Sunday, May 28, 2023
HomeEntertainmentಸಿಹಿ ಸುದ್ದಿ ಹಂಚಿಕೊಂಡ ನಟಿ ಚೈತ್ರಾ ರೆಡ್ಡಿ ಹಾಗೂ ಕ್ಯಾಮರಾ ಮ್ಯಾನ್ ಹರಿ,

ಸಿಹಿ ಸುದ್ದಿ ಹಂಚಿಕೊಂಡ ನಟಿ ಚೈತ್ರಾ ರೆಡ್ಡಿ ಹಾಗೂ ಕ್ಯಾಮರಾ ಮ್ಯಾನ್ ಹರಿ,

ಸಿನಿಮಾ ರಂಗ ಎಂಬುವುದು ಒಂದು ಬಣ್ಣದ ಲೋಕ ಇದ್ದ ಹಾಗೆ ಇಲ್ಲಿ ಯಾವಾಗ ಏನು ಬೇಕಾದರೂ ಕೂಡ ಆಗಬಹುದು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿ ದೊಡ್ಡ ನಾಯಕನಾಗಿ ಮೆರೆಯಬಹುದು ಹಾಗೆ ಸ್ಟಾರ್ ನಟನಾಗಿದ್ದಂತಹ ವ್ಯಕ್ತಿ ಚಿಕ್ಕ ಪುಟ್ಟ ಪಾತ್ರಕ್ಕೂ ಕೂಡ ಅಲೆದಾಡುವಂತಹ ಪರಿಸ್ಥಿತಿ ಎದುರಾಗಬಹುದು‌. ಹಾಗಾಗಿ ಈ ಬಣ್ಣದ ಜಗತ್ತು ಹೀಗೆ ಇರುತ್ತದೆ ಎಂದು ಖಚಿತವಾಗಿ ಹೇಳುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ನಿಮ್ಮೆಲ್ಲರಿಗೂ ತಿಳಿದಿರುವಂತೆ 2002 ಇಸ್ವಿಯಲ್ಲಿ ಫ್ರೆಂಡ್ಸ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಮಾಸ್ಟರ್ ಆನಂದ್, ಹರಿ, ವಾಸು, ಸೇರಿರುತ್ತೆ ಇನ್ನು ನಾಲ್ವರು ಈ ಸಿನಿಮಾದಲ್ಲಿ ಭಾಗದಲ್ಲಿ ನಾಯಕ ನಟರಾಗಿ ಅಭಿನಯಿಸಿದರು.

ಈ ಸಿನಿಮಾದ ನಾಯಕ ನಟಿಯಾಗಿ ಅಮೃತ ಅವರು ಕಾಣಿಸಿಕೊಂಡಿದ್ದರು ಈ ಸಿನಿಮಾ ಆ ಕಾಲದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಅಂದರೆ ಪಡೆ ಹುಡುಗರ ಹಾಟ್ ಫೇವರೆಟ್ ಸಿನಿಮಾ ಆಗಿತ್ತು. ಅದರಲ್ಲಿಯೂ ಕೂಡ ತಿರುಪತಿ ತಿರುಮಲ ವೆಂಕಟೇಶ ಎಂಬ ಹಾಡನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಅಷ್ಟು ಫೇಮಸ್ ಆಗಿತ್ತು. ಈ ಒಂದು ಸಿನಿಮಾದಲ್ಲಿ ದೈತ್ಯ ಗಾತ್ರದಲ್ಲಿ ಕಾಣಿಸಿಕೊಂಡಿದ್ದಂತಹ ವ್ಯಕ್ತಿಯ ಹೆಸರು ಹರಿ ಇವರು ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತದನಂತರ ಅವಕಾಶಗಳು ಸಿಗದೇ ಇದ್ದಾಗ ಕ್ಯಾಮೆರಾ ಮ್ಯಾನ್ ಆದಂತಹ ಕೃಷ್ಣಕುಮಾರ್ ಅವರ ಬಳಿ ಅಸಿಸ್ಟೆಂಟ್ ಕ್ಯಾಮರಾ ಮ್ಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಜೀವನ ನಡೆಸುವುದಕ್ಕಾಗಿ ಒಂದು ಕಾಲದಲ್ಲಿ ಹೀರೋ ಆಗಿದ್ದಂತಹ ಇವರು ಟೆಕ್ನಿಷಿಯನ್ ಆಗಿ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಮುಂದೊಂದು ದಿನ ಇವರ ಅದೃಷ್ಟ ಬದಲಾಗುತ್ತದೆ ಎಂಬುದು ಸ್ವತಃ ಅವರಿಗೂ ಕೂಡ ತಿಳಿದಿರುವುದಿಲ್ಲ. ಹೌದು ಇದೀಗ ಹರಿ ಅವರ ಅದೃಷ್ಟದ ಬಾಗಿಲು ಎಂಬುದು ತೆರೆದಿದೆ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹರಿ ಅವರು ಇದೀಗ ಏಕಾಏಕಿ ನಾಯಕ ನಟರಾಗುತ್ತಿದ್ದಾರೆ. ಎಂ ಆರ್ ಪಿ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ.

ಮೊದಮೊದಲು ಈ ಸಿನಿಮಾದಲ್ಲಿ ಇವರಿಗೆ ನಟನೆ ಮಾಡಲು ಆಫರ್ ಸಿಕ್ಕಾಗ ಬಹಳಷ್ಟು ಯೋಚಿಸಿದ್ದರಂತೆ ಈ ಸಿನಿಮಾ ಮಾಡುವುದೋ ಬೇಡವೋ ಅಂತ ಏಕೆಂದರೆ ಇವರ ದೇಹ ಗಾತ್ರವನ್ನು ನೋಡಿದರೆ ಯಾರಿಂದಲೂ ಕೂಡ ಇವರನ್ನು ಹೀರೋ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ನಾನು ಈ ಸಿನಿಮಾದಲ್ಲಿ ನಟನೆ ಮಾಡಿದರೆ ಪ್ರೇಕ್ಷಕರು ಯಾವ ರೀತಿ ನನ್ನನ್ನು ಸ್ವೀಕಾರ ಮಾಡುತ್ತಾರೋ ಏನೋ ಎಂದು ಬಹಳ ಚಿಂತೆ ಮಾಡಿದ್ದರಂತೆ. ಆದರೂ ಕೂಡ ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ಇದೊಂದು ಪ್ರಯತ್ನವನ್ನು ಮಾಡೇ ಬಿಡೋಣ ಅಂತ ಈ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಚೈತ್ರ ರೆಡ್ಡಿ ಅವರು ಕಾಣಿಸಿಕೊಳ್ಳಲಿದ್ದಾರೆ ಚೈತ್ರ ರೆಡ್ಡಿ ಅವರು ಹೊಸಬರೆನಲ್ಲ ಹಲವಾರು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ. ಸುವರ್ಣ ಚಾನೆಲ್ ನಲ್ಲಿ ಮೂಡಿ ಬರುತ್ತಿದ್ದಂತಹ ಶ್ರಾವಣಿ ಮತ್ತು ನಾನು ಎಂಬ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಇದನ್ನು ಹೊರತು ಪಡಿಸಿದರೆ ತೆಲುಗು ಮತ್ತು ತಮಿಳು ಸೀರಿಯಲ್ ಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿಯೂ ಕೂಡ ಸಾಕಷ್ಟು ಚಿಕ್ಕ ಪುಟ್ಟ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಆದರೆ ಇದೇ ಮೊದಲ ಬಾರಿಗೆ ಹರಿಯವರ ಜೊತೆ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಎಂ.ಆರ್‌.ಪಿ ಸಿನಿಮಾ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಇನ್ನು ಕೆಲವೇ ದಿನದಲ್ಲಿ ಈ ಸಿನಿಮಾ ತೆರೆ ಮೇಲೆ ಕಾಣಲಿದೆ ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಮತ್ತು ಚೈತ್ರ ರೆಡ್ಡಿ ಅವರು ವಿವಾಹವಾಗುತ್ತಿರುವಂತಹ ಕೆಲವು ಸೀನ್ ಫೋಟೋಸ್ಗಳು ವೈರಲ್ ಆಗಿದೆ. ಈ ಜೋಡಿಯನ್ನು ನೋಡಿದಂತಹ ಕೆಲವು ನೆಟ್ಟಿದರು ಮಹಾಲಕ್ಷ್ಮಿ ಮತ್ತು ರವಿಂದರ್ ಜೋಡಿಯಂತೆ ಮತ್ತೊಂದು ಜೋಡಿ ಮದುವೆಯಾಗುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅಸಲಿ ವಿಚಾರವೇ ಬೇರೆ ಇವರಿಬ್ಬರೂ ನಿಜ ಜೀವನದಲ್ಲಿ ಮದುವೆಯಾಗುತ್ತಿಲ್ಲ ಬದಲಿಗೆ ಸಿನಿಮಾದ ಚಿತ್ರೀಕರಣಕ್ಕಾಗಿ ಮದುವೆಯಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.