Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

Posted on February 14, 2023 By Kannada Trend News No Comments on ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

 

ಆ ದಿನಗಳು, ಬಿರುಗಾಳಿ, ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್ (Actor Chethan) ಅವರು ಸದಾ ಒಂದಲ್ಲ ಒಂದು ವಿವಾದಗಳಲ್ಲಿ (contreversy) ಸಿಲುಕಿಕೊಂಡಿರುತ್ತಾರೆ. ಇವರೇ ಕಾಂಟ್ರವರ್ಸಿಯನ್ನು ಹುಡುಕಿ ಹೋಗುತ್ತಾರೋ ಅಥವಾ ಇವರು ಮಾತನಾಡುವುದಿಲ್ಲವೂ ವಿವಾದವಾಗುತ್ತದೋ ಗೊತ್ತಿಲ್ಲ ವಿವಾದಾತ್ಮಕ ನಟ ಚೇತನ್ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಆಗಾಗ ಸರ್ಕಾರದ ವಿರುದ್ಧ ಅಥವಾ ಕೆಲವು ಪ್ರಚಲಿತ ಘಟನೆ ಬಗ್ಗೆ ಮಾತನಾಡಿ ವಿವಾದಕ್ಕೂ ಸಿಲುಕುತ್ತಾರೆ.

ಅವರು ಏನೇ ಮಾತನಾಡಿದರು ಅದನ್ನು ಸಹಿಸಿಕೊಳ್ಳಲು ನಮ್ಮವರಿಗೆ ಆಗುತ್ತಿಲ್ಲ. ಹೆಚ್ಚಾಗಿ ಅವರು ದೇಶದ ಸಂವಿಧಾನದ ಬಗ್ಗೆ ಹಾಗೂ ಈ ದೇಶದ ಆಚಾರ ವಿಚಾರಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಈಗಷ್ಟೇ ಕಾಂತರಾ ಸಿನಿಮಾದ ಬಗ್ಗೆ ಮಾತನಾಡಲು ಹೋಗಿ ಎಲ್ಲರನ್ನು ಛೀಮಾರಿ ಹಾಕಿಸಿಕೊಂಡಿದ್ದ ಅಹಿಂಸಾ ಚೇತನ್ ಅವರು ಮತ್ತೆ ಅಂಬೇಡ್ಕರ್ (Ambekdkar) ಅವರ ಅವಹೇಳನ ಮಾಡಿ ನಾಟಕ ಮಾಡಿದ್ದ ವಿದ್ಯಾರ್ಥಿಗಳ (students) ಪರ ವಕಾಲತ್ತು ವಹಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಯನ್ನು ಹಾಕುವ ಮೂಲಕ ಇನ್ನಷ್ಟು ಜನರ ಬೇಸರಕ್ಕೆ ಕಾರಣ ಆಗಿದ್ದಾರೆ.

ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ (Jain University) ಯುವಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನೃತ್ಯ, ಹಾಸ್ಯ, ನಾಟಕ ಇಂತಹ ಭಾಗಗಳಲ್ಲಿ ಆರು ವಿದ್ಯಾರ್ಥಿಗಳ ತಂಡವೊಂದು ಕಿರು ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಿತು. ಈ ನಾಟಕದ ಉದ್ದೇಶ ಸಮಾಜದಲ್ಲಿ ದಲಿತರ ಮೇಲೆ ಆಗುತ್ತಿರುವ ಅನ್ಯಾಯ ಅವಮಾನದ ದೌರ್ಜನ್ಯದ ಮೇಲೆ ಧ್ವನಿ ಎತ್ತುವುದಾಗಿತ್ತು.

ಆದರೆ ನಾಟಕದಲ್ಲಿ ಬಳಸಲಾದ ಕೆಲವು ಸಂಭಾಷಣೆಗಳಲ್ಲಿ ಅಂಬೇಡ್ಕರ್ ಅವರನ್ನು ಹಾಗೂ ದಲಿತ ವರ್ಗದವರನ್ನು ಅವಮಾನಿಸುವಂತಹ ಕೆಲವು ಪದಗಳು ಇತ್ತು. ಈ ಕಾರ್ಯಕ್ರಮ ಪ್ರಸಾರವಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳು ಬಳಸಿದ ಪದಗಳ ಬಗ್ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತುಕೊಂಡ ಕುಲಪತಿಗಳು ನಮ್ಮ ಯೂನಿವರ್ಸಿಟಿ ಅಲ್ಲಿ ನಡೆಸಿದ ಕಾರ್ಯಕ್ರಮದ ಉದ್ದೇಶ ಇದಾಗಿರಲಿಲ್ಲ.

ಆದರೆ ಅದರಲ್ಲಿ ಬಳಸಿರುವ ಪದಗಳಿಂದ ಸಾಕಷ್ಟು ಜನರ ಭಾವನೆಗಳಿಗೆ ಧಕ್ಕೆ ಆಗಿದೆ. ಅದಕ್ಕಾಗಿ ನಾವು ಎಲ್ಲರಲ್ಲೂ ಕ್ಷಮೆ ಕೇಳುತ್ತೇವೆ ಮತ್ತು ಆರು ವಿದ್ಯಾರ್ಥಿಗಳ ಮೇಲೂ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಿದ್ದೇವೆ ಎಂದು ಸಹ ತಿಳಿಸಿದ್ದರು. ಈಗ ಅಹಿಂಸಾ ಚೇತನ ಅವರು ಆ ಘಟನೆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಜೈನ್ ಯುನಿವರ್ಸಿಟಿಯ ಈ ನಡೆಯ ಬಗ್ಗೆ ತಮ್ಮ ಅನಿಸಿಕೆ ಹೇಳಿ ಈ ವಿದ್ಯಾರ್ಥಿಗಳ ಪರವಾಗಿ ಕೆಲ ಸಾಲುಗಳನ್ನು ಬರೆದಿದ್ದಾರೆ.

“ಬಲವಾದ ಪ್ರಜಾಪ್ರಭುತ್ವಕ್ಕಾಗಿ ಎಲ್ಲರನ್ನೂ ಹಾಗೂ ಎಲ್ಲವನ್ನು ಹಾಸ್ಯ ಮಾಡುವ ಹಕ್ಕು ನಮಗಿರಬೇಕು. ಈಗ ಈ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ನಡೆ ಸರಿಯಲ್ಲ ಎಂದು ಯುನಿವರ್ಸಿಟಿ ನಡೆ ಬಗ್ಗೆ ಅಸಮಾಧಾನ ತೋರಿದ್ದಾರೆ. ಹೇಗೆ ಸ್ಟ್ಯಾಂಡರ್ಡ್ ಕಾಮಿಡಿಯನ್ ಮೋದಿ ಬಗ್ಗೆ ಮಾತನಾಡಿದಾಗ ಅದನ್ನು ಸೆನ್ಸಾರ್ ಮಾಡುವುದಲ್ಲವೋ ಹಾಗೆ ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತ ಇಂಥವರ ಕುರಿತು ಮಾಡುವ ಹಾಸ್ಯವನ್ನು ಕೂಡ ಗಂಭೀರವಾಗಿ ಪರಿಗಣಿಸಬಾರದು. ಅದನ್ನು ಅಪರಾಧ ಎಂದುಕೊಳ್ಳುವುದು ಪಜಾಪ್ರಭುತ್ವ ಅಲ್ಲ ಈ ಆರು ವಿದ್ಯಾರ್ಥಿಗಳನ್ನು ಜೈನ್ ಯುನಿವರ್ಸಿಟಿಯು ಅಮಾನತು ಮಾಡಿರುವುದು ವಾಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

Viral News Tags:Actor Chethan Kumar, Chethan, Chethan Ahimsa
WhatsApp Group Join Now
Telegram Group Join Now

Post navigation

Previous Post: ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು‌. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ
Next Post: ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore