ಪ್ರತಿ ತಿಂಗಳ ಒಂದು ನಿಶ್ಚಿತ ಆದಾಯವನ್ನು ಪಡೆಯಬೇಕು ಎಂದು ಬಯಸುವವರು ಹಣಕಾಸಿಕ ಸಂಸ್ಥೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಗಳಲ್ಲಿ (FD) ಹಣ ಹೂಡಿಕೆ ಮಾಡುತ್ತಾರೆ. ಈಗ ಬ್ಯಾಂಕ್ ಗಳು, ಸಹಕಾರಿ ವಲಯ, ಅಂಚೆ ಕಚೇರಿಗಳು ಇಂತಹ ಅವಕಾಶಗಳನ್ನು ನೀಡುತ್ತಿವೆ. ಅದರಲ್ಲೂ ಪ್ರತಿಯೊಂದೂ ವಯಸ್ಸಿಗೂ ಕೂಡ ಅವರ ವಯಸ್ಸಿನ ಆಧಾರವಾಗಿ ವಿಶೇಷ ಯೋಜನೆಗಳು ಜಾರಿಗೆ ಬಂದಿದ್ದು ಹಿರಿಯ ನಾಗರಿಕರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಇನ್ನು ಹೆಚ್ಚಿನ ಲಾಭವನ್ನು ಪಡೆಯುವಂತಹ ಅನುಕೂಲತೆಗಳು ಕೂಡ ಇವೆ.
ಇವೆಲ್ಲದರ ಜೊತೆ ಈಗ LIC (LIife Insurance Corporation of India) ಕೂಡ ಈಗ ಇಂತಹ ಹೂಡಿಕೆಗಳತ್ತ ಗಮನ ಹರಿಸಿದ್ದು, ತನ್ನ ಗ್ರಾಹಕರಿಗಾಗಿ ಮಾಸಿಕ ಪಿಂಚಣಿ (Monthly Pension) ನೀಡುವಂತಹ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಪೈಕಿ LIC ಜೀವನ್ ಅಕ್ಷಯ ಯೋಜನೆ (LIC Jeevan Akshaya Scheme) ಕೂಡ ಒಂದು. ಇದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಎಲ್ಲಾ ವಾಹನ ಸಾವರರಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿ ಈ ರೂಲ್ಸ್ ಫಾಲೋ ಮಾಡಿದ್ರೆ ದಂಡ ಫಿಕ್ಸ್
LIC ಜೀವನ್ ಅಕ್ಷಯ ಪಾಲಿಸಿ ವಿಶೇಷತೆಗಳು:-
● ಈ ಯೋಜನೆಯಲ್ಲಿ 30 ವರ್ಷಕ್ಕಿಂತ ವಯಸ್ಸಿನ ಮೇಲ್ಪಟ್ಟವರು ಮಾತ್ರ ಹೂಡಿಕೆ ಮಾಡಬಹುದು.
● ಇದೊಂದು ವರ್ಷಾಸನ ಯೋಜನೆಯಾಗಿದೆ
● ಈ ಯೋಜನೆಯಡಿ ಒಂದು ಬಾರಿ ಹೂಡಿಕೆ ಮಾಡಿದರೆ ನೀವು ಪಿಂಚಣಿ ರೂಪದಲ್ಲಿ ಖಚಿತವಾದ ಮಾಸಿಕ ಆದಾಯವನ್ನು ಜೀವನ ಪರ್ಯಂತ ಪಡೆಯುತ್ತೀರಿ.
● ನೀವು ಬಾರಿ ಒಂದು ಹಣವನ್ನು LIC ಜೀವನ್ ಅಕ್ಷಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಂತರ ನೀವು ಆಯ್ದುಕೊಂಡ ಆಯ್ಕೆಯನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ. ಆದ್ದರಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವಾಗಲೇ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಿ ಆಯ್ಕೆ ಮಾಡಬೇಕು.
● LIC ಜೀವನ್ ಅಕ್ಷಯ ಯೋಜನೆಯಡಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಹೂಡಿಕೆಯ ಮೇಲಿನ ಬಡ್ಡಿ ರೂಪದ ಆದಾಯವನ್ನು ಪಡೆಯುತ್ತೀರಿ.
ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ.!
● LIC ಜೀವನ್ ಅಕ್ಷಯ ಯೋಜನೆ ಕನಿಷ್ಠ ಹೂಡಿಕೆ ಮಿತಿ 1 ಲಕ್ಷ ರೂ. ಗರಿಷ್ಠ ಮಿತಿ ಇರುವುದಿಲ್ಲ.
● ನೀವು ಹೆಚ್ಚಿಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಪಿಂಚಣಿಯನ್ನು ಪಡೆಯಬಹುದು.
● ಉದಾಹರಣೆಯೊಂದಿಗೆ ಹೇಳುವುದಾದರೆ ನಿಮಗೆ ಈಗ ವಯಸ್ಸು 30 ವರ್ಷ ಎಂದಿಟ್ಟುಕೊಳ್ಳೋಣ, ಲೈಫ್ ಟೈಮ್ ಆಯ್ಕೆಯನ್ನು ಆಯ್ಕೆ ಮಾಡಿ ನೀವು ರೂ. 5 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ವಾರ್ಷಿಕ ಪಿಂಚಣಿ ರೂ. 28,000 ಬರಲಿದೆ. ತಿಂಗಳ ಪಿಂಚಣಿ ಆಯ್ಕೆ ಮಾಡಿದರೆ ರೂ. 2,300 ಪಡೆಯಬಹುದು. 6 ತಿಂಗಳಿಗಾದರೆ ರೂ. 14,000 ಮೂರು ತಿಂಗಳಿಗೆ ರೂ. 7,000 ಸಿಗಲಿದೆ.
● ನೀವೇನಾದರೂ ರೂ.16,000 ಮಾಸಿಕ ಪಿಂಚಣಿ ಪಡೆಯಬೇಕು ಎಂದು ಬಯಸಿದರೆ ರೂ. 35 ಲಕ್ಷ ಹೂಡಿಕೆ ಮಾಡಬೇಕು.
● ಲೈಫ್ ಟೈಮ್ ಆಯ್ಕೆ ಮಾಡಿದರೆ ನೀವು ಇರುವವರೆಗೂ ಕೂಡ ನಿಮಗೆ ಈ ಪಿಂಚಣಿ ಬರುತ್ತದೆ. ನೀವು ಮೃತಪಟ್ಟ ನಂತರ ನೀವು ನಾಮಿನಿಯಾಗಿ ಸೂಚಿಸಿದ ವ್ಯಕ್ತಿಗೆ ನಿಮ್ಮ ಹೂಡಿಕೆಯ ಹಣ ಹೋಗುತ್ತದೆ.
● LIC ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಟ್ಟು ಮಾಹಿತಿ ತಿಳಿದುಕೊಳ್ಳಬಹುದು ಅಥವಾ LIC ಅಧಿಕೃತ ವೆಬ್ಸೈಟ್ ನಲ್ಲೂ ಕೂಡ LIC ಯ ಜೀವನ್ ಅಕ್ಷಯ ಪಿಂಚಣಿ ಯೋಜನೆ ಮಾಹಿತಿಯನ್ನು ಪಡೆಯಬಹುದು.