ಕಾಫಿ ನೋಡು ಚಂದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿದವನು ಅಷ್ಟೇ ಅಲ್ಲದೆ ಹುಟ್ಟು ಹಬ್ಬದ ಹಾಡುಗಳನ್ನು ಹಾಡುತ್ತಲೇ ಕರ್ನಾಟಕದಾದ್ಯಂತ ಸಿಕ್ಕಾಪಟ್ಟೆ ಫೇಮಸ್ ಆದಂತಹ ವ್ಯಕ್ತಿ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೆ ರಾಜಕಾರಣಿಗಳ ವರೆಗೆ ಎಲ್ಲರ ಬಗ್ಗೆಯೂ ಕೂಡ ಹಾಡನ್ನು ರಚಿಸಿ ಹಾಡಿದ್ದಾರೆ ತನ್ನದೇ ಆದಂತಹ ವಿಭಿನ್ನ ಶೈಲಿಯಲ್ಲಿ ಹಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಒಂದು ಕಾಲದಲ್ಲಿ ಕಾಫಿ ನಾಡು ಚಂದು ಅಂದರೆ ಯಾರಿಗೂ ಕೂಡ ತಿಳಿಯುತ್ತಿರಲಿಲ್ಲ ಆದರೆ ಈಗ ಕಾಫಿ ನಾಡು ಚಂದು ಅಂದರೆ ಸಾಕು ಆತನ ಹಾಡೆ ಮೊದಲಿಗೆ ನೆನಪುಗೆ ಬರುತ್ತದೆ ಅಷ್ಟರ ಮಟ್ಟಿಗೆ ಇವರು ಈ ಹಾಡಿನಿಂದ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.
ಕಳೆದವಾರವಷ್ಟೇ ಆಂಕರ್ ಅನುಶ್ರೀ ಅವರನ್ನು ಭೇಟಿಯಾದರು ತದನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಹೋಗಿ ಅಲ್ಲಿ ಶಿವಣ್ಣ ಅವರನ್ನು ಕೂಡ ಭೇಟಿ ಮಾಡಿ ಬಂದರು. ನಾನು ಶಿವಣ್ಣ ಮತ್ತು ಪುನೀತ್ ಅಣ್ಣನ ಅಭಿಮಾನಿ ಅಂತ ಹೇಳಿಕೊಳ್ಳುತ್ತಿದ್ದಂತಹ ಚಂದು ಜೀವನದಲ್ಲಿ ಒಂದು ಬಾರಿಯಾದರೂ ಕೂಡ ಶಿವಣ್ಣನನ್ನು ಭೇಟಿಯಾಗಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ಆಸೆಗೆ ಅನುಶ್ರೀ ಅವರು ಪೂರಕವಾಗುವಂತೆ ಸಹಾಯ ಮಾಡಿದರು ಅಂದುಕೊಂಡಂತೆ ಶಿವಣ್ಣನವರನ್ನು ಭೇಟಿಯಾಗಿ ಮತ್ತೆ ಚಿಕ್ಕಮಗಳೂರಿಗೆ ಬಂದಂತಹ ಚಂದು ಅವರು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.
ಹೌದು ಕಾಫಿ ನಾಡು, ಚಂದು ಅವರು ಹಾಡು ಹೇಳುತ್ತಿದ್ದರು ಕೂಡ ಅವರು ಆಟೋ ಓಡಿಸುವಂತಹ ವೃತ್ತಿಯನ್ನು ಮಾಡುತ್ತಾರೆ ಪ್ರತಿನಿತ್ಯ ಆಟೋ ಓಡಿಸುವುದರ ಮೂಲಕ ಅವರು ತಮ್ಮ ಜೀವನವನ್ನು ಸಾಗಿಸಬೇಕಾಗುತ್ತದೆ. ಹಾಗಾಗಿ ಬಿಡುವಿನ ಸಮಯದಲ್ಲಿ ಮಾತ್ರ ಅವರು ಹುಟ್ಟು ಹಬ್ಬದ ಹಾಡುಗಳನ್ನು ಹಾಡುತ್ತಿದ್ದರು ಆದರೆ ಇದೀಗ ಕೆಲವು ಜನರು ಕಾಫಿನಾಡು ಚಂದು ಅವರು ಯಾವಾಗಲೂ ಕೂಡ ಹಾಡನ್ನು ಹೇಳಬೇಕು ಎಂದು ಧಮ್ಕಿ ಹಾಕಿದ್ದಾರೆ. ಹೌದು ಚಂದು ಅವರಿಗೆ ಧಮ್ಕಿ ಹಾಕಿರುವುದು ಬೇರೆ ಯಾರು ಅಲ್ಲ ಚಿಕ್ಕಮಂಗಳೂರಿನ ಜನತೆ ಚಂದು ಅವರು ಎಂದಿನಂತೆ ಆಟೋ ಬಾಡಿಗೆಗೆ ಹೋಗುತ್ತಾರೆ. ರಸ್ತೆಯ ಮಾರ್ಗ ಮಧ್ಯದಲ್ಲಿ ನಾಲ್ಕೈದು ಜನರ ಗುಂಪೊಂದು ಕಾಫೀ ನಾಡ ಚಂದು ಅವರ ಆಟೋವನ್ನು ತಡೆದು ನಿಲ್ಲಿಸಿ ಹುಟ್ಟು ಹಬ್ಬದ ಹಾಡುಗಳನ್ನು ಹೇಳುವಂತೆ ಒತ್ತಾಯ ಮಾಡುತ್ತಾರೆ. ಇದಕ್ಕೆ ಚಂದು ಅವರು ಈಗ ಸಾಧ್ಯವಿಲ್ಲ ಬಾಡಿಗೆಗೆ ಬಂದಿದ್ದೇನೆ ನಾಲ್ಕು ಗಂಟೆಯ ಮೇಲೆ ಹಾಡು ಹೇಳುತ್ತೇನೆ ಅಂತ ಹೇಳುತ್ತಾರೆ.
ಇದರಿಂದ ಕೋಪಗೊಂಡಂತಹ ನಾಲ್ಕೈದು ಜನರ ಗುಂಪೊಂದು ಈಗಲೇ ಹಾಡಬೇಕು ನೀನೇನು ವಿಐಪಿನ ನಿನಗೆ ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರಬೇಕಾ ನನ್ನಿಂದ ನೀನು ನಿನ್ನಿಂದ ನಾವಲ್ಲ ಎಂದು ಕಾಫಿ ನಾಡು ಚಂದು ಅವರಿಗೆ ಬಾಯಿಗೆ ಬಂದ ಹಾಗೆ ಹೇಳುತ್ತಾರೆ. ಇದರಿಂದ ಕೋಪಗೊಂಡ ಚಂದು ಅವರು ಈಗ ಹಾಡು ಹೇಳಲು ಸಾಧ್ಯವಿಲ್ಲ ನಾಲ್ಕು ಗಂಟೆಯ ಮೇಲೆ ಬನ್ನಿ ಅಂತ ಹೇಳಿ ಆಟೋವನ್ನು ಮುಂದೆ ಓಡಿಸಿಕೊಂಡು ಹೋಗಿ ಬಿಡುತ್ತಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಾಫಿ ನಾಡು ಚಂದು ಅವರ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಕೂಡ ಒಂದು ಕ್ಷಣ ಮರುಗಿದ್ದಾರೆ. ಮನರಂಜನೆ ಎಂಬುದು ಜೀವನದ ಒಂದು ಭಾಗ ಆದರೆ ಅದನ್ನೇ ಜೀವನಪೂರ್ತಿ ಮಾಡುವುದಕ್ಕೆ ಸಾಧ್ಯವಿಲ್ಲ ಕಾಫಿ ನಾಡು ಚಂದು ಅವರು ತಮ್ಮ ಬಿಡುವಿನ ಸಮಯದಲ್ಲಿ ಹಾಡುಗಳನ್ನು ಹಾಡುತ್ತಿದ್ದರು.
ಆದರೆ ಇದೀಗ ಅದನ್ನೇ ಅವರ ಪೂರ್ತಿ ಕೆಲಸವನ್ನಾಗಿ ಮಾಡಿಕೊಳ್ಳಿ ಅಂತ ಹೇಳಿದರೆ ಆತ ಬದುಕಲು ಸಾಗಿಸುವುದಾದರೂ ಹೇಗೆ ಎಂಬುದೇ ಇದೀಗ ಕೆಲವು ನಟ್ಟಿಗರ ಅಭಿಪ್ರಾಯವಾಗಿದೆ. ಆತನಿಗೂ ಕೂಡ ಒಂದು ಸಂಸಾರವಿದೆ ಪ್ರತಿನಿತ್ಯ ದಿನದ ಖರ್ಚಿಗೆ ಮತ್ತು ಕುಟುಂಬವನ್ನು ನಿರ್ವಹಿಸುವುದಕ್ಕೆ ಹಣದ ಅವಶ್ಯಕತೆ ಇದೆ ಯಾವಾಗಲೂ ಹಾಡನ್ನು ಹೇಳಿದ ಕೂತರೆ ಆತನಿಗೆ ದುಡ್ಡು ದೊರೆಯುವುದಾದರೂ ಹೇಗೆ ಎಂಬುದನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬೇಕು. ಈತನ ಮುಗ್ಧತೆಯನ್ನು ಬಳಸಿಕೊಂಡು ಈ ಆತನಿಗೆ ಕೆಟ್ಟ ಹೆಸರು ಬರುವಂತಹ ಕೆಲಸವನ್ನು ಇದೀಗ ಚಿಕ್ಕಮಗಳೂರಿನ ಜನರೇ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಈ ವಿಡಿಯೋ ನೋಡಿ ನಿಮಗೆ ಈತನ ವಾಸ್ತವದ ಅರಿವು ಆಗುತ್ತದೆ ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.