ರಕ್ಷಿತ್ ಶೆಟ್ಟಿ ಅವರು ಒಂದು ಇಂಟರ್ ವ್ಯೂನಲ್ಲಿ ಹೇಳಿದ ಹಾಗೆ ಮನುಷ್ಯರ ಜೊತೆಗೆ ಆಕ್ಟಿಂಗ್ ಮಾಡುವುದು ಸುಲಭ ಆದರೆ ಚಾರ್ಲಿಯ ಜೊತೆಗೆ ಆಕ್ಟಿಂಗ್ ಮಾಡುವುದು ಸ್ವಲ್ಪ ಕಷ್ಟಕರವಾಗಿತ್ತು ಆದರೂ ಸಹ ನಾನು ಅದನ್ನು ಕೆಲವೊಂದು ಟ್ರಿಕ್ಸ್ ಗಳ ಮೂಲಕ ಆಕ್ಟಿಂಗ್ ಮಾಡಿದ್ದೇನೆ. ನಾವು ಚಾರ್ಲಿಗೆ ಕೆಲವೊಂದು ವಿಷಯ ಹೇಳಿಕೊಡಬಹುದು ಆದರೆ ಅದು ಎಲ್ಲಾ ಸಮಯವೂ ನಡೆಯುತ್ತಿರಲಿಲ್ಲ ಅದಕ್ಕೆ ತಕ್ಕಂತೆ ನಾನು ಆಕ್ಟಿಂಗ್ ಮಾಡಿದ್ದೇನೆ. ಇಡೀ ಸಿನಿಮಾ ಪೂರ್ತಿ ನಾನು ಎರಡು ಬೆರಳುಗಳ ನಡುವೆ ಒಂದು ಚಿಕ್ಕ ಬಿಸ್ಕೆಟ್ ಅನ್ನು ಇಟ್ಟುಕೊಂಡು ಅದಕ್ಕೆ ಮನಸ್ಸು ಬದಲಾಗದ ಹಾಗೆ ಇಡೀ ಚಿತ್ರ ಮಾಡಿದ್ದೇನೆ, ನಾನು ಹಾಗೆ ಮಾಡಿಲ್ಲ ಎಂದರೆ ಚಾರ್ಲಿ ಹಾಗೆ ಆಕ್ಟಿಂಗ್ ಮಾಡಲಾಗುತ್ತಿರಲಿಲ್ಲ ಅದನ್ನು ನಾನು ನಿಭಾಯಿಸಿದ್ದೇನೆ ಅಷ್ಟೇ.
ಶೂಟಿಂಗ್ ಸಮಯದಲ್ಲಿ ಚಾರ್ಲಿಗೆ ಪ್ರತ್ಯೇಕವಾದಂತಹ ಕ್ಯಾರವನ್ ಇತ್ತು ಮತ್ತು ಶೂಟಿಂಗ್ ಸಮಯದಲ್ಲಿ ನಾರ್ಥ್ ಸೈಡ್ ಕ್ಯಾರವನ್ ಸಿಗುವುದಿಲ್ಲ ಅಂತ ಹೇಳಿ ಇಲ್ಲಿಂದಲೇ ಕ್ಯಾರವನ್ ಮತ್ತು ಅದರಲ್ಲಿ ಸ್ವಿಮ್ಮಿಂಗ್ ಪೂಲ್ ಸಹ ವ್ಯವಸ್ಥೆ ಮಾಡಲಾಗಿತ್ತು. ಹತ್ತರಿಂದ ಹದಿನೈದು ತರಹ ಊಟೋಪಚಾರ ಒಂದು ರೀತಿಯ ರಾಯಲ್ ಟ್ರೀಟ್ ಚಾರ್ಲಿಗೆ ಈ ಸಿನಿಮಾದಲ್ಲಿ ಇತ್ತು. ಒಂದು ಸಿನಿಮಾದ ಹೀರೋಯಿನ್ ಗೆ ಎಷ್ಟು ಖರ್ಚಾಗುತ್ತದೆ ಅದಕ್ಕಿಂತ ಹೆಚ್ಚು ಚಾರ್ಲಿಗೆ ಖರ್ಚಾಗಿದೆ ಎಂದು ಹೇಳಿ ರಕ್ಷಿತ್ ಶೆಟ್ಟಿ ಮಾತನಾಡಿದರು. ಮೀಡಿಯಾದವರು ನಾವು ಕೆಲವೊಂದಷ್ಟು ಸಿನಿಮಾ ನೋಡಿದ್ದೇವೆ ಉದಾಹರಣೆಗೆ ವಿಷ್ಣುವರ್ಧನ್ ಅವರ ಸಿನಿಮಾ ವಾದ ನಿಶಬ್ದ ಹಾಗೆ ಇತ್ತೀಚಿಗೆ ಬಿಡುಗಡೆಗೊಂಡ ನಾನು ಮತ್ತು ಗುಂಡ ಎಂಬ ಸಿನಿಮಾ ನೋಡಿದ್ದೇನೆ ಅದರಲ್ಲಿ ಇರುವಂತಹ ಪಾತ್ರಕ್ಕೂ ಈ ಸಿನಿಮಾದಲ್ಲಿ ಚಾರ್ಲಿ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ ಕೆಲವೊಂದು ಗ್ರಾಫಿಕ್ಸ್ ಗಳ ಮೂಲಕ ತೋರಿಸುತ್ತಾರೆ ಆದರೆ ಈ ಸಿನಿಮಾದಲ್ಲಿ ಹಾಗೇ ಇಲ್ಲ ಎಂದು ಹೇಳುತ್ತಾರೆ.
ನಾವು ಕನ್ನಡ ಚಿತ್ರರಂಗದಲ್ಲಿ ಅಂದರೆ ಒಂದು ಡಾಗ್ ಅನ್ನು ಸಿನಿಮಾಗೆ ತೆಗೆದುಕೊಂಡು ಅದರಲ್ಲಿ ಹೆಸರು ಮಾಡುವುದು ತುಂಬಾ ಕಷ್ಟಕರವಾದರೂ ಸಹ, ನಮಗೆ ಒಂದು ಹೆಸರು ಮಾಡಬೇಕೆಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಉದಾಹರಣೆಗೆ ಇಂಗ್ಲಿಷ್ ಸಿನಿಮಾಗಳಲ್ಲಿ ಕೆಲವೊಂದು ಡಾಗ್ ಗಳ ಪಾತ್ರವನ್ನು ನೋಡಿದ್ದೇವೆ ಅದೇ ರೀತಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿಯೂ ಸಹ ಒಂದು ಹೆಸರು ಉಳಿಯಬೇಕು ಅದು 777 ಚಾರ್ಲಿ ಎಂಬುದು ಕೊನೆಯ ತನಕ ಉಳಿಯಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು. ನಾವು ಈ ಸಿನಿಮಾವನ್ನು ತೆಗೆಯಲು 80 ದಿನಗಳು ಸಾಕು ಎಂದು ಅಂದುಕೊಂಡಿದ್ದೆವು ಆದರೆ 167 ದಿನ, ಮೂರು ವರ್ಷಗಳ ಕಾಲ ಆಯ್ತು. ನಾವು ಯಾವುದೇ ಶೂಟ್ ಮಾಡುವಂತಹ ಸಂದರ್ಭದಲ್ಲಿ ಕೆಲವೊಂದು ದಿನ ಚಾರ್ಲಿಯ ಹತ್ತಿರ ಒಂದು ದಿನಕ್ಕೆ ಒಂದು ಶಾಟ್ ತೆಗೆದಿದ್ದೇವೆ ಹಾಗೆಯೇ ಹಲವಾರು ಸಮಯ ಚಾರ್ಲಿಯ ಹತ್ತಿರ ಯಾವುದೇ ಶಾಟ್ ಮಾಡಲು ಆಗುತ್ತಿರಲಿಲ್ಲ ಅದು ನೈಜವಾಗಿ ಬರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು.
ಈ ಶೂಟಿಂಗ್ ಸಮಯದಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾಗೆ ಇಂತಿಷ್ಟು ಖರ್ಚಾಗಬಹುದು ಅಂದುಕೊಂಡಿದ್ದರು ಆದರೆ ಅದಕ್ಕಿಂತ ಹೆಚ್ಚು ಖರ್ಚಾಗುತ್ತಿತ್ತು ಆದರೂ ಸಹ ಅವರು ಈ ಚಿತ್ರ ತುಂಬಾ ದೊಡ್ಡದಾಗಿ ಬರಬೇಕು ತುಂಬಾ ವಿಭಿನ್ನವಾಗಿ ಬರಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು ಹಾಗಾಗಿ ಚಾರ್ಲಿ ಮತ್ತು ಧರ್ಮ ಅವರ ಬಾಂಧವ್ಯ ಅಷ್ಟು ಚೆನ್ನಾಗಿತ್ತು ಅದು ಪರದೆ ಮೇಲೆ ಆದರು, ಹೊರಗಾದರೂ ಸಹ ಅವರಿಬ್ಬರ ಬಾಂಧವ್ಯ ಅಷ್ಟು ಚೆನ್ನಾಗಿತ್ತು ಆದ್ದರಿಂದಲೇ , ಹೆಚ್ಚು ಜನಕ್ಕೆ ಈ ಸಿನಿಮಾ ತುಂಬಾ ಕನೆಕ್ಟ್ ಆಗಿದೆ, ಮತ್ತು ಅಷ್ಟು ಯಶಸ್ವಿ ಕಾಣಲು ಕಾರಣವಾಯಿತು ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ಇನ್ನು ಸಂಭಾವನೆ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಗೆ ಪ್ರಾರಂಭ ಸಿನಿಮಾದಲ್ಲಿ 20 ಲಕ್ಷ ಸಂಭಾವನೆ ನೀಡಲಾಗುತಿತ್ತು ಚಾರ್ಲಿ ಸಿನಿಮಾದ ನಾಯಿಗೆ 1 ಕೋಟಿಗೂ ಅಧಿಕ ಸಂಭಾವನೆ ನೀಡಲಾಗಿದೆ ಎಂದು ಒಂದು ಸಂದರ್ಶನದಲ್ಲಿ ರಕ್ಷಿತ್ ಹೇಳಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ