ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಈ ವಿಚಾರ ನಿಮಗೆ ತಿಳಿದೇ ಇದೆ. ಸಾಮಾನ್ಯವಾಗಿ ಜನಸಾಮಾನ್ಯರು ಸ್ಟಾರ್ ನಟರನ್ನು ಇಷ್ಟ ಪಡುವುದು ವಿಶೇಷವೇನು ಅಲ್ಲ ಹೊಸದೇನಲ್ಲ. ಆದರೆ ಮತ್ತೊಬ್ಬ ನಟರ ಮಕ್ಕಳು ಇಷ್ಟ ಪಡುತ್ತಿದ್ದಾರೆ ಅಂದರೆ ಅದಕ್ಕೆ ಬೇರೆ ಯಾವುದೇ ಕಾರಣವಿರುತ್ತದೆ. ಅಂದರೆ ಆ ವ್ಯಕ್ತಿ ಎಲ್ಲ ರೀತಿಯಲ್ಲೂ ಕೂಡ ಹೊಂದಾಣಿಕೆಯಾಗುವಂತಹ ವ್ಯಕ್ತಿತ್ವವನ್ನು ಅಥವಾ ಗುಣವನ್ನು ಒಳಗೊಂಡಿದ್ದಾರೆ ಅಂತ. ಆ ಸಾಲಿನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಂದೆ ನಿಲ್ಲುತ್ತಾರೆ ಅಂತ ಹೇಳಿದರೆ ತಪ್ಪಾಗಲಾರದು.
ಇನ್ನು ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಅವರ ನಡುವೆ ಇದ್ದಂತಹ ಒಡನಾಟವನ್ನು ಹೆಚ್ಚಾಗಿ ವಿವರಿಸಬೇಕಾದ ಅಗತ್ಯವಿಲ್ಲ ಏಕೆಂದರೆ, ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬುಲೆಟ್ ಪ್ರಕಾಶ್ ಅವರು ಕೂಡ ಕಾಲಿಡುತ್ತಾರೆ. ದರ್ಶನ್ ಅವರ ಭಾಗಶಹ ಎಲ್ಲಾ ಸಿನಿಮಾದಲ್ಲಿಯೂ ಕೂಡ ಬುಲೆಟ್ ಪ್ರಕಾಶ್ ಅವರು ಅಭಿನಯಿಸಿದ್ದಾರೆ ಸಿನಿಮಾವನ್ನು ಹೊರತು ಪಡಿಸಿ ವೈಯಕ್ತಿಕ ಜೀವನದಲ್ಲೂ ಕೂಡ ಇವರಿಬ್ಬರೂ ಬಹಳ ಆತ್ಮೀಯರು ಸ್ನೇಹಿತರು.
ದರ್ಶನ್ ಅವರು ಒಂದು ಬಾರಿ ತಮ್ಮ ಮನಸ್ಸಿನಲ್ಲಿ ಯಾರಿಗಾದರೂ ಸ್ನೇಹಿತನ ಪಟ್ಟವನ್ನು ಕೊಟ್ಟರೆ ಅದನ್ನು ಎಂದಿಗೂ ಕೂಡ ಹಿಂಪಡೆಯುವುದಿಲ್ಲ ಅಷ್ಟೇ ಅಲ್ಲದೆ ಆತನಿಗೆ ಏನೇ ಕಷ್ಟ ಬಂದರೂ ಕೂಡ ಸಹಾಯವನ್ನು ಮಾಡುತ್ತಾರೆ. ಇನ್ನು ದರ್ಶನ್ ತಮ್ಮ ಸ್ನೇಹಿತ ಕುಟುಂಬವನ್ನು ಕೂಡ ತನ್ನ ಕುಟುಂಬದಂತೆ ನೋಡಿಕೊಳ್ಳುತ್ತಾನೆ ಇದಕ್ಕೆ ಉದಾಹರಣೆ ಅಂದರೆ ದರ್ಶನ್ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಅವರನ್ನು ನೋಡಿಕೊಳ್ಳುವಂತಹ ರೀತಿ ಅಂತಾನೆ ಹೇಳಬಹುದು. ಹೌದು ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ದರ್ಶನ್ ಜೊತೆ ಯಾವ ರೀತಿ ಒಡನಾಟವನ್ನು ಬೆಳೆಸಿಕೊಂಡಿದ್ದರು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಅವರು ತಮ್ಮ ಮನೆಗೆ ಸ್ನೇಹಿತರೆಲ್ಲರನ್ನೂ ಕೂಡ ಕರಿಸುತ್ತಿದ್ದರಂತೆ ಈ ಸಮಯದಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅವರು ಕೂಡ ಭೇಟಿ ನೀಡಿದ್ದರಂತೆ. ಮನೆಗೆ ಬಂದಾಗ ದರ್ಶನವರು ಅವರೆಲ್ಲರನ್ನು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಿದ್ದಾರಂತೆ ಮತ್ತು ನೋಡಿಕೊಳ್ಳುತ್ತಿದ್ದರಂತೆ. ಅವರಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ಮಾಡುತ್ತಿದ್ದರಂತೆ ಆದರೆ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಯಾವುದೇ ವಿಚಾರವನ್ನು ಮಾತನಾಡುತ್ತಿರಲಿಲ್ಲವಂತೆ. ಬದಲಿಗೆ ವನ್ಯಜೀವಿಗಳ ಬಗ್ಗೆ ಟ್ರಿಪ್ ಹೋಗುವುದರ ಬಗ್ಗೆ ಎಂಜಾಯ್ ಮಾಡುವುದರ ಬಗ್ಗೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಮಾತನಾಡುತ್ತಿದ್ದರಂತೆ.
ಈ ವಿಚಾರವನ್ನು ಬುಲೆಟ್ ಪ್ರಕಾಶ್ ಪುತ್ರರಕ್ಷಕ ಅವರು ತಿಳಿಸಿದ್ದಾರೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಬುಲೆಟ್ ಪ್ರಕಾಶ್ ಬಿಟ್ಟರೆ ರಕ್ಷಕ್ ಗೆ ಹೊಡೆದ ವ್ಯಕ್ತಿ ಅಂದರೆ ಅದು ಡಿ ಬಾಸ್ ದರ್ಶನ್ ಅಂತನೇ ಹೇಳಬಹುದು. ಹೌದು ಒಂದು ಬಾರಿ ರಕ್ಷಕ್ ದರ್ಶನ್ ಅವರಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರಂತೆ ಇದರಿಂದ ಕೋಪಗೊಂಡಂತಹ ದರ್ಶನ್ ಅವರು ರಕ್ಷಕ್ ಅನ್ನು ಮನೆಗೆ ಕರಿಸು ಬೆಲ್ಟ್ ನಿಂದ ಹೊಡೆದಿದ್ದರಂತೆ.
ನಿನ್ನ ವಯಸ್ಸೆಷ್ಟು ಈ ವಯಸ್ಸಿನಲ್ಲಿ ನಿನಗೆ ಇದೆಲ್ಲ ಬೇಕಾ ಮೊದಲು ವಿದ್ಯಾಭ್ಯಾಸದ ಕಡೆ ಗಮನ ನೀಡು ಇದೆಲ್ಲ ಇದ್ದೇ ಇರುತ್ತದೆ ಎಂದು ಬುದ್ದಿವಾದವನ್ನು ಹೇಳಿದರಂತೆ. ಈ ವಿಚಾರವನ್ನು ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ ಇದರಿಂದಲೇ ತಿಳಿಯುತ್ತದೆ ದರ್ಶನ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟು ಒತ್ತನ್ನು ನೋಡುತ್ತಿದ್ದರು ಅಂತ. ರಕ್ಷಕ್ ಮಾತನಾಡಿದಂತಹ ವಿಡಿಯೋ ಈಇ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.