ಸಾಮಾನ್ಯವಾಗಿ ನಾವೆಲ್ಲರೂ ಕೂಡ ಗಮನಿಸಿರಬಹುದು ಕೆಲವೊಂದ ಷ್ಟು ಜನರಿಗೆ ಕೈಕಾಲುಗಳಲ್ಲಿ ಹೊಟ್ಟೆಯ ಭಾಗದಲ್ಲಿ ಕತ್ತಿನ ಭಾಗದಲ್ಲಿ ಹೀಗೆ ಕೆಲವೊಂದು ಭಾಗದಲ್ಲಿ ಒಂದು ರೀತಿಯ ಗಂಟುಗಳು ಕಾಣಿಸಿ ಕೊಳ್ಳುತ್ತದೆ ಹೌದು ಇದನ್ನು ನಾವು ಕೊಬ್ಬಿನ ಗಂಟು ಎಂದು ಕರೆಯುತ್ತೇವೆ. ಹಾಗಾದರೆ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ಯಾರಿಗೂ ಕೂಡ ತಿಳಿದಿರುವುದಿಲ್ಲ.
ಬದಲಿಗೆ ಇದೇನೋ ದೊಡ್ಡ ಸಮಸ್ಯೆ ಇರಬಹುದು ಎಂದು ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಈ ರೀತಿಯ ನಿರ್ಧಾರಗಳನ್ನು ಮಾಡುವುದಕ್ಕೂ ಮೊದಲು ಈ ಸಮಸ್ಯೆ ಯಾವ ಕಾರಣಕ್ಕಾಗಿ ಬಂದಿದೆ ಇದಕ್ಕೆ ಪರಿಹಾರ ನಾವೇ ನಮ್ಮ ಮನೆಯಲ್ಲಿ ಹೇಗೆ ಮಾಡಿಕೊಳ್ಳುವುದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.
ಆನಂತರ ಈ ಸಮಸ್ಯೆ ಇದಲ್ಲ ಎಂದು ತಿಳಿದ ನಂತರ ನೀವು ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಹಾಗಾದರೆ ಈ ದಿನ ಕೈಕಾಲುಗಳಲ್ಲಿ ಹೊಟ್ಟೆಯ ಭಾಗದಲ್ಲಿ ಕತ್ತಿನ ಭಾಗದಲ್ಲಿ ಕಾಣಿಸಿ ಕೊಳ್ಳುವಂತಹ ಕೊಬ್ಬಿನ ಗಂಟು ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಹಾಗೂ ಇದಕ್ಕೆ ಪರಿಹಾರ ಮಾರ್ಗ ಏನು ಹಾಗೇನಾದರೂ ನಾವು ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಲಿಲ್ಲ ಎಂದರೆ ಏನಾದರೂ ಬೇರೆ ಸಮಸ್ಯೆಗಳು ಅದರಲ್ಲೂ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ನಮ್ಮ ದೇಹದಲ್ಲಿ ಹಲವಾರು ರೀತಿಯ ಅಂಗಾಗಗಳು ಇದ್ದು ಅವೆಲ್ಲವೂ ಕೂಡ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ದೇಹ ಸ್ಥಿತಿ ಆರೋಗ್ಯವಾಗಿ ಇರುತ್ತದೆ. ಹಾಗೇನಾದರೂ ಪ್ರತಿಯೊಂದು ಅಂಗದಲ್ಲಿಯೂ ಕೂಡ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಾ ಬಂದರೆ ಅದು ನಮ್ಮ ದೇಹದ ಮೇಲೆ ನೇರ ವಾಗಿ ಪರಿಣಾಮ ಬೀರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳನ್ನು ಕೂಡ ಬಹಳ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾ ದರೂ ಒಂದರಲ್ಲಿ ಸಮಸ್ಯೆ ಉಂಟಾದರೆ ಅದರಿಂದ ನಮ್ಮ ಇಡೀ ದೇಹದ ಮೇಲೆ ಒಂದಲ್ಲ ಒಂದು ಕೆಟ್ಟ ಪರಿಣಾಮ ಬೀರುತ್ತದೆ.
ಹೌದು ನಮ್ಮ ದೇಹದಲ್ಲಿ ಪ್ರತಿ ನಿತ್ಯ ಹಲವಾರು ಸೆಲ್ಸ್ ಗಳು ಉತ್ಪತ್ತಿಯಾಗುತ್ತದೆ ಹಾಗೂ ಹಲವಾರು ಸೆಲ್ಸ್ ಗಳು ನಾಶವಾಗುತ್ತದೆ ಹೀಗೆ ನಾಶ ವಾದಂತಹ ಸೆಲ್ಸ್ ಗಳು ನಮ್ಮ ದೇಹದಿಂದ ಸಂಪೂರ್ಣವಾಗಿ ಹೊರ ಹೋಗಬೇಕು ಹಾಗೇನಾದರೂ ಅದು ನಮ್ಮ ದೇಹದಿಂದ ಹೊರ ಹೋಗದೆ ಇದ್ದಂತಹ ಸಮಯದಲ್ಲಿ ಈ ರೀತಿಯ ಕೊಬ್ಬಿನ ಗಂಟುಗಳಾಗಿ ಅದು ಮಾರ್ಪಾಡಾ ಗುತ್ತದೆ.
ಹಾಗಾದರೆ ಈ ಒಂದು ಕೊಬ್ಬಿನ ಗಂಟನ್ನು ನಾವು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಕೆಲವು ಆಹಾರ ಪದ್ಧತಿಯನ್ನು ನಾವು ಸೇವನೆ ಮಾಡಬೇಕು ಎಂದು ನೋಡುವುದಾದರೆ. ತಿಕ್ತ ರಸ ಪ್ರಧಾನ ಅಂದರೆ ಕಹಿ ಇರುವಂತಹ ತರಕಾರಿಗಳನ್ನು ನಮ್ಮ ಆಹಾರ ಕ್ರಮದಲ್ಲಿ ಯಥೇಚ್ಛ ವಾಗಿ ಉಪಯೋಗಿಸಿದ್ದೇ ಆದಲ್ಲಿ ನಮ್ಮ ದೇಹದಲ್ಲಿ ಇರುವಂತಹ ಕೊಬ್ಬಿನ ಗಂಟುಗಳು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ.
* ಉದಾಹರಣೆಗೆ ಹಾಗಲಕಾಯಿಯನ್ನು ಆಹಾರ ಕ್ರಮದಲ್ಲಿ ಸೇವನೆ ಮಾಡುವುದು.
* ಪ್ರತಿನಿತ್ಯ ಬೇವಿನ ಎಲೆಯ ರಸವನ್ನು ಕುಡಿಯುತ್ತಾ ಬರುವುದು ಹೀಗೆ ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ಕೊಬ್ಬಿನ ಗಂಟು ಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಕೊಬ್ಬಿನ ಗಂಟುಗಳು ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಆಯುರ್ವೇದ ತಿಳಿಸುತ್ತದೆ.