Sunday, June 4, 2023
HomeEntertainmentಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ...

ಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ ಸರ್ಜಾ, ಭಾರಿ ಮೆಚ್ಚಿಗೆ ಪಡೆಯುತ್ತಿದೆ ಇವರ ನಡತೆ‌.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಪ್ರೀ ಈವೆಂಟ್ ಕಾರ್ಯಕ್ರಮವನ್ನು ಇದೆ ಅಕ್ಟೋಬರ್ 21ನೇ ತಾರೀಕು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ಏರ್ಪಡಿಸಲಾಗುತ್ತಿದೆ. ಈ ಒಂದು ಅಪ್ಪು ಪರ್ವ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ಇಡೀ ದಕ್ಷಿಣ ಭಾರತದ ಸಾಕಷ್ಟು ಸೆಲೆಬ್ರಿಟಿ ಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ. ಪ್ರತಿಯೊಬ್ಬರ ಮನೆಗೂ ಕೂಡ ಸ್ವತಃ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಡಾಕ್ಟರ್ ರಾಜಕುಮಾರ್ ಕುಟುಂಬದ ವ್ಯಕ್ತಿಗಳು ಎಲ್ಲರ ಮನೆ ಬಾಗಿಲು ಹೋಗಿ ಅಪ್ಪು ಪರ್ವದ ಇನ್ವಿಟೇಶನ್ ಅನ್ನು ಕೊಟ್ಟು ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ.

ಆದರೆ ವಿಶೇಷ ಏನೆಂದರೆ ನಟ ಧ್ರುವ ಸರ್ಜಾ ಅವರು ಮಾತ್ರ ಸ್ವತಃ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಬಂದು ಅಪ್ಪು ಪರ್ವ ಇನ್ವಿಟೇಶನ್ ಕಾರ್ಡ್ ಅನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ಕಾರ್ಯಕ್ರಮದ ಕೆಲವು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ನಿಜಕ್ಕೂ ಇದು ಬಾರಿ ಮೆಚ್ಚುಗೆಯ ವಿಚಾರವೇ. ಏಕೆಂದರೆ ಎಲ್ಲರ ಮನೆ ಬಾಗಿಲಿಗೂ ಹೋಗಿ ರಾಜಕುಮಾರ್ ಅವರು ಇನ್ವಿಟೇಶನ್ ಕಾರ್ಡ್ ಅನ್ನು ಕೊಟ್ಟಿದ್ದಾರೆ. ಆದರೆ ಧ್ರುವ ಸರ್ಜಾ ಅವರು ಮಾತ್ರ ತಾವೇ ಖುದ್ದಾಗಿ ಬಂದು ಇನ್ವಿಟೇಶನ್ ಕಾರ್ಡ್ ಅನ್ನು ಸ್ವೀಕರಿಸಿದ್ದಾರೆ ಇಂತಹದೊಂದು ಮನಸ್ಸು ಎಲ್ಲ ನಟರಿಗೂ ಕೂಡ ಬರುವುದಿಲ್ಲ. ಇದರಿಂದಲೇ ತಿಳಿಯುತ್ತದೆ ದ್ರವ ಸರ್ಜಾ ಅವರ ಮನಸ್ಸು ಎಂತಹದ್ದು ಹಾಗೂ ಅವರು ಅಪ್ಪು ಮೇಲೆ ಇಟ್ಟಿರುವ ಗೌರವ ಎಂತದ್ದು ಅಂತ.

ಅಪ್ಪು ಅವರನ್ನು ಕೊನೆಯ ಬಾರಿ ಕಣ್ತುಂಬಿ ಕೊಳ್ಳುವಂತಹ ಅವಕಾಶ ದೊರೆತಿರುವ ಏಕೈಕ ವೇದಿಕೆ ಅಂದರೆ ಅದು ಗಂಧದಗುಡಿ ಅಂತಾನೆ ಹೇಳಬಹುದು. ಹೌದು ಈ ಒಂದು ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ತಮಿಳಿನಾ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ಕಾರ್ತಿಕ್, ವಿಶಾಲ್ ಹಾಗೂ ತೆಲುಗಿನ ಚಿರಂಜೀವಿ ಸರ್ಜಾ, ಜೂನಿಯರ್ ಎನ್ಟಿಆರ್, ಪ್ರಭಾಸ್, ರಾಣಾ ದಗ್ಗುಬಾಟಿ ಮಲಯಾಳಂ ನ ಮುಮ್ಮಟಿ, ದುಲ್ಕರ್ ಸಲ್ಮಾನ್, ಬಾಲಕೃಷ್ಣಯ್ಯ ಹಾಗೂ ಹಿಂದಿಯ ಅಮಿತಾಬ್ ಬಚ್ಚನ್, ರಣವೀರ್ ಸಿಂಗ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಗಂಧದ ಗುಡಿ ಟೀಸರ್ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು ಈ ಒಂದು ಟೀಸರ್ ಬಹಳಷ್ಟು ಜನ ಮೆಚ್ಚಿಕೊಂಡಿದ್ದರು ಇದೀಗ ಪ್ರಿ ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೂ ಕೂಡ ಅನುವು ಮಾಡಿಕೊಡಲಾಗಿದೆ ಸುಮಾರು ಒಂದು ಲಕ್ಷಕ್ಕೂ ಅಭಿಮಾನಿಗಳು ಈ ಒಂದು ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಅವರ ಜೇಮ್ಸ್ ಸಿನಿಮಾಗಿಂತಲೂ ಹೆಚ್ಚಿನ ಆದ್ಯತೆಯನ್ನು ಈ ಒಂದು ಗಂಧದಗುಡಿ ಡಾಕ್ಯುಮೆಂಟರಿ ಚಿತ್ರಕ್ಕೆ ನೀಡಲಾಗುತ್ತಿದೆ.

ಅಪ್ಪು ಅವರನ್ನು ನಾವು ಕೊನೆಯ ಬಾರಿಗೆ ಬೆಳ್ಳಿ ತೆರೆಯ ಮೇಲೆ ನೋಡುವಂತಹ ಅವಕಾಶ ಇದಾಗಿದೆ ಹಾಗಾಗಿ ಅಪ್ಪು ಅಭಿಮಾನಿಗಳು ಈ ಒಂದು ಸುಂದರ ಕ್ಷಣವನ್ನು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆಚರಿಸುತ್ತಾರೆ. ಇನ್ನು ಧ್ರುವ ಸರ್ಜಾ ಅವರು ಮಾಡಿರುವಂತಹ ಈ ಒಂದು ಕೆಲಸವನ್ನು ನೋಡಿ ಅಪ್ಪು ಅಭಿಮಾನಿಗಳು ಕೂಡ ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.