75ನೇ ಸ್ವಾತಂತ್ರ್ಯೋತ್ಸವದ ಆಚರಣೆಗೆ ದಿನಗಣನೆ ಆರಂಭವಾಗಿದ್ದು ಸಸ್ಯಾಕಾಶಿ ಎಂದೇ ಹೆಸರಾಗಿರುವ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗಿದ್ದು ಈ ಫ್ಲವರ್ ಶೋ ಗೆ ಕರ್ನಾಟಕ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು. ಚಾಲನೆ ನೀಡಿ ಪುಷ್ಪ ಪ್ರದರ್ಶನದ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು ಲಾಲ್ ಬಾಗ್ ನಲ್ಲಿ ಉದ್ಘಾಟನೆಗೊಂಡಿರುವ ಡಾಕ್ಟರ್ ರಾಜ್ ಕುಮಾರ್ ಪ್ರತಿಮೆ ಹಾಗೂ ಅಪ್ಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದರು. ಇಂದಿನ ಲಾಲ್ ಬಾಗ್ ನ ಪುಷ್ಪ ಪ್ರದರ್ಶನಕ್ಕೆ ಅಪ್ಪು ಅವರ ಪ್ರತಿಮೆಯಿಂದ ಕಳೆ ಬರಲಿದ್ದು ಅಪ್ಪು ಅವರು ಇಂದಿಗೂ ಎಂದೆಂದಿಗೂ ಅಜರಾಮರ ಎನ್ನುವ ಮಾತು ನೂರಕ್ಕೆ ನೂರರಷ್ಟು ದಿಟ ಆಗುತ್ತಿದೆ.
ಮೊನ್ನೆಯಷ್ಟೇ ಬೆಂಗಳೂರಿನ ಜಿ ಎಂ ಪಾಳ್ಯದಲ್ಲಿ ಅಪ್ಪು ಪ್ರತಿಮೆಯನ್ನು ಉದ್ಘಾಟಿಸಿದ್ದನ್ನು ನಾವು ನೋಡಿದ್ದೇವೆ ಅದೇ ರೀತಿ ರಾಜ್ಯದ ವಿವಿದೆಡೆ ಅಪ್ಪು ಪ್ರತಿಮೆಗಳನ್ನ ನಿರ್ಮಿಸಿ ಪೂಜಿಸುತ್ತಿರುವ ಘಟನೆಗಳನ್ನು ನಾವು ನೀವು ದಿನನಿತ್ಯ ನೋಡುತ್ತಿದ್ದೇವೆ. ಇದೇ ರೀತಿ ಲಾಲ್ ಬಾಗ್ ನಲ್ಲಿಯೂ ಅಪ್ಪುವಿನ ಸುಂದರ ಪ್ರತಿಮೆಯೊಂದನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದಾರೆ. ಈ ಪ್ರತಿಮೆಯನ್ನು ಅಣ್ಣಾವ್ರ ಪ್ರತಿಮೆಯ ಪಕ್ಕದಲ್ಲೇ ಇರಿಸಲಾಗಿದ್ದು ಈ ಬಾರಿಯ ಲಾಲ್ ಬಾಗ್ ನ ಪುಷ್ಪ ಪ್ರದರ್ಶನಕ್ಕೆ ಕಳೆ ಬರಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಳೆದ 2 ವರ್ಷಗಳಿಂದ ಕೊರೊನ ಮಹಾಮಾರಿ ಕಾರಣದಿಂದ ಈ ಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು, ಕೊರೊನದಿಂದ ಕರ್ನಾಟಕ ಚೇತರಿಕೆ ಕಂಡ ನಂತರ ಮತ್ತೆ ಲಾಲ್ ಬಾಗ್ ನಲ್ಲಿ ಈ ಪುಷ್ಪ ಪ್ರದರ್ಶನ ಆರಂಭಿಸಿರುವುದು ಬೆಂಗಳೂರಿಗರಿಗೆ ಸಂತಸ ತಂದಿದೆ.
ಸಿ ಎಂ ಬೊಮ್ಮಾಯಿ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಲ್ಲದೆ ಈ ಬಾರಿಯ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಅಪ್ಪು ಅಭಿಮಾನಿಗಳಿಗೆ ಸಂತಸದ ದಿನವಾಗಲಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಅಪ್ಪು ನಮ್ಮಿಂದ ದೂರವಾಗಿ 9 ಮಾಸಗಳು ಕಳೆದರೂ ಸಹ ಅಪ್ಪು ಅವರ ಮೇಲಿನ ಕನ್ನಡಿಗರ ಪ್ರೀತಿ ವಿಶ್ವಾಸ ಇಂದಿಗೂ ಸ್ವಲ್ಪವೂ ಮಾಸಿಲ್ಲ. ಅಪ್ಪು ಸಹ ಬದುಕಿದ್ದ ಅಷ್ಟು ದಿನ ಅಭಿಮಾನಿಗಳಿಗಾಗಲಿ, ಕನ್ನಡಿಗರಿಗಾಗಲಿ ಕಿಂಚಿತ್ತೂ ತೊಂದರೆ, ಅಪಮಾನಗಳಾಗದಂತೆ ನಡೆದುಕೊಂಡಿದ್ದಲ್ಲದೆ ಅಭಿನಯ ದುಡಿಮೆಗಾದರೆ ನನ್ನ ದುಡಿಮೆ ಸಮಾಜ ಸೇವೆಗೆ ಮೀಸಲು ಎನ್ನುವಂತೆ ಬಲಗೈ ಮಾಡಿದ್ದು ಎಡಗೈ ಗೆ ತಿಳಿಯದಂತೆ ಸಮಾಜ ಸೇವೆ ಮಾಡಿ ಕೊನೆಯುಸಿರೆಳೆದು ಸತ್ತ ನಂತರವೂ ಪರರಿಗೆ ಕಣ್ಣಾದ ಕನ್ನಡದ ಕುವರ ನಮ್ಮ ರಾಜಕುಮಾರ. ಇಂತಹ ಅಪರೂಪದ ಕನ್ನಡದ ರತ್ನಕ್ಕೆ ಕರ್ನಾಟಕ ರತ್ನ ಇಲ್ಲವೆಂದರೆ ಹೇಗೆ..!
ಹೌದು ಇದೇ ನವೆಂಬರ್ ಒಂದಕ್ಕೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಜರಾಮರ ರಾಜಕುಮಾರ ನಮ್ಮ ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡುವುದಾಗಿ ಕರ್ನಾಟಕದ ಮುಖ್ಯ ಮಂತ್ರಿ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ, ರಾಘಣ್ಣ ಕೂಡ ಉಪಸ್ಥಿತರಿದ್ದು ಅಪ್ಪುವನ್ನು ನೆನೆದು ರಾಘಣ್ಣ ಅವರು ಅಪ್ಪನ ಜೀವದಲ್ಲಿ ಬೆರೆತು ಹೋಗಿರುವ ನಮ್ಮ ಅಪ್ಪು ಪ್ರತಿಮೆಯನ್ನು ನೋಡಿ ಅವನೇ ಎದ್ದು ಬಂದಂತೆ ಭಾಸವಾಯಿತು ಎಂದು ನೆನೆದರೆ ಶಿವಣ್ಣ ಅವರು ಅಪ್ಪುವನ್ನು ನೆನೆದು ಗದ್ಗದಿತರಾದರು. ಹೀಗೆ ಪುಷ್ಪಗಳ ನಡುವೆ ಅಪ್ಪುವಿನ ಕಂಚಿನ ಪ್ರತಿಮೆ ವಿಶೇಷ ಗಮನ ಸೆಳೆಯುತ್ತಿದ್ದು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಕಳೆ ಬರಲಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.