Friday, June 9, 2023
HomeEntertainmentದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ...

ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್

ದೀಪಿಕಾ ಕೇಸರಿ ಬಿಕಿನಿ ವಿವಾದ, ಅಖಾಡಕ್ಕಿಳಿದ ನಟ ಚೇತನ್.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ದೊಡ್ಡ ಬ್ರೇಕ್ ನಂತರ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಈವರೆಗೆ ಯಾರಿಗೂ ಸಹ ರಹಸ್ಯ ಬಿಟ್ಟುಕೊಡದೆ ಚಿತ್ರೀಕರಣ ಚಾಲು ಮಾಡಿದ್ದ ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಪಟಾಣ್ ಎನ್ನುವುದು ಸಿನಿಮಾ ಹೆಸರಾಗಿದ್ದು, ಹಾಡು ಬಿಡುಗಡೆ ಆಗುವುದರ ಕುರಿತು ಶಾರುಖ್ ಖಾನ್ ಅವರೇ ಟ್ವೀಟ್ ಮಾಡಿ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಂಡಿದ್ದರು.

ಅವರು ಟ್ವೀಟ್ ಮಾಡಿದ್ದ ಕ್ಷಣಗಳಿಗೆ ಇಂದ ಇಲ್ಲಿಯವರೆಗೆ ಯೂಟ್ಯೂಬ್ ಅಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಕಡಲ ತೀರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರು ರೊಮಾಂಟಿಕ್ ಆಗಿ ಈ ಮೆಲೋಡಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆ ಹಾಡಿನಲ್ಲಿ ದೀಪಿಕಾ ಧರಿಸಿರುವ ಕಾಸ್ಟ್ಯೂಮ್ ಬಾರಿ ಚರ್ಚೆ ಆಗುತ್ತಿದ್ದು ಅದು ಬೇರೆ ಅರ್ಥವನ್ನು ಪಡೆದುಕೊಳ್ಳುತ್ತಿದೆ.

ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಉಡುಗೆ ಹಾಗೂ ಬಿಕಿನಿ ತೊಟ್ಟಿದ್ದಾರೆ ಮತ್ತು ನಟ ಶಾರುಖ್ ಖಾನ್ ಅವರು ಹಸಿರು ಬಣ್ಣದ ಶರ್ಟ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡು ರಿಲೀಸ್ ಆದಾಗ ಮೊದಲು ಎಲ್ಲರೂ ದೀಪಿಕಾ ಅವರು ಈ ಹಾಡಿನಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆಗೂ ಮುನ್ನ ಚಿತ್ರಗಳೇ ಪರವಾಗಿಲ್ಲ ಈಗಂತೂ ತುಂಬಾ ಎಕ್ಪೋಸ್ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದರು.

ಈ ಹಾಡಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಕಾರ್ಯಕರ್ತರು ದೀಪಿಕಾ ಅವರ ಮೇಲೆ ತಿರುಗಿ ಬಿದ್ದಿದ್ದಾರೆ ಅಲ್ಲದೆ ಈ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಹಠಕ್ಕೆ ಬಿದ್ದು ಈ ಬಗ್ಗೆ ಒತ್ತಡ ಹೇಳುತ್ತಿದ್ದಾರೆ. ಈ ಹಿಂದೆ ದೀಪಿಕಾ ಜೆಎನ್ಯು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಷಯ ಇಟ್ಟುಕೊಂಡು ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ.

ರಿಲೀಸ್ ಆಗಿರುವ ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಬಿಕನಿ ಕೇಸರಿ ಬಣ್ಣದ್ದಾಗಿದೆ. ಅದು ಇಷ್ಟೆಲ್ಲ ಅನರ್ಥಗಳಿಗೆ ಕಾರಣ ಆಗಿದೆ ಆದರೆ ಈ ವಿವಾದದ ಬಗ್ಗೆ ಸಾಕಷ್ಟು ಜನ ಪರ ಮತ್ತು ವಿರೋಧವಾಗಿ ಮಾತನಾಡುತ್ತಿದ್ದಾರೆ ಕರ್ನಾಟಕದಲ್ಲಿ ಸಹ ಈ ಬಗ್ಗೆ ಮಾತುಕತೆ ಜೋರಾಗಿದ್ದು ಈಗ ದೀಪಿಕಾ ಪಡುಕೋಣೆ ಪರವಾಗಿ ವಿವಾದಿತ ನಟ ಎನ್ನುವ ಖ್ಯಾತಿಗೆ ಗುರಿ ಆಗಿರುವ ಚೇತನ್ ಅಹಿಂಸ ಬ್ಯಾಟ್ ಬೀಸಿದ್ದಾರೆ.

ಪಟಾಣ್ ಚಿತ್ರದ ಹಾಡು ಕೇಸರಿ ಹಾಗೂ ಹಸಿರು ಬಣ್ಣದ ಕಾರಣದಿಂದ ರಾಜಕೀಯಗೊಳ್ಳುತ್ತಿದೆ, ಬಟ್ಟೆಯ ಬಣ್ಣದ ಕಾರಣಕ್ಕಾಗಿ ಅವರ ವ್ಯಕ್ತಿತ್ವವನ್ನು ಗುರುತಿಸುವುದು ತೀರ ಚಿಕ್ಕಮಟ್ಟದ್ದು. ಬುದ್ಧ ಹಾಗೂ ಬಸವಣ್ಣವರ ಕೇಸರಿ ಬಣ್ಣವನ್ನು ಹಿಂದುತ್ವ ತನ್ನದು ಎಂದು ಹೇಳಿಕೊಳ್ಳುತ್ತಿದೆ ಪ್ರಕೃತಿ ಹಾಗೂ ರೈತರ ಬಣ್ಣವಾದ ಹಸಿರು ಇಸ್ಲಾಂ ಧರ್ಮದ್ದು ಎಂದು ಗುರುತಿಸುತ್ತಾರೆ.

 

ಈ ಹಾಡಿನ ವಿವಾದವು ಬೇಕೆಂದಲೆ ಮಾಡಲಾಗಿದೆ ಇದರಲ್ಲಿ ವಿವಾದ ಮಾಡುವಂತಹ ವಿಷಯವೇನು ಇಲ್ಲ ಎಂದು ಹೇಳಿದ್ದಾರೆ ಈ ಬಗ್ಗೆ ದೀಪಿಕ ವಿರೋಧವಾಗಿ ಕೂಡ ಕನ್ನಡದ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಈಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಪ್ರಶಾಂತ್ ಸಂಬರ್ಗಿಯವರು ಸಹ ಮಾತನಾಡಿದ್ದು ದೀಪಿಕಾ ಪಡುಕೋಣೆ ಅವರು ಹಲವು ವರ್ಷಗಳಿಂದ ಬಾಲಿವುಡ್ ಚಿತ್ರೋದ್ಯಮ ಈ ರೀತಿ ಹಿಂದು ಭಾವನೆಗಳಿಗೆ ಧಕ್ಕೆ ಆಗುವ ರೀತಿ ನಡೆದುಕೊಳ್ಳುತ್ತಿದೆ.

ಅವರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಇರಬಹುದಾ ಎನ್ನುವ ಅನುಮಾನಗಳು ಸಹ ಮೂಡುತ್ತವೆ ಸಿನಿಮಾದಲ್ಲಿ ಬೇಕೆಂತಲೇ ದೀಪಿಕಾ ಅವರಿಗೆ ಈ ಬಣ್ಣದ ಬಿಕಿನಿ ಹಾಕಿಸಿರಬಹುದು ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.