Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಕಾಫಿ ನಾಡು ಚಂದು.

Posted on August 15, 2022 By Kannada Trend News No Comments on ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಕಾಫಿ ನಾಡು ಚಂದು.

ಕಾಫಿ ನಾಡು ಚಂದು ಈ ಹೆಸರು ಹೇಳಿದ ತಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಹಾಯ್ ನಾನು ಶಿವಣ್ಣನ ಅಭಿಮಾನಿ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳಿಕೊಂಡು ಎಲ್ಲಾ ಸೆಲೆಬ್ರಿಟಿಗಳಿಗೆ ಬರ್ತಡೆಗೆ ವಿಶ್ ಮಾಡುವ ಮತ್ತು ಬರ್ತಡೇ ಸಾಂಗ್ ಮಾಡುವ ಫೇಮಸ್ ಆಗಿರುವ ಆಟೋ ಡ್ರೈವರ್ ಚಿಕ್ಕಮಗಳೂರಿನ ಈ ಯುವಕ. ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿರುವ ಕಾಫಿ ನಾಡು ಚಂದು ಎಂದು ಹೆಸರುವಾಸಿ ಆಗಿರುವ ಚಂದು ಅವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾರೆ. ಇವರು ತಮ್ಮ ಆಟೋ ಮೇಲೂ ಸಹ ಶಿವಣ್ಣ ಹಾಗೂ ಪುನೀತ್ ಅಣ್ಣನ ಭಾವಚಿತ್ರಗಳನ್ನು ಅಂಟಿಸಿಕೊಂಡು ತಮ್ಮ ಅಭಿಮಾನಿ ಮೆರೆಯುತ್ತಿದ್ದಾರೆ.

ಅಲ್ಲದೆ ತಾನೊಬ್ಬ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಸಮಾಜ ಸೇವೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತೇನೆ ಎಂದು ಹೇಳಿಕೊಳ್ಳುವ ಇವರು ತಮ್ಮ ಕೈಯಿಂದ ಆದಷ್ಟು ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ ಎನ್ನುವುದು ಬಹಳ ವಿಶೇಷ. ದಿನೇ ದಿನೇ ಕಾಫಿನಾಡು ಚಂದು ಅವರ ಇನ್ಸ್ಟಾಗ್ರಾಮ್ ಫಾಲವರ್ ಸಂಖ್ಯೆ ಹಾಗೂ ಅಭಿಮಾನಿಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಫಿ ನಾಡು ಚಂದು ಹೋಗುವುದು ಬಹುತೇಕ ಕಂಫರ್ಮ್ ಎಂದು ಎಲ್ಲರೂ ಮಾತನಾಡುತ್ತಿದ್ದರು. ಅಲ್ಲದೆ ಈಗಾಗಲೇ ಶುರುವಾಗಿರುವ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವವರಿಗೆ ಹೆಚ್ಚು ಮಾನ್ಯತೆ ಕೊಟ್ಟಿದ್ದರಿಂದ ಅಲ್ಲಿ ಕಾಫಿ ನಾಡು ಚಂದು ಇರುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು.

https://www.instagram.com/reel/ChACeKrhzMF/?igshid=YmMyMTA2M2Y=

ಆದರೆ ಬಿಗ್ ಬಾಸ್ ಓಟಿಪಿ ಅಲ್ಲಿ ಕಾಫಿ ನಾಡು ಚಂದು ಅವರು ಭಾಗವಹಿಸದೆ ಇರುವುದು ಬಹಳ ಜನರಿಗೆ ಬೇಸರ ಮೂಡಿಸಿದೆ. ಅಲ್ಲದೆ ಕಾಫಿ ನಾಡು ಚಂದು ಅವರಿಗೂ ಕೂಡ ಬಿಗ್ ಬಾಸ್ ಅಲ್ಲಿ ಭಾಗವಹಿಸಲು ಬಹಳ ಆಸೆ ಇದೆಯಂತೆ ಅದಕ್ಕಾಗಿ ಅವರು ಬಿಗ್ ಬಾಸ್ ಅಲ್ಲಿ ತಾವು ಭಾಗವಹಿಸಬೇಕು ಎನ್ನುವ ಆಸೆಯಿಂದ ಹೊಸದೊಂದು ಐಡಿಯಾ ಮಾಡುತ್ತಿದ್ದಾರೆ ತಾನೂ ಬಿಗ್​ಬಾಸ್​ ಮನೆಗೆ ಹೋಗಬೇಕೆಂದು ಹಲವಾರು ಬಾರಿ ಕಾಫಿ ನಾಡಿನ ಚಂದು ಹೇಳಿಕೊಂಡಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಕೂರದ ಕಾಫಿ ನಾಡಿನ ಚಂದು ಹೊಸದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ.

ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ. ಹೌದು, ಬಿಗ್​ಬಾಸ್​ ಮನೆಗೆ ಚಂದು ಹೋಗುವುದು ಖಚಿತ ಅಂತ ಜನರು ಕೂಡ ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚಂದು ಎಲ್ಲರ ಬಳಿ ತೆರಳಿ ತನ್ನನ್ನು ಬಿಗ್​ಬಾಸ್​ ಮನೆಗೆ ಕಳುಹಿಸುವಂತೆ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರೆ. ಪ್ರತಿ ದಿನ ಸಮಯ ವ್ಯರ್ಥ ಮಾಡದೇ ಈ ಅಭಿಯಾನವನ್ನು ಕಾಫಿ ನಾಡಿನ ಚಂದು ಶುರು ಮಾಡಿದ್ದಾರಂತೆ. ಸಣ್ಣ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯ ಬಳಿ ತೆರಳಿ ತನಗೆ ಸಪೋರ್ಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರಂತೆ. ಬಿಗ್ ಬಾಸ್ ಬಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವುದಕ್ಕೆ ಈ ರೀತಿ ಕಸರತ್ತು ಮಾಡುತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

https://www.instagram.com/reel/ChGvYFLhdLp/?igshid=YmMyMTA2M2Y=

Entertainment Tags:Big boss, Big Boss OTT, Chandu, Coffe naadu chandu, Mini big boss
WhatsApp Group Join Now
Telegram Group Join Now

Post navigation

Previous Post: ದರ್ಶನ್ 25ನೇ ವರ್ಷದ ಸಿನಿ ಜರ್ನಿ ಸೆಲೆಬ್ರೇಶನ್ ಗೆ ಬಂದ ಕಿಚ್ಚ ಸುದೀಪ್, ಇವರ ಎಂಟ್ರಿ ನೋಡಿ ಶಾ-ಕ್ ಆದ ಅಭಿಮಾನಿಗಳು.
Next Post: ಅಪ್ಪು ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಖ್ಯಾತ ನಟಿ, ಇವರ ಅಭಿಮಾನವನ್ನು ಎಲ್ಲರೂ ಮೆಚ್ಚಲೇಬೇಕು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore