ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಆ ದಿನಗಳು, ಬಿರುಗಾಳಿ, ಮೈನಾ ಮುಂತಾದ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟವರು. NRI ಆಗಿ ಭಾರತದಲ್ಲಿ ನೆಲೆಸಿರುವ ಇವರು ಆಗಾಗ ಭಾರತದ ರಾಜಕೀಯ, ಕರ್ನಾಟಕದ ರಾಜಕೀಯ, ಇಲ್ಲಿನ ಆಗುಹೋಗುಗಳು ಮತ್ತು ಸಿನಿಮಾ, ಹಿಂದುತ್ವ ವಿಚಾರವಾಗಿ ಮಾತನಾಡಿ ವಿವಾದ ಆಗುತ್ತಿರುತ್ತಾರೆ.
ಇತ್ತೀಚಿಗಂತೂ ಇವರು ಸಿನಿಮಾ ವಿಚಾರವಾಗಿ ಸುದ್ದಿ ಆಗುವುದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದರೆ ಎಂದು ಹೇಳಬಹುದು ಚೇತನ್ ಅಹಿಂಸಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಇಲ್ಲಿನ ಎಲ್ಲಾ ಕ್ರಿಯೆ ಹಾಗೂ ಪ್ರತಿಕ್ರಿಯೆಗಳ ಬಗ್ಗೆ ಪೋಸ್ಟ್ ಹಾಕುತ್ತಾ ಸಾಕಷ್ಟು ಜನರನ್ನು ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ.
ಈಗ ಕಿಚ್ಚ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕೂಡ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಬಸವರಾಜ್ ಬೊಮ್ಮಾಯಿ ಅವರು ನನಗೆ ವೈಯುಕ್ತಿಕವಾಗಿ ಬಹಳ ಆಪ್ತರು ಬಹಳ ವರ್ಷಗಳ ಸ್ನೇಹ ಸಂಬಂಧ ನಮ್ಮದು.
ನನ್ನ ಕಷ್ಟಕಾಲದಲ್ಲಿ ಅವರು ನನ್ನ ಜೊತೆಗಿದ್ದರು ಹಾಗಾಗಿ ಅವರಿಗಾಗಿ ನಾನು ಈಗ ಪ್ರಚಾರ ಮಾಡುತ್ತೇನೆ, ಅವರು ಯಾರಿಗೆ ಹೇಳುತ್ತಾರೆ ಅವರಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ ಹಾಗೆ ರಾಜಕೀಯಕ್ಕೆ ಸೇರುವ ಉದ್ದೇಶವು ಇಲ್ಲ ಎನ್ನುವುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ತಾವಾಡಿದ ಅಷ್ಟು ಮಾತಿನಲ್ಲಿ ತಾನು ಬಿಜೆಪಿ ಸೇರಿದ್ದೇನೆ ಎನ್ನುವುದನ್ನಾಗಲಿ ಅಥವಾ ಬಿಜೆಪಿ ಪರ ಇದ್ದೇನೆ ಎನ್ನುವುದನ್ನಾಗಲಿ ಸುದೀಪ್ ಅವರು ಹೇಳಿಲ್ಲ.
ಈಗ ಸುದೀಪ್ ಅವರ ನಿಲುವು ಬಸವರಾಜ ಬೊಮ್ಮಾಯಿ ಅವರ ಪರ ಎನ್ನುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ನಡೆಯುವ ಹಿಂದಿನ ದಿನವೇ ಇದರ ಸೂಚನೆ ಅರಿತಿದ್ದ ಪ್ರಕಾಶ್ ರಾಜ್ ಅವರು ನಮ್ಮ ಕಿಚ್ಚ ತಮ್ಮನ್ನು ಮಾರಿಕೊಳ್ಳುವವರಲ್ಲ ಎಂದು ಪೋಸ್ಟ್ ಹಾಕಿದ್ದರು. ಆದರೆ ಮರುದಿನ ಕಿಚ್ಚನ ನಡೆ ಕಂಡು ಬಳಿಕ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರ ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನೋವನ್ನು ಕೂಡ ಉಂಟು ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈಗ ಇದೆಲ್ಲದರ ಬಗ್ಗೆ ನಟ ಚೇತನ್ ಅಹಿಂಸಾ ಅವರು ಸಹಾ ಬರೆದುಕೊಂಡಿದ್ದಾರೆ. ಇಬ್ಬರು ಸಹ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರುಗಳು. ಒಬ್ಬರು ಬಿಜೆಪಿ ಪರ ಮತ್ತೊಬ್ಬರು ಬಿಜೆಪಿ ವಿರೋಧ ಆದರೆ ಇಬ್ಬರು ಸಹ ಜೂಜಾಡಿ ಹಣಗಳಿಸಿದವರು ಎಂದು ಪರೋಕ್ಷವಾಗಿ ಟಾಂಗ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್ ಅಲ್ಲಿ ಸಿನಿಮಾ ತಾರೆ ಒಬ್ಬರು ಬಿಜೆಪಿ ಸೇರಿದರೆ ಆ ನಿಲುವನ್ನು ಮಾರಾಟ ಎಂದು ಉದಾರವಾದಿಗಳು ಬಿಂಬಿಸುವುದೇಕೆ.
ಈಗಾಗಲೇ ಅವರು ಕಾಂಗ್ರೆಸ್, ಎಎಪಿ, ಜೆಡಿಎಸ್ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ಮಾರಾಟವಾಗಿದ್ದಾರೆ ಎಂದು ಪ್ರಕಾಶ್ ರಾಜ್ ಅವರನ್ನು ಕುಕ್ಕಿದ್ದಾರೆ. ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದು ಚೇತನ್ ಮತ್ತೊಂದು ಪೋಸ್ಟ್ ಅಲ್ಲಿ ಬರೆದುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.