ಈ ದಿನ ನಾವು ಹೇಳುತ್ತಿರುವಂತಹ ಈ ಗಿಡಗಳನ್ನು ನೀವು ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ನೆಡುವುದರಿಂದ ವಾಸ್ತುದೋಷ ನಿವಾರಣೆ ಯಾಗುತ್ತದೆ ಜೊತೆಗೆ ಯಾವ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಡುವುದ ರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ ಹೀಗೆ ವಾಸ್ತು ಗಿಡಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಅಲೋವೆರಾ :- ಗಾಯವನ್ನು ಗುಣಪಡಿಸುವ ಶಕ್ತಿ ಇರುವ ಅಲೋವೆರಾ ನಿಮ್ಮ ಚರ್ಮವನ್ನು ಪೋಷಿಸುತ್ತದೆ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಕಡಿಮೆ ಮಾಡುವುದು. ಅಲೋವೆರಾ ಸಸ್ಯವು ನಿಮ್ಮ ಸಂಗಾತಿಯ ಆರೋಗ್ಯವನ್ನು ಕಾಪಾಡುತ್ತದೆ. ವಾಸ್ತು ಶಾಸ್ತ್ರ ತಜ್ಞರ ಪ್ರಕಾರ ಅಲೋವೆರಾ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಮನೆಯಲ್ಲಿ ಧನಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ಭಾಗದಲ್ಲಿ ಇಡಬಹುದು.
* ಬಾಳೆ ಮರ :- ಬಾಳೆ ಮರಗಳು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ವಾಗಿದೆ. ಅದರ ಎಲೆಗಳನ್ನು ಗುರುವಾರ ವಿಷ್ಣುವಿಗೆ ಅರ್ಪಿಸಬಹುದು. ವಿವಿಧ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ವಾಸ್ತು ವಿಷಯಕ್ಕೆ ಬಂದಾಗ ಬಾಳೆ ಮರವನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ನೆಡಲು ಸೂಚಿಸಲಾಗಿದೆ. ಈ ರೀತಿ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.
* ಬೇವಿನ ಮರ :- ವಾಸ್ತು ಶಾಸ್ತ್ರದ ಪ್ರಕಾರ ಬೇವಿನ ಮರವು ಬಹಳ ಶ್ರೇಷ್ಠ ಎಂದು ನಂಬಲಾಗಿದೆ. ಇದನ್ನು ಭಾರತೀಯ ನೀಲಕ ಎಂದೂ ಕರೆಯಲಾಗುತ್ತದೆ. ಬೇವಿನ ಮರವು ಔಷಧೀಯ ಗುಣವನ್ನು ಹೊಂದಿದೆ ಬೇವಿನ ಮರದ ಸಕಾರಾತ್ಮಕ ಪರಿಣಾಮಗಳನ್ನು ಆನಂದಿಸಲು ಅದನ್ನು ನೀವು ಮಲಗುವ ಕೋಣೆಯ ಪಕ್ಕದಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ನಡೆಬಹುದು. ಬೇವಿನ ಮರವು ತಾಜಾ ಆಮ್ಲಜನಕವನ್ನು ನೀಡುತ್ತದೆ.
* ಚಂಡು ಹೂ :- ಇಂಗ್ಲಿಷ್‌ನಲ್ಲಿ ಮಾರಿಗೋಲ್ಡ್ ಎಂದು ಕರೆಯಲಾಗುವ ಚಂಡು ಹೂವಿನ ಸಸ್ಯವನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ನೆಡಬೇಕು. ಚೆಂಡು ಹೂವಿನ ಸಸ್ಯವನ್ನು ಸೂರ್ಯನ ಬೆಳಕಿನಲ್ಲಿ ಇಟ್ಟಾಗ ಅದು ಚೈತನ್ಯವನ್ನು ಹೊರ ಸೂಸುತ್ತದೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
* ಮಾವಿನ ಮರ :- ಮಾವಿನ ಮರವನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಟ್ಟರೆ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮಾವು ಮರದಲ್ಲೇ ಹಣ್ಣಾಗುವವರೆಗೆ ಬಿಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಮನೆ ಕೈ ತೋಟದ ಪಶ್ಚಿಮ, ದಕ್ಷಿಣ ಮತ್ತು ನೈಋತ್ಯ ಮೂಲೆಯಲ್ಲಿ ಮಾವಿನ ಮರವನ್ನು ನೆಡುವುದು ಉತ್ತಮ.
* ನಿಂಬೆ:- ಮನೆಯಲ್ಲಿ ನಿಂಬೆ ಗಿಡವನ್ನು ಬೆಳೆಸುವುದು ಒಳ್ಳೆಯದಾ ಎಂದು ಜನ ಕೇಳುತ್ತಾರೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಿಂಬೆ ಮರವನ್ನು ಬೆಳೆಸುವುದು ಒಳ್ಳೆಯದು. ಆದರೆ ಕೆಲವು ಪರಿಸ್ತಿತಿಗಳಲ್ಲಿ ಮಾತ್ರ ಅದು ಧನಾತ್ಮಕ ಫಲಿತಾಂಶ ನೀಡುತ್ತದೆ. ಮನೆಯಲ್ಲಿ ನಿಂಬೆ ಗಿಡ /ಮರವನ್ನು ಬೆಳೆಸುವಾಗ, ಅದನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನಡೆಬಾರದು. ಕೈ ತೋಟದ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿಂಬೆ ಗಿಡವನ್ನು ನೆಡಬೇಕು.
* ತುಳಸಿ :- ತುಳಸಿ ವಿಷ್ಣುವಿನ ಸಮಾನ. ವಿಷ್ಣು ಪೂಜೆಗೆ ತುಳಸಿಯನ್ನು ಬಳಸಲಾಗುತ್ತದೆ. ತುಳಸಿ ನಿಸ್ಸಂದೇಹವಾಗಿ ಮನೆಯ ಅತ್ಯುತ್ತಮ ವಾಸ್ತು ಸಸ್ಯವಾಗಿದೆ. ವೈದ್ಯಕೀಯ ಗುಣಲಕ್ಷಣಗಳಲ್ಲದೆ ತುಳಸಿ ಮಾನಸಿಕ ಯೋಗಕ್ಷೇಮವನ್ನು ಗುಣಪಡಿಸುತ್ತದೆ. ರಕ್ತದಲ್ಲಿನ ಗ್ಲೋಕೋಸ್ ಮತ್ತು ರಕ್ತದೊತ್ತಡದ ಮಟ್ಟವನ್ನು ಸರಿಪಡಿಸುವ ಮೂಲಕ ಚಯಾಪಚಯ ಕ್ರಿಯೆಯನ್ನು ಸರಿಪಡಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.