ್ನು ನಾವು ಇಂದು ಶಾರೀರಿಕವಾಗಿ ಕಳೆದುಕೊಂಡ ದಿನ. ಈ ದಿನವನ್ನು ನಿಜಕ್ಕೂ ಇಡೀ ಕರುನಾಡಿಗೆ ಕರಾಳ ದಿನ ಅಂತಾನೆ ಹೇಳಬಹುದು ಅಪ್ಪು ಅವರು ಶಾರೀಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದರು ಕೂಡ ಪ್ರತಿನಿತ್ಯವೂ ಪ್ರತಿಕ್ಷಣವೂ ಒಂದಲ್ಲ ಒಂದು ವಿಚಾರದಲ್ಲಿ ನಾವು ಅವರನ್ನು ನೆನಪು ಮಾಡಿಕೊಳ್ಳುತ್ತೇವೆ.
ಇನ್ನು ದೊಡ್ಮನೆ ಕುಟುಂಬದಲ್ಲಿ ಇರುವ ಪ್ರತಿಯೊಬ್ಬರೂ ಕೂಡ ಅಪ್ಪು ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಇಂದು ಅಪ್ಪು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಹಾಗಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ದ್ವಿತೀಯ ಪುತ್ರಿ ವದ್ದಿತಾ ರಾಜ್ ಕುಮಾರ್, ಶಿವಣ್ಣ, ಗೀತಕ್ಕ, ರಾಘಣ್ಣ, ಮಂಗಳಮ್ಮ, ಯುವರಾಜ್, ವಿನಯ್ ರಾಜ್ ಸೇರಿದಂತೆ ಇಡೀ ರಾಜಕುಮಾರ್ ಕುಟುಂಬವೇ ಬೆಂಗಳೂರಿನ ಶ್ರೀಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಅವರಿಗೆ ಇಷ್ಟ ಆದ ಎಲ್ಲ ನೈವೇದ್ಯವನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಇನ್ನು ಅಶ್ವಿನಿ ಅವರು ಅಪ್ಪು ಅವರಿಗೆ ಪೂಜೆ ಮಾಡುವ ವೇಳೆಯಲ್ಲಿ ಭಾವುಕರಾಗಿ ಕಣ್ಣೀರನ್ನು ಹಾಕಿದ್ದಾರೆ ಈ ದೃಶ್ಯವನ್ನು ನೋಡುವುದಕ್ಕೆ ನಿಜಕ್ಕೂ ಬಹಳ ಸಂಕಟವಾಗುತ್ತದೆ. ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರವನ್ನು ಕೇಳಿದ ಮೇಲೆ ಜನಸಾಮಾನ್ಯರಿಗೆ ಇಷ್ಟು ದುಃಖವಾಗುತ್ತಿದೆ ಇನ್ನು 21 ವರ್ಷ ದಾಂಪತ್ಯ ಜೀವನ ನಡೆಸಿದಂತಹ ಅಶ್ವಿನಿ ಅವರಿಗೆ ಹೇಗಾಗಬೇಡ ಎಂಬುದನ್ನು ನೀವೇ ಊಹೆ ಮಾಡಿ.
ಇವೆಲ್ಲ ಒಂದು ಕಡೆಯಾದರೆ ಇದೀಗ ಅವರು ತಮ್ಮ ಪತಿಗಾಗಿ ಮನದಾಳದ ಭಾವುಕ ಪತ್ರ ಒಂದನ್ನು ಬರೆದಿದ್ದರೆ ಆ ಪತ್ರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಾಲುಗಳನ್ನು ಓದುತ್ತಿದ್ದ ಹಾಗೆ ಅಭಿಮಾನಿಗಳು ಕೂಡ ತಮ್ಮ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ ಅಷ್ಟಕ್ಕೂ ಅಶ್ವಿನಿ ಅವರು ಅಪ್ಪು ಅವರ ಬಗ್ಗೆ ಬರೆದದ್ದಾದರೂ ಏನು ಎಂಬುದನ್ನು ನೋಡುವುದಾದರೆ.
“ನೆನಪಿನ ಸಾಗರದಲ್ಲಿ. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೇ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು ಎಂದು ಬರೆದಿದ್ದಾರೆ ಅಶ್ವಿನಿ”
ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ತುಂಬಾನೇ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದಾರೆ ಅಂತ ಹೇಳಬಹುದು ಇದೆಲ್ಲ ಒಂದು ಕಡೆಯಾದರೆ ನವೆಂಬರ್ ಒಂದನೇ ತಾರೀಕು ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಅಂತ ಸಿಎಂ ಬಸವರಾಜು ಬೊಮ್ಮಾಯಿ ಅವರು ನಿರ್ಧರಿಸಿದ್ದಾರೆ. ವಿಶೇಷ ಏನೆಂದರೆ ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡುವುದಕ್ಕಾಗಿ ಇಬ್ಬರು ಗಣ್ಯ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನ ಮಾಡಿದ್ದಾರೆ.
ಅದರಲ್ಲಿ ತೆಲುಗಿನ ಜೂನಿಯರ್ ಎನ್.ಟಿ.ಆರ್ ಒಬ್ಬರು ಮತ್ತೊಬ್ಬರು ರಜಿನಿಕಾಂತ್ ಈ ಇಬ್ಬರು ನಟರಿಂದ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಿದ್ದಾರೆ. ಅಪ್ಪು ಅಭಿಮಾನಿಗಳು ಅಪ್ಪು ಅವರಿಗೆ ನೀಡುವ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ಕಾಗಿ ಕಾದು ಕುಳಿತಿದ್ದಾರೆ ಅದೇನೆ ಆಗಲಿ ಈ ದಿನವನ್ನು ನಿಜಕ್ಕೂ ಇಡೀ ಕರುನಾಡ ಜನತೆ ಮರೆಯಲು ಸಾಧ್ಯವಿಲ್ಲ ಅಂತಾನೇ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ