ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!
ಅಂದು ದಿಗ್ಗಜ ನಟರೊಂದಿಗೆ ನಟಿಸುವುದೇ ಒಂದು ದೊಡ್ಡ ಸೌಭಾಗ್ಯದಾಯಕ ಅದೃಷ್ಟವಾಗಿತ್ತು ಅಂದಿನ ನಟಿಮಣಿಯರಿಗೆ. ಚಂದನವನದಲ್ಲಿ ಅಂದಿನ ನಟಿಮಣಿಯರ ಪೈಕಿ ಕನಸಿನ ರಾಣಿ ಮಾಲಾಶ್ರೀ ಕೂಡ ಒಬ್ಬರಾಗಿದ್ದು ಟಾಪ್ ನಟಿಯರಲ್ಲಿ ಹಾಗೂ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ಲೇಡಿ ಸಿಂಗಂ ರೀತಿ ಫೈಟ್ ಸೀನ್ ಗಳಲ್ಲಿಯೂ ಮಿಂಚುತ್ತಾ ಸ್ಯಾಂಡಲ್ವುಡ್ ನಲ್ಲಿ ಎಲ್ಲಾ ತರಹದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ…