ಅಡುಗೆ ಮನೆಯಲ್ಲಿ ನಾವು ಯಾವುದೇ ಆಹಾರ ಪದಾರ್ಥವನ್ನು ತಯಾರು ಮಾಡಿದರು ಕೂಡ ಅದಕ್ಕೆ ಹಾಕುವಂತಹ ಕೊತ್ತಂಬರಿ ಸೊಪ್ಪು ಆ ಒಂದು ಅಡುಗೆಯ ರುಚಿಯನ್ನೇ ಬದಲಾಯಿಸುತ್ತದೆ ಅಷ್ಟರ ಮಟ್ಟಿಗೆ ಅದು ತನ್ನಲ್ಲಿ ಒಂದು ಒಳ್ಳೆಯ ಅದ್ಭುತವಾದಂತಹ ರುಚಿಯನ್ನು ಹೊಂದಿರುತ್ತದೆ.
ಆದ್ದರಿಂದ ಇದನ್ನು ನಾವು ಪ್ರತಿಯೊಂದು ಅಡಿಗೆಗಳಿಗೂ ಕೂಡ ಉಪಯೋಗಿಸುವುದು ಬಹಳ ಮುಖ್ಯವಾಗಿರುತ್ತದೆ. ನಾವು ಎಷ್ಟೇ ಅದ್ಭುತವಾಗಿ ಅಡುಗೆ ಮಾಡಿದರು ಕೂಡ ಅದರ ಅಲಂಕಾರಕ್ಕೂ ಕೂಡ ಈ ಒಂದು ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಜೊತೆಗೆ ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ಈ ಸುದ್ದಿ ಓದಿ:-ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೊತ್ತಂಬರಿ ಸೊಪ್ಪನ್ನು ನಾವು ಒಂದು ವರ್ಷದವರೆಗೆ ಫ್ರಿಡ್ಜ್ ನಲ್ಲಿ ಹೇಗೆ ಸ್ಟೋರ್ ಮಾಡಿ ಇಡುವುದು ಹಾಗೂ ಹೀಗೆ ಇಡುವುದರಿಂದ ಅದರಲ್ಲಿ ಇರುವಂತಹ ಯಾವುದೇ ಘಮವೂ ಕೂಡ ಹೋಗುವುದಿಲ್ಲ ಅಷ್ಟರ ಮಟ್ಟಿಗೆ ಈ ಒಂದು ವಿಧಾನ ಬಹಳ ಉಪಯುಕ್ತಕರವಾಗಿರುತ್ತದೆ.
ಹಾಗಾದರೆ ಅದನ್ನು ಹೇಗೆ ಅನುಸರಿಸುವುದು ಆ ವಿಧಾನ ಯಾವುದು ಎಂದು ಈ ಕೆಳಗೆ ತಿಳಿಯೋಣ ಮೊದಲೇ ಹೇಳಿದಂತೆ ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಕೊತ್ತಂಬರಿ ಸೊಪ್ಪು ಇಲ್ಲದೆ ಯಾವುದೇ ಅಡುಗೆಯೂ ಕೂಡ ಪೂರ್ತಿ ಯಾಗುವುದಿಲ್ಲ. ಇಂತಹ ಕೊತ್ತಂಬರಿ ಸೊಪ್ಪು ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ ನಮಗೆ ಸಮಯಕ್ಕೆ ಸಿಗುವುದಿಲ್ಲ.
ಈ ಸುದ್ದಿ ಓದಿ:-ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!
ಇಂತಹ ಸಂದರ್ಭದಲ್ಲಿ ನಾವು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ತಂದಂತಹ ದಿನಗಳಲ್ಲಿ ಈ ಒಂದು ವಿಧಾನವನ್ನು ಅನುಸರಿಸಿ ಅದನ್ನು ಶೇಖರಣೆ ಮಾಡಿಟ್ಟುಕೊಳ್ಳುವುದರಿಂದ ಒಂದು ವರ್ಷದವರೆಗೆ ಅದನ್ನು ಉಪಯೋಗಿಸಬಹುದು. ಹಾಗೂ ಅಚ್ಚರಿಯ ವಿಷಯ ಏನು ಎಂದರೆ ಅದರಲ್ಲಿ ಇರುವಂತಹ ಘಮವು ಕೂಡ ಹಾಗೆ ಇರುತ್ತದೆ. ಹಾಗಾದರೆ ಆ ಒಂದು ವಿಧಾನವನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.
* ಮೊದಲು ಚೆನ್ನಾಗಿರುವಂತಹ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಬೇಕು ತೊಳೆದು ಕೊಂಡ ನಂತರ ಅದನ್ನು ಒಂದು ಕಾಟನ್ ಬಟ್ಟೆಯ ಮೇಲೆ ಹಾಕಿ ಅದರಲ್ಲಿರುವ ನೀರಿನ ಅಂಶ ಹೋಗುವ ತನಕ ಅದನ್ನು ಹಾಗೆ ಇಟ್ಟುಬಿಡಿ. ಆನಂತರ ಅದನ್ನು ಅಗಲವಾಗಿರುವಂತಹ ಒಂದು ತಟ್ಟೆಗೆ ಹಾಕಿ ನಮ್ಮ ರೂಮ್ ಟೆಂಪರೇಚರ್ ನಲ್ಲಿಯೇ ಅದನ್ನು ಸಂಪೂರ್ಣವಾಗಿ ಒಣಗಿಸಿ ಕೊಳ್ಳಬೇಕು.
ಈ ಸುದ್ದಿ ಓದಿ:-ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!
ಅಂದರೆ ನಾವು ಅದನ್ನು ಕೈಯಲ್ಲಿ ಮುಟ್ಟಿದರೆ ಅದು ಸಣ್ಣದಾಗಿ ಪುಡಿ ಆಗಬೇಕು ಅಷ್ಟರಮಟ್ಟಿಗೆ ನಾವು ಅದನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು. ಈ ರೀತಿ ಒಣಗಿಸಿಕೊಂಡಂತಹ ಕೊತ್ತಂಬರಿ ಸೊಪ್ಪನ್ನು ಕೈಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಂಡು ಏರ್ಟೈಟ್ ಬಾಕ್ಸ್ ನಲ್ಲಿ ಶೇಖರಣೆ ಮಾಡಿಟ್ಟು ಕೊಂಡು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುವವರು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳ ಬಹುದು.
ಫ್ರಿಜ್ ಇಲ್ಲದೆ ಇರುವವರು ಅದನ್ನು ಆಚೆಯೆ ಇಟ್ಟುಕೊಂಡು ಒಂದು ವರ್ಷದವರೆಗೆ ಉಪಯೋಗಿಸಬಹುದು. ಯಾವುದೇ ರೀತಿಯ ಹುಳಗಳಾಗಲಿ ಅದರ ವಾಸನೆ ಹೋಗುವುದಾಗಲಿ ಯಾವುದು ಕೂಡ ಆಗುವುದಿಲ್ಲ ಶುದ್ಧವಾಗಿಯೇ ಇರುತ್ತದೆ. ಅದರಲ್ಲಿ ಇರುವಂತಹ ಘಮವು ಕೂಡ ಹಾಗೆ ಇರುತ್ತದೆ.
ಈ ಸುದ್ದಿ ಓದಿ:-ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!
ನೀವು ರಸಾಂ ಮಾಡುವಂತಹ ಸಮಯ ದಲ್ಲಿ ಸಾಂಬಾರ್ ಮಾಡುವಂತಹ ಸಮಯದಲ್ಲಿ ಇದನ್ನು ಮೇಲೆ ಹಾಕಿದರೆ ಅದರಲ್ಲಿ ಇರುವಂತಹ ಸಂಪೂರ್ಣವಾದಂತಹ ಘಮ ನಿಮಗೆ ಗೊತ್ತಾಗುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸಿ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಸಿಕ್ಕಂತಹ ಸಂದರ್ಭದಲ್ಲಿ ನೀವು ಈ ವಿಧಾನವನ್ನು ಅನುಸರಿಸಿ ಶೇಖರಣೆ ಮಾಡಿಟ್ಟುಕೊಂಡು ಸಮಯಕ್ಕೆ ಸರಿಯಾಗಿ ಉಪಯೋಗಿಸಬಹುದು.