ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಆದರೆ ಹೆಚ್ಚಿನ ಜನಕ್ಕೆ ಈ ಒಂದು ಸಮಸ್ಯೆ ಯಾವ ಒಂದು ಕಾರಣದಿಂದ ಬರುತ್ತದೆ ಎನ್ನುವುದನ್ನು ತಿಳಿಯುವುದಿಲ್ಲ. ಬದಲಿಗೆ ಸಣ್ಣಪುಟ್ಟ ತೊಂದರೆಗಳಿಗೂ ಸಹ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಆ ರೀತಿ ಮಾಡುವುದರ ಬದಲು ಆ ಒಂದು ಸಮಸ್ಯೆ ಬರುವುದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಂಡರೆ ನೀವೇ ಈ ಸಮಸ್ಯೆಗೆ ಪರಿಹಾರ ವನ್ನು ಮನೆಯಲ್ಲಿಯೇ ಕಂಡುಕೊಳ್ಳಬಹುದು.
ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಯಾವುದರಿಂದ ಬರುತ್ತದೆ ಎನ್ನುವುದನ್ನು ತಿಳಿದು ಅದನ್ನು ದೂರ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದನ್ನು ನೀವು ತಡೆಗಟ್ಟಬಹುದಾಗಿದೆ. ಹೌದು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಯಾವ ತ್ತಿಗೂ ಎಂತಹದ್ದೇ ಪರಿಸ್ಥಿತಿಯಲ್ಲೂ ಸಹ ಬರುವುದಿಲ್ಲ.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಕ್ಕೆ ನಮ್ಮ ಆಹಾರ ಪದ್ಧತಿಯಲ್ಲಿ ಏನಾದರೂ ಕಾರಣ ಇದೆಯಾ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಹೌದು ನಾವು ಪ್ರತಿನಿತ್ಯ ಯಾವ ರೀತಿಯಾಗಿ ಆಹಾರ ಕ್ರಮವನ್ನು ಅನುಸರಿಸುತ್ತಿರುತ್ತೇವೆಯೋ ಅದೇ ರೀತಿಯಾಗಿ ನಮ್ಮ ಆರೋಗ್ಯ ನಿಂತಿರುತ್ತದೆ.
ಒಂದು ಮಾತಿನಲ್ಲಿ ಹೇಳಬೇಕು ಎಂದರೆ ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರದಲ್ಲಿ ಇರುತ್ತದೆ ಹೌದು. ಆಯುರ್ವೇ ದದ ಪ್ರಕಾರ ನಾವು ಯಾವ ರೀತಿಯಾಗಿ ನಮ್ಮ ಜೀವನ ಶೈಲಿಯನ್ನು ನಮ್ಮ ಆಹಾರ ಶೈಲಿಯನ್ನು ಅನುಸರಿಸುತ್ತೇವೆಯೋ ಅದೇ ರೀತಿಯಾಗಿ ನಮ್ಮ ಆರೋಗ್ಯ ಇರುತ್ತದೆ ಹಾಗೇನಾದರೂ ನಾವು ಅವೆರಡರಲ್ಲಿ ಉದಾಸೀನ ಮಾಡಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿ ಸಬೇಕಾಗುತ್ತದೆ.
ಆದ್ದರಿಂದ ಅವೆರಡನ್ನು ಬಹಳ ಜೋಪಾನವಾಗಿ ನೋಡಿಕೊಂಡರೆ. ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಅದರಲ್ಲೂ ಮೊದಲೇ ಹೇಳಿದಂತೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದೇ ಇಲ್ಲ ಎಂದೇ ಹೇಳಬಹುದು. ಹಾಗಾದರೆ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.
• ಅಧಿಕವಾಗಿ ಸಿಕ್ಕಸಿಕ್ಕ ಎಲ್ಲಾ ಆಹಾರವನ್ನು ಸೇವನೆ ಮಾಡುವುದು.
• ಸಣ್ಣಪುಟ್ಟ ವಿಚಾರಕ್ಕೂ ಹೆಚ್ಚು ಟೆನ್ಶನ್ ಮಾಡಿಕೊಳ್ಳುವುದು.
• ಹಾಗೂ ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಉಪಯೋಗಿಸುವುದು
ಈ ಮೂರು ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ಹೌದು
* ಮೊದಲೇ ಹೇಳಿದಂತೆ ಅಧಿಕವಾಗಿ ಎಲ್ಲಾ ಆಹಾರವನ್ನು ಸೇವನೆ ಮಾಡುವವರಲ್ಲಿ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಾವು ಎಲ್ಲಾ ಆಹಾರವನ್ನು ಒಂದೇ ರೀತಿಯಾಗಿ ಸೇವನೆ ಮಾಡುವುದು ತಪ್ಪು.
ಏಕೆ ಎಂದರೆ ಒಂದು ಆಹಾರದಲ್ಲಿ ಕೆಲವೊಂದಷ್ಟು ಪೌಷ್ಟಿಕಾಂಶಗಳು ಇದ್ದರೆ ಕೆಲವೊಂದರಲ್ಲಿ ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ಅಂಶಗಳು ಇರುತ್ತದೆ. ಆದ್ದರಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯ.
* ಹಾಗೂ ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚು ಟೆನ್ಶನ್ ಮಾಡಿಕೊಳ್ಳು ವವರಲ್ಲಿ ಈ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ನಮ್ಮ ಮೆದುಳಿನಿಂದ ನಮ್ಮ ಕರುಳಿಗೆ ಒಂದು ನರ ಇರುತ್ತದೆ ಅದು ನಮ್ಮ ಹೊಟ್ಟೆಯ ಭಾಗಕ್ಕೆ ಹೆಚ್ಚಿನ ಒತ್ತಡವನ್ನು ಕೊಡುತ್ತದೆ ಇದರಿಂದ ನಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
* ಹಾಗೆಯೇ ಮಸಾಲೆ ಭರಿತ ಆಹಾರವನ್ನು ಅಧಿಕವಾಗಿ ಸೇವನೆ ಮಾಡು ವುದರಿಂದ ನಮ್ಮ ಹೊಟ್ಟೆಯ ಭಾಗದಲ್ಲಿ ಹುಣ್ಣಾಗುತ್ತದೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಹೆಚ್ಚಾಗಿ ಯಾರೂ ಕೂಡ ಮಸಾಲೆ ಭರಿತ ಆಹಾರವನ್ನು ಅಂದರೆ ಹೆಚ್ಚು ಕಾರ ಹುಳಿ ಉಪ್ಪು ಎಲ್ಲವನ್ನು ಸಹ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.
• ಹಾಗೂ ಯಾರು ಹೆಚ್ಚಾಗಿ ಧೂಮಪಾನ ಮಧ್ಯಪಾನವನ್ನು ಮಾಡುತ್ತಿ ರುತ್ತಾರೋ ಅಂತವರಲ್ಲಿಯೂ ಸಹ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಲಕ್ಷಣ ಏನು ಎಂದರೆ ಹೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಎದೆಯ ಭಾಗದಲ್ಲಿ ಉರಿ ಬರುವುದು ಹೀಗೆ ಇನ್ನೂ ಹಲವಾರು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಆದರೆ ಈ ಸಮಸ್ಯೆಯನ್ನು ತಡೆಗಟ್ಟಬೇಕು ಎಂದರೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.
• ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು.
• ಯಾವುದೇ ರೀತಿಯ ಬೇಕರಿ ತಿನಿಸುಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳನ್ನು ಸೇವನೆ ಮಾಡದೆ ಇರುವುದು.