Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.

Posted on August 6, 2022 By Kannada Trend News No Comments on ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.

ತನ್ನ ಮುಗ್ಧ ಪ್ರತಿಭೆಯ ಹಾಡು ಹಾಗೂ ನೃತ್ಯಗಳಿಂದ ನೆಟ್ಟಿಗರನ್ನು ರಂಜಿಸುತ್ತಾ ನಾನು ಪುನೀತಣ್ಣ ಶಿವಣ್ಣ ಅವರ ಅಭಿಮಾನಿ ಎಂದು ವಿಡಿಯೋ ಶುರು ಮಾಡುವ ಈ ಹಳ್ಳಿಯ ಮುಗ್ಧತೆಯ ಹುಡುಗ ಕಾಫಿನಾಡು ಚಂದು ಒಬ್ಬ ಆಟೋ ಚಾಲಕ ಆಗಿದ್ದು ಕೆಲವು ಸಮಾಜ ಸೇವೆಗಳನ್ನು ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾನೆ. ಇತ್ತೀಚೆಗೆ ಕೇವಲ 2 ವಾರಗಳಿಂದ ಈಚೆಗೆ ಹೆಚ್ಚು ಪ್ರಸಿದ್ದಿಯಲ್ಲಿರುವ ಈ ಹುಡುಗ ಚಿಕ್ಕಮಗಳೂರಿನ ಮೂಡಿಗೆರೆಯ ಮಲ್ಲಂದೂರು ಗ್ರಾಮದ ನಿವಾಸಿಯಾಗಿದ್ದು ಹೆಚ್ಚಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತನ್ನದೇ ಶೈಲಿಯಲ್ಲಿ ಹಾಡುಗಳ ಮೂಲಕ ಹಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ದಿಯನ್ನು ಗಳಿಸಿದ್ದಾನೆ. 10 ಸಾವಿರಕ್ಕೂ ಹೆಚ್ಚು ಹುಟ್ಟುಹಬ್ಬದ ಹಾಡುಗಳನ್ನು ತನ್ನದೇ ಶೈಲಿಯಲ್ಲಿ ಹಾಡಿರುವುದಾಗಿ ಹೇಳಿಕೊಳ್ಳುವ ಕಾಫಿನಾಡು ಚಂದು ಅವರು ಅರ್ಜುನ್ ಜನ್ಯ ಅವರಿಗಿಂತ 2 ಪಟ್ಟು ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಈ ಸೋಶಿಯಲ್ ಮೀಡಿಯಾ ಎನ್ನುವುದು ಎಂಥವರನ್ನು ಬೇಕಾದರೂ ಪ್ರಸಿದ್ದಿಗೊಳಿಸಿ ಕೊನೆಗೆ ಹಾಳು ಮಾಡುತ್ತದೆ ಎಂದರೂ ತಪ್ಪಿಲ್ಲ. ಏಕೆಂದರೆ ನಮ್ಮನ್ನು ಹೆಚ್ಚು ಜನರು ಬೆಂಬಲಿಸುತ್ತಿರುವಾಗ ನಮಗೆ ಹೆಮ್ಮೆಯಾಗಿ ನಮ್ಮ ಕಾರ್ಯ ಕ್ಷಮತೆಯನ್ನು ಬೆಂಬಲಿಸುತ್ತಾರೆ ಎಂದು ಬಲವಾಗಿ ನಂಬಿ ಅದರಲ್ಲಿಯೇ ನಾವು ಮಗ್ನರಾಗುವುದಲ್ಲದೆ ನಾವು ಮಾಡುತ್ತಿರುವುದೇ ಸರಿ ಎಂದುಕೊಂಡು ಬಿಡುತ್ತೇವೆ. ಆದರೆ ಒಮ್ಮೆ ಯೋಚಿಸಿ ನಮಗೆ ಅರಿವಿಲ್ಲದಯೇ ಸಣ್ಣದೊಂದು ತಪ್ಪು ನಮ್ಮಿಂದ ಆಗಿದೆ ಎಂದು ತಿಳಿದರೆ ಸಾಕು ನಮ್ಮನ್ನು ಬೆಂಬಲಿಸುವ ಅದೇ ಜನ ನಮ್ಮನ್ನು ದೂಷಿಸಿ ಅಟ್ಟದಿಂದ ಕೆಳಗಿಳಿಸುತ್ತಾರೆ. ಇಂತಹ ನೋವುಗಳನ್ನು ತಡೆದುಕೊಳ್ಳುವ ಶಕ್ತಿ ಇದ್ದರೆ ಪರವಾಗಿಲ್ಲ ಒಂದು ನಾವು ಹೆಚ್ಚಾಗಿ ಮುಗ್ಧರಾಗಿ ಖಿನ್ನತೆಗೆ ಒಳಗಾಗುವ ಹಾಗೂ ಡಿಪ್ರೆಶನ್ ಗೆ ಒಳಗಾಗುವ ವ್ಯಕ್ತಿಗಳಾಗಿದ್ದರೆ ಖಂಡಿತ ಈ ಸೋಶಿಯಲ್ ಮೀಡಿಯಾದಿಂದ ಎಚ್ಚರಿಕೆಯಿಂದ ಇರುವುದು ನಮಗೆ ಒಳಿತು. ಈ ಸೋಶಿಯಲ್ ಮೀಡಿಯಾ ಒಂದು ರೀತಿ ಅಟ್ಟಕ್ಕೇರಿಸುವ ಏಣಿಯೂ ಹೌದು ಚಟ್ಟಕ್ಕೆ ಏರಿಸುವ ಮಾಯೆಯೂ ಹೌದು.

WhatsApp Group Join Now
Telegram Group Join Now

ಯಾಕೆ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವುದು ಎಂದರೆ ಕಾಫಿನಾಡು ಚಂದು ಒಬ್ಬ ಮುಗ್ಧತೆಯ ಹುಡುಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆತನ ಮಾತಿನ ಶೈಲಿಯಿಂದಲೇ ಆತನ ಮುಗ್ಧತೆಯನ್ನು ಗುರುತಿಸಬಹುದಾಗಿದ್ದು ಈ ಸೋಶಿಯಲ್ ಮೀಡಿಯದಿಂದ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು. ಈ ಸಂದರ್ಭದಲ್ಲೇನೋ ಜನರ ಸಹಕಾರ ಬೆಂಬಲಗಳು ದೊರೆಯುತ್ತಿದೆ ಆದರೆ ಮುಂದೊಂದು ಈ ಬೆಂಬಲ ಕಡಿಮೆಯಾದಾಗ ಮನ ಕುಗ್ಗುವ ಸಂದರ್ಭ ಬಂದಾಗ ದೈರ್ಯದಿಂದ ಎದುರಿಸಿ ನಿಲ್ಲಬೇಕಾಗುತ್ತದೆ. ಅಂತಹ ಸಮಯದಲ್ಲಿ ಯಾರೂ ಕೂಡ ಸಹಾಯಕ್ಕೆ ಬರುವುದಿಲ್ಲ ಹಾಗಾಗಿ ಎಚ್ಚರಿಕೆಯಿಂದ ಇರುವುದು ಒಳಿತು. ಇದೇ ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ತಮಗೆ ಬೆಂಬಲ ಕಡಿಮೆಯಾಗಿ ಜನಪ್ರಿಯತೆ ಕಡಿಮೆಯಾದಾಗ ಎಷ್ಟೋ ಮಂದಿ ಆತ್ಮಹತ್ಯೆ ಎಂಬ ಕೆಟ್ಟ ನಿರ್ಧಾರಕ್ಕೆ ಶರಣಾದರೆ ಇನ್ನು ಕೆಲವರು ಕೆಟ್ಟ ಚಟಗಳಿಗೆ ಶರಣಾಗಿ ನಾಚಿಕೆಗೇಡಿನ ಕೆಲಸಗಳನ್ನು ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪಪ್ರಚಾರಕ್ಕೆ ಗುರಿಯಾದವರನ್ನು ನೋಡಿದ್ದೇವೆ.

ಸದ್ಯ ಕಾಫಿನಾಡು ಚಂದು 2 ವಾರಗಳಿಂದ ಈಚೆಗೆ ದಿನದಿಂದ ದಿನಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು ಇಂದು 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಸಂಖ್ಯೆಯನ್ನು ಹೊಂದಿದ್ದು ಕರ್ನಾಟಕದ ಮೂಲೆ ಮೂಲೆಯಲ್ಲೂ ಕಾಫಿನಾಡು ಚಂದು ಶೈಲಿಯ ಹುಟ್ಟುಹಬ್ಬದ ಹಾಡನ್ನು ಹಾಡುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಚಂದು ಅವರು ತಮ್ಮ ಕಣ್ಣಿಗೆ ಯಾರಾದರೂ ಕಷ್ಟದಲ್ಲಿರುವವರು ಕಂಡರೆ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗಿ ಸಮಾಜಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಾರೆ.

WhatsApp Group Join Now
Telegram Group Join Now
Entertainment Tags:Chandu, Coffee Nadu chandu

Post navigation

Previous Post: ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.
Next Post: ಎಷ್ಟ್ ಬೇಕಾದ್ರು ಕುಡಿರಪ್ಪ ಅಂತ ಹೇಳಿ ನೈಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಅವರ ಈ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme