ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ತೆರೆ ಮೇಲೆ ಬಂದರೆ ಸಾಕು ಪ್ರೇಕ್ಷಕರೆಲ್ಲ ಬಿದ್ದು ಬಿದ್ದು ನಗುವಷ್ಟು ಹಾಸ್ಯವನ್ನು ನಟಿಸಿ ಎಲ್ಲರನ್ನು ಮನೋರಂಜಿಸುತ್ತಿದ್ದವರು ಇವರು. ಅವರ ಹಾಸ್ಯ ಅಭಿನಯದ ಜೊತೆಗೆ ಅವರ ದಢೂತಿ ದೇಹ ಕಪ್ಪು ಬಣ್ಣವನ್ನು ಕೂಡ ನೋಡಿ ನಗುತ್ತಿದ್ದರು ಜನರು. ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಕನ್ನಡ ಚಲನಚಿತ್ರರಂಗದಲ್ಲಿ ಹಾಸ್ಯನಟನಾಗಿ ಪರಿಚಿತವಾಗಿರುವ ಬುಲೆಟ್ ಪ್ರಕಾಶ್ ಅವರು ಸುಮಾರು 300 ಸಿನಿಮಾಗಳಿಗಿಂತಲೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಕನ್ನಡದಲ್ಲಿ ಮನೋರಂಜನೆ ನೀಡಿದ್ದಾರೆ. ಇಂತಹ ಅದ್ಭುತವಾದ ಕಲಾವಿದ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದೇ ತುಂಬಾ ದುಃಖದ ಸಂಗತಿಯಾಗಿದೆ. ಅವರು ಇಲ್ಲದೆ ಇದ್ದರೂ ಅವರ ಕನಸುಗಳನ್ನು ನನಸು ಮಾಡಲು ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಪ್ರಯತ್ನ ಮಾಡುತ್ತಿದ್ದಾರೆ.
ಬುಲೆಟ್ ಪ್ರಕಾಶ್ ಅವರಿಗೆ ತಮ್ಮ ಪುತ್ರನನ್ನು ಕನ್ನಡ ಚಲನಚಿತ್ರರಂಗದ ದೊಡ್ಡ ಸ್ಟಾರ್ ಆಗಿ ಬೆಳೆಸಬೇಕು ಎನ್ನುವ ಆಸೆ ಇತ್ತು. ಇದಕ್ಕಾಗಿ ಮಗನಿಗೆ ಅಗತ್ಯ ಇರುವ ಎಲ್ಲಾ ತರಬೇತಿಗಳನ್ನು ಕೂಡ ಕೊಡಿಸುತ್ತಿದ್ದರು ಬುಲೆಟ್ ಪ್ರಕಾಶ್ ಅವರು. ಮೊದಲ ಬಾರಿ ರಕ್ಷಕ್ ಅವರು ಕ್ಯಾಮರಾ ಎದುರಿಸಿದ್ದು ಸೃಜನ್ ಅವರು ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಅತಿಥಿಯಾಗಿ ಆಗಮಿಸಿದ್ದ ಬುಲೆಟ್ ಪ್ರಕಾಶ್ ಅವರು ತಮ್ಮ ಮಗನ ಬಗ್ಗೆ ತಮಗಿರುವ ಕನಸನ್ನು ಅಲ್ಲಿ ವೇದಿಕೆ ಮೇಲೆ ಹೇಳಿಕೊಂಡಿದ್ದರು. ಇದಾದ ಬಳಿಕ ಮಗನನ್ನು ಕರೆಸಿ ವೇದಿಕೆ ಮೇಲೆ ಡ್ಯಾನ್ಸ್ ಮತ್ತು ಸ್ಟಂಟ್ಸ್ ಕೂಡ ಮಾಡಿಸಿದ್ದರು. ಆಗಲೇ ಜನತೆಗೆ ಗೊತ್ತಾಯಿತು ಬುಲೆಟ್ ಪ್ರಕಾಶ್ ಅವರ ಮಗನಿಗೆ ಎಷ್ಟೊಂದು ಪ್ರತಿಭೆ ಇದೆ ಎಂದು.
ಮಗ ರಕ್ಷಕ್ ಕೂಡ ಅಪ್ಪನ ಕನಸಿಗೆ ನೀರೆಯುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ನಂದ ಕಿಶೋರ್ ಅವರ ನಿರ್ಮಾಣದ ಅಧ್ಯಕ್ಷ ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಶಿಷ್ಯನಾಗಿ ರಕ್ಷಕ್ ಬುಲೆಟ್ ಅವರು ಅಭಿನಯಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಅವರ ಅದೃಷ್ಟ ಏನು ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ತಯಾರಾಗಿದ್ದಾರೆ ಬುಲೆಟ್ ರಕ್ಷಕ್ ಅವರು. ಇದರ ಮಧ್ಯೆ ಮಾಧ್ಯಮ ಸಂದರ್ಶನ ಒಂದರಲ್ಲಿ ಭಾಗವಹಿಸಿದ ಅವರು ಅವರ ಜೀವನದ ಹಾಗೂ ಅವರ ತಂದೆಯ ಜೀವನದ ಕುರಿತಾದ ಹಲವಾರು ವಿಷಯಗಳನ್ನು ವರದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ಮಾತಿನ ಮಧ್ಯೆ ಅವರು ರವಿಚಂದ್ರನ್ ಅವರನ್ನು ನೆನೆಸಿಕೊಂಡಿದ್ದಾರೆ ಹಾಗೂ ರವಿಚಂದ್ರನ್ ಅವರನ್ನೇ ಅವರ ಮನೆಯ ದೇವರು ಎಂದು ಕೂಡ ಹೇಳಿದ್ದಾರೆ. ಅವರು ಹೀಗೆ ಮಾತನಾಡಲು ಅದಕ್ಕೆ ಕಾರಣ ಕೂಡ ಇದೆಯಂತೆ. ಅದನ್ನು ಪ್ರಶ್ನೆ ಮಾಡಿದ ಸಂದರ್ಶನಗಾರರಿಗೆ ರಕ್ಷಕ್ ಬುಲೆಟ್ ಈ ರೀತಿ ಅದಕ್ಕೆ ವಿವರಣೆ ನೀಡಿದರು.
ನಮ್ಮ ತಂದೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಾಗ ರವಿಚಂದ್ರನ್ ಸರ್ ಅವರು ನಮ್ಮ ತಂದೆಗೆ ಹೆಚ್ಚಿನ ಅವಕಾಶ ಕೊಟ್ಟರು ಹಾಗೂ ಸಿನಿಮಾ ರಂಗದಲ್ಲಿ ಅವರನ್ನು ಪ್ರಕಾಶ್ ಎನ್ನುವ ಹೆಸರಿನಿಂದ ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು ಹಾಗಾಗಿ ಬುಲೆಟ್ ಎನ್ನುವ ಹೆಸರನ್ನು ನಮ್ಮ ತಂದೆಯವರ ಹೆಸರಿನ ಜೊತೆ ಜೋಡಿಸಿದ್ದು ರವಿಚಂದ್ರನ್ ಸರ್. ತಂದೆ ಯಾವಾಗಲೂ ಬುಲೆಟ್ ಗಾಡಿಯಲ್ಲಿ ಓಡಾಡುತ್ತಿದ್ದರು ಹಾಗೂ ಆ ಗಾಡಿಯಲ್ಲೇ ಸೆಟ್ ಗೆ ಹೋಗುತ್ತಿದ್ದರು ಅದನ್ನು ಗಮನಿಸಿದ ರವಿಚಂದ್ರನ್ ಸರ್ ನಮ್ಮ ತಂದೆ ಹೆಸರನ್ನು ಬುಲೆಟ್ ಪ್ರಕಾಶ್ ಎಂದು ಸೇರಿಸಿದರು. ಈ ಹೆಸರಿನಲ್ಲಿಯೇ ಇದುವರೆಗೆ ನಾವು ಗುರುತಿಸಿಕೊಂಡಿದ್ದೇವೆ. ನಮ್ಮ ತಂದೆ ಇದುವರೆಗೆ ಮಾಡಿದ ಎಲ್ಲಾ ಸಿನಿಮಾಗಳಲ್ಲೂ ಕೂಡ ಈ ಹೆಸರನ್ನು ಇಟ್ಟುಕೊಂಡಿದ್ದರು ನಾನು ಕೂಡ ಈಗ ಅದೇ ಹೆಸರಿನಿಂದ ಮುಂದುವರಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಕೆಲವು ವಿಷಯಗಳ ಮೇಲೆ ಬೇಸರ ಕೂಡ ಪಟ್ಟು ಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಹಾಗೂ ಅದರ ಆಚೆಗೆ ಹಲವಾರು ಜನ ನಮ್ಮನ್ನು ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ನಮ್ಮ ತಂದೆ ಅವರು ನನಗೆ ಬೇಕಾದಷ್ಟು ಮಾಡಿ ಹೋಗಿದ್ದಾರೆ. ನನಗೆ ಯಾರ ಸಹಾಯದ ಅವಶ್ಯಕತೆಯೂ ಇಲ್ಲ ಆದರೂ ಕೂಡ ಜನರು ಇಲ್ಲ ಸಲ್ಲದ್ದನ್ನು ಮಾತನಾಡಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲರಿಗೂ ಕೂಡ ಅವರದೇ ಆದ ವೈಯಕ್ತಿಕ ಬದುಕಿದೆ. ಸುಮ್ಮನೆ ಅವರ ಹುಚ್ಚಾಟಕ್ಕೆ ಇಷ್ಟ ಬಂದ ಹಾಗೆ ಬರೆದು ಪೋಸ್ಟ್ ಮಾಡಿ ಇನ್ನೊಬ್ಬರ ಮನೆಯ ಸಂತೋಷವನ್ನು ಹಾಳು ಮಾಡಬಾರದು ಎಂದು ತಮ್ಮ ಮನಸ್ಸಿನಲ್ಲಿರುವ ಬೇಸರವನ್ನು ಹೇಳಿಕೊಂಡಿದ್ದಾರೆ. ನಾನು ಕೂಡ ಬೇರೆ ಹೀರೋಗಳ ಮಕ್ಕಳಂತೆ ಸಿನಿಮಾ ರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಬರುತ್ತಿದ್ದೇನೆ. ಈಗಾಗಲೇ ಈ ರಂಗದಲ್ಲಿರುವ ಹಲವಾರು ಕಲಾವಿದರು ತಮ್ಮ ಮಕ್ಕಳನ್ನು ಇದರಲ್ಲಿ ನೆಲೆಕಾಣುವಂತೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಹಾಗೆ ಕೂಡ ನನ್ನ ತಂದೆಯು ನನ್ನ ಬಗ್ಗೆ ಕನಸು ಇಟ್ಟುಕೊಂಡಿದ್ದರು.
ನನಗೂ ಅದೇ ಆಸೆ ಇರುವುದರಿಂದ ಆ ಕಡೆಗೆ ನಾನು ಗಮನ ಕೊಡುತ್ತಿದ್ದೇನೆ. ನನಗೆ ನಂಬಿಕೆ ಇದೆ ನನ್ನ ತಂದೆ ಆಸೆಯಂತೆ ನಾನು ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರು ಮಾಡೇ ಮಾಡುತ್ತೇನೆ ಎಂದು ಹಠ ಕೂಡ ತೊಟ್ಟಿದ್ದಾರಂತೆ ರಕ್ಷಕ್ ಬುಲೆಟ್ ಅವರು. ಈಗಾಗಲೇ ಕನ್ನಡ ಚಲನಚಿತ್ರ ರಂಗದಲ್ಲಿ ಸ್ಟಾರ್ ಕಿಡ್ ಗಳು ನಟ-ನಟಿಯರಾಗಿ, ನಿರ್ದೇಶಕರಾಗಿ ನಿರ್ಮಾಪಕರಾಗಿ ಒಂದಲ್ಲ ಒಂದು ರೀತಿಯಲ್ಲಿ ಈ ಜೀವನ ನಡೆಸುತ್ತಿದ್ದಾರೆ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಅವರಿಗೂ ಸಹ ಈ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುವಂತಾಗಲಿ ಅವರು ಕೂಡ ಅವರ ತಂದೆ ಹೆಸರನ್ನು ಮೀರಿಸುವಷ್ಟು ಸಾಧನೆ ಮಾಡಲಿ. ಅದಕ್ಕೆ ಅವರಿಗೆ ಬೇಕಾದ ಅನುಕೂಲ ವಾತಾವರಣ ಹಾಗೂ ಅವಕಾಶಗಳು ಅವರ ಅರಸಿ ಬರಲಿ ಎಂದು ಬುಲೆಟ್ ಪ್ರಕಾಶ್ ಅವರ ಹಾಸಕ್ಕೆ ಅಭಿಮಾನಿಗಳಾಗಿರುವ ನಾವೆಲ್ಲರೂ ಹಾರೈಸೋಣ.